ಮಹಾ ಶಿವರಾತ್ರಿ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನ ಆರಾಧನೆ ಮಾಡಿದರೆ. ಮನಸ್ಸಿನ ಅಭಿಲಾಷೆಗಳು ಈಡೇರುತ್ತದೆ. ಒಮ್ಮೆ ಶಿವನ ಮೇಲೆ ನಂಬಿಕೆ ಇಟ್ಟು ಕೈ ಮುಗಿದರೆ ಸಾಕು, ಪರಶಿವ ಎಂಥಾ ಕಠಿಣ ಕಷ್ಟ ಬಂದರೂ ನಮ್ಮ ಕೈ ಬಿಡುವುದಿಲ್ಲ.
ಹಿಂದೂ ಸಂಪ್ರದಾಯದಲ್ಲಿ ದೀಪಾರಾಧನೆಗೆ ತುಂಬ ಮಹತ್ವ ಇದೆ. ಅಂದರೆ ಕತ್ತಲನ್ನು ಹೊಡೆದೋಡಿಸಿ ಬೆಳಕಿನ ಕಡೆಗೆ ನಡೆಸುವ ಸಲುವಾಗಿ ಮತ್ತು ಅದರ ಸಾಂಕೇತಿಕವಾಗಿ ದೀಪರಾಧನೆಯನ್ನು ಆಚರಣೆ ಮಾಡುವರು. ಜೋತಿಷ್ಯ ಶಾಸ್ತ್ರದಲ್ಲಿ ಸಹ ದೇವರ ಪೂಜೆಗಳಲ್ಲಿ ದೀಪಾರಾಧನೆ ಮಾಡುವುದು ಪ್ರಧಾನವಾಗಿ ಇದ್ದೆ ಇರುತ್ತದೆ. ಇದು, ಸಹ ನಮ್ಮ ಜೀವನದ ಅಂಧಕಾರವನ್ನು ಸರಿಸಿ ಬೆಳಗಿನ ಕಡೆಗೆ ನಡೆಸುವ ಒಂದು ಸನ್ಮಾರ್ಗ ಎಂಬ ನಂಬಿಕೆ ಇದೆ.
ಮಹಾಶಿವರಾತ್ರಿ ದಿನ ಪರಶಿವನಿಗೆ ಹೆಚ್ಚು ಪ್ರಿಯವಾದ ಮತ್ತು ಹೆಚ್ಚು ವೈಶಿಷ್ಟ್ಯವಾದ ದೀಪಾರಾಧನೆಗಳನ್ನು ಸಮರ್ಪಣೆ ಮಾಡುವುದರಿಂದ, ಶಿವನ ಸಂಪೂರ್ಣ ಫಲ ಮತ್ತು ಆಶೀರ್ವಾದ ಸಿದ್ಧಿಯಾಗುತ್ತದೆ. ಅದರೊಂದಿಗೆ ಅವರ ಬದುಕಿನಲ್ಲಿ ಇರುವ ಅಂಧಕಾರ ಸರಿಯುತ್ತದೆ ಮತ್ತು ಕತ್ತಲೆ ದೂರವಾಗುತ್ತದೆ. ಅವರ ಜೀವನ ಬೆಳಕಾಗುತ್ತದೆ ಎಂಬ ನಂಬಿಕೆ ಇದೆ.
ಯಾವ ರೀತಿಯ ದೀಪಾರಾಧನೆ ಶಿವನಿಗೆ ಪ್ರಿಯ ಎಂದು ನೋಡೋಣ :
ಬೆಲ್ಲದ ದೀಪಾರಾಧನೆ :-ಮಹಾರುದ್ರನಿಗೆ ಬೆಲ್ಲದ ದೀಪಾರಾಧನೆ ಮಾಡಿದರೆ ಹರನಿಗೆ ಅದು ಹೆಚ್ಚು ಇಷ್ಟ ಆಗುತ್ತದೆ. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಓಂ ಎಂದು ಬರೆಯಬೇಕು. ಅದಕ್ಕೆ, ಅರಿಶಿಣ ಕುಂಕುಮ ಹಚ್ಚಿ ಎರಡು ಹಚ್ಚು ಬೆಲ್ಲವನ್ನು ಇಟ್ಟು ಅದಕ್ಕೆ ತುಪ್ಪದ ಬತ್ತಿ ಹಾಕಿ ಬೆಲ್ಲದ ದೀಪಾರಾಧನೆ ಮಾಡಿ ಶಿವನಿಗೆ ಆರತಿ ಮಾಡಿದರೆ. ಅವರ ಬದುಕಿನಲ್ಲಿ ಕತ್ತಲೆ ಸರಿದು ಸಂಕಷ್ಟಗಳು, ತೊಂದರೆಗಳು ತಾಪತ್ರಯಗಳು ಎಲ್ಲಾ ದೂರವಾಗುತ್ತದೆ. ಶಿವನ ಆಶೀರ್ವಾದದಿಂದ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಬಂದು ನೆಲೆಸುತ್ತದೆ. ಮಾರನೇ ದಿನ ಈ ಬೆಲ್ಲವನ್ನು ಹಸುವಿಗೆ ನೀಡುವುದು ಬಹಳ ಒಳ್ಳೆಯದು.
ಅಕ್ಕಿ ಹಿಟ್ಟಿನ ದೀಪಾರಾಧನೆ :-ಈ ದೀಪಾರಾಧನೆಗೆ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಬೇಕು. ಅದಕ್ಕೆ, ಹಾಲನ್ನು ಬೆರೆಸಿ ಮಿಶ್ರಣ ಮಾಡಿ 2 ಅಥವಾ 5 ದೀಪವನ್ನು ಮಾಡಬೇಕು. ಒಂದು ತಟ್ಟೆಗೆ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿಣ ಕುಂಕುಮವನ್ನು ಇಟ್ಟು. 2 ವೀಳ್ಯದೆಲೆ ಇಡಬೇಕು. ಅದರ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ದೀಪ ಇಟ್ಟು ತುಪ್ಪ ಮತ್ತು ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡುವುದರಿಂದ, ವಿಶೇಷವಾದ ಶುಭ ಫಲಗಳು ಸಿಗುತ್ತದೆ. ಮಾರನೇ ದಿನ ಅಕ್ಕಿ ಹಿಟ್ಟಿನ ದೀಪವನ್ನು ಹಸುವಿಗೆ ತಿನ್ನಲು ಕೊಡಬೇಕು.
ತೆಂಗಿನಕಾಯಿ ದೀಪಾರಾಧನೆ :-1 ತೆಂಗಿನಕಾಯಿಯನ್ನು ತೆಗೆದುಕೊಂಡು ಸರಿಯಾಗಿ ಮಧ್ಯಕ್ಕೆ ಭಾಗ ಮಾಡಿ. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ತೆಂಗಿನಕಾಯಿಯ ಹೋಳು ಇಟ್ಟು ಅರಿಶಿಣ ಕುಂಕುಮ ಹಚ್ಚಿ ತೆಂಗಿನಕಾಯಿ ಒಳಗೆ ಎಣ್ಣೆಯನ್ನು ಹಾಕಿ ದೀಪರಾಧನೆ ಮಾಡುವುದರಿಂದ ಸಹ ಶಿವನು ಅತ್ಯಂತ ಪ್ರಸನ್ನನಾಗುವನು. ಇದನ್ನು ಮಾರನೇ ದಿನ ಪ್ರಸಾದ ಮಾಡಿ ಮನೆಯವರು ಸೇವನೆ ಮಾಡಬೇಕು.
ಮಣ್ಣಿನ ದೀಪಾರಾಧನೆ :-ಶಿವನ ದೇವಾಲಯದಲ್ಲಿ ಈ ದಿನ ಆದಷ್ಟು ಮಣ್ಣಿನ ದೀಪವನ್ನು ಬೆಳಗುವುದು ಕೂಡ ಅತ್ಯಂತ ಶುಭ. ಮಣ್ಣಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಶಿವ ದೇವಸ್ತಾನದ ಸುತ್ತ ಬೆಳಕು ಮೂಡಿಸಿದರೆ ಅವರು ಶಿವನ ಕೃಪೆಗೆ ಪಾತ್ರರಾಗುವರು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು