ಮನೆಯ ಎದುರುಗಡೆ ಕೆಲವು ವಸ್ತುಗಳಿದ್ದರೆ ಸಾಲ ತೀರಿಸಲು ಕಷ್ಟವಾಗುತ್ತದೆ ಅಥವಾ ತೀರಿಸಲು ಸಾಧ್ಯವೆ ಆಗುವುದಿಲ್ಲ. ಹಾಗಾದರೆ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಕಷ್ಟ ಇಲ್ಲದೆ ಇರುವ ಮನುಷ್ಯ ಜಗತ್ತಿನಲ್ಲಿ ಸಿಗಲು ಸಾಧ್ಯವೆ ಇಲ್ಲ ಕಷ್ಟಪಟ್ಟು ದುಡಿಯುತ್ತೇವೆ ಆದರೂ ಯಶಸ್ಸು ಸಿಗುವುದಿಲ್ಲ. ಮನೆಯಲ್ಲಿ ಹಣದ ಕೊರತೆ, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ, ಹೆಚ್ಚುತ್ತಿರುವ ಖರ್ಚು ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಂಡುಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಾವು ಎಲ್ಲಿ ವಾಸಿಸುತ್ತೇವೆ ಅನ್ನುವುದರ ಮೇಲೆ ವರ್ತಮಾನ ಹಾಗೂ ಭವಿಷ್ಯ ನಿಂತಿದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಸಾಮಾಜಿಕ ಆರ್ಥಿಕ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ವಾಸ್ತುದೋಷವಿದ್ದರೆ ಸಾಲದ ಪ್ರಮಾಣ ಹೆಚ್ಚುತ್ತಲೆ ಹೋಗುತ್ತದೆ, ಉತ್ತರದಿಕ್ಕನ್ನು ದೇವರ ಮೂಲೆ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಈ ದಿಕ್ಕಿನಲ್ಲಿ ಜಾಗ ಖಾಲಿ ಇರಬೇಕು ಮನೆಯ ಪೀಠೋಪಕರಣಗಳು ಅಥವಾ ಭಾರವಾದ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷ ಬರುತ್ತದೆ, ಭಾರವಾದ ವಸ್ತುಗಳನ್ನು ಇಟ್ಟು ಗೋಡೆಗೆ ಹಾನಿ ಮಾಡಬಾರದು.
ಮನೆಯ ಉತ್ತರ ದಿಕ್ಕಿನ ಭಾಗ ಎದುರಿಗಿನ ಭಾಗಕ್ಕಿಂತ ದೊಡ್ಡದಾಗಿದ್ದರೂ ವಾಸ್ತುದೋಷ ಉಂಟಾಗುತ್ತದೆ. ಮನೆ ನಿರ್ಮಿಸುವಾಗ ಉತ್ತರ ದಿಕ್ಕಿನ ಕಡೆ ದೊಡ್ಡದು ಮಾಡಿ ದಕ್ಷಿಣ ದಿಕ್ಕಿನಲ್ಲಿ ಖಾಲಿ ಬಿಟ್ಟರೆ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ನೈರುತ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕನ್ನು ಇಟ್ಟರೆ ಸಾಲ ಹೆಚ್ಚಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಯಂತ್ರಗಳನ್ನು ಇಟ್ಟಿದ್ದು ಅದು ಹೆಚ್ಚಿನ ಶಾಖವನ್ನು ಹೊರಸೂಸುತ್ತಿದ್ದರೆ ವ್ಯಾಪಾರ ಪಾಲುದಾರರೊಂದಿಗೆ ಕಲಹ ಉಂಟಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿ, ಪೊರಕೆ, ಶೌಚಾಲಯ ಇದ್ದರೆ ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಈ ದಿಕ್ಕಿಗೆ ಪೂಜಾ ಕೊಠಡಿ ಅಥವಾ ದ್ಯಾನದ ಕೊಠಡಿ ಇದ್ದರೆ ಮನೆಗೆ ಬಹಳ ಒಳ್ಳೆಯದು.
ಮನೆಯ ಆಗ್ನೇಯ ದಿಕ್ಕಿಗೆ ನೀರಿನ ಟ್ಯಾಂಕ್ ಇಟ್ಟರೆ ಒಳ್ಳೆಯದಾಗುವುದಿಲ್ಲ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯುತ್ತಾರೆ ನೀರು ಮತ್ತು ಬೆಂಕಿ ಶತ್ರುಗಳಾಗಿರುವುದರಿಂದ ಆಗ್ನೇಯ ದಿಕ್ಕಿಗೆ ನೀರಿನ ಟ್ಯಾಂಕ್ ಇಡಬಾರದು ಒಂದು ವೇಳೆ ಇಟ್ಟರೆ ಆರ್ಥಿಕ ಸಮಸ್ಯೆ ಕಂಡು ಬರುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಕಸದ ಬುಟ್ಟಿ ಇಡಬಾರದು ಇದರಿಂದ ತಾಯಿ ಲಕ್ಷ್ಮೀ ದೇವಿಗೆ ಕೋಪ ಬರುತ್ತದೆ ಹಾಗೂ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡಬಾರದು ಇದರಿಂದ ಲಕ್ಷ್ಮಿ ದೇವಿಗೆ ಅಗೌರವ ತೋರಿದಂತೆ ಹಾಗೂ ನೆಮ್ಮದಿ ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಸಂಜೆ ಸಮಯದಲ್ಲಿ ಹಾಲು, ಮೊಸರು ದಾನ ಮಾಡಬಾರದು ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಮನೆಯ ಬಾತ್ರೂಮ್ ನಲ್ಲಿ ಖಾಲಿ ಬಕೆಟ್ ಮಗ್ಗು ಇರಬಾರದು ಒಂದು ಬಕೆಟ್ ತುಂಬಿರಬೇಕು ಇದು ಋಣಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಮನೆಯ ಮುಖ್ಯದ್ವಾರದ ಬಳಿ ಕಸ ಇರಬಾರದು ಇದು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಗೇಟಿನ ಮುಂದೆ ಒಳಚರಂಡಿ ಇರಬಾರದು ಒಂದು ವೇಳೆ ಇದ್ದರೆ ಮನೆಯ ಸದಸ್ಯರ ಆರೋಗ್ಯದ ಸ್ಥಿತಿ ಉತ್ತಮವಾಗಿರುವುದಿಲ್ಲ. ಮನೆಯ ಗೇಟ್ ಮುಂದೆ ವಿದ್ಯುತ್ ಕಂಬ ಇರಬಾರದು ಇದು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಅಡುಗೆ ಮನೆಯಲ್ಲಿ ಹಳಸಿದ ಹಿಟ್ಟನ್ನು ಇಡಬಾರದು ಇದರಿಂದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಶನಿ ಹಾಗೂ ರಾಹುವಿಗೆ ಪ್ರತಿಕೂಲ ಉಂಟಾಗುತ್ತದೆ. ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಖರ್ಚು ಹೆಚ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಮನೆಯ ಮುಂದೆ ಈ ವಸ್ತುಗಳು ಇದ್ದರೆ ತೆಗೆದುಬಿಡಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು