WhatsApp Group Join Now
Telegram Group Join Now

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ಮೂರ್ತಿಯ ತಲೆಯ ಮೇಲಿರುವ ಕಿರೀಟ ಹಾಗೂ ಆಭರಣಗಳ ವಿಶೇಷತೆಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹಾಗಾದರೆ ರಾಮಲಲ್ಲಾ ಮೂರ್ತಿಯ ತಲೆಯ ಮೇಲಿನ ಕಿರೀಟ ಹಾಗೂ ಆಭರಣಗಳ ವಿಶೇಷತೆಯನ್ನು ಈ ಲೇಖನದಲ್ಲಿ ನೋಡೋಣ

2024 ಜನವರಿ 22ನೇ ತಾರೀಖಿನಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಯಿತು ಮೂರ್ತಿಯ ಪ್ರತಿಷ್ಠಾಪನೆಯೂ ಆಯಿತು ಪ್ರತಿಷ್ಠಾಪನೆಯಾಗಿ ಆಗಲೆ 13 ದಿನಗಳಾಗಿದೆ ಪ್ರತಿದಿನವೂ ಲಕ್ಷದ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಲೆ ಇದ್ದಾರೆ. ರಾಮಲಲ್ಲಾ ಮೂರ್ತಿಯ ತಲೆಯ ಮೇಲಿನ ಕಿರೀಟವನ್ನು ನೋಡುತ್ತಿದ್ದರೆ ಸ್ವರ್ಗವನ್ನೆ ನೋಡಿದಂತಹ ಅನುಭವವಾಗುತ್ತದೆ. ಈ ಕಿರೀಟದಿಂದ ಬಾಲರಾಮನ ಮೂರ್ತಿ ಸುಂದರವಾಗಿ ಕಾಣಿಸುತ್ತಾ ಇದೆ. ಈ ಕಿರೀಟವನ್ನು ಶುದ್ಧ ಚಿನ್ನದಿಂದ ಮಾಡಲಾಗಿದೆ, ಕಿರೀಟದಲ್ಲಿ ವಜ್ರಗಳನ್ನು ಜೋಡಿಸಲಾಗಿದೆ. ಕಿರೀಟದ ಮೇಲ್ಭಾಗದಲ್ಲಿ ಬಂಗಾರದ ಮೂರು ಗರಿಗಳನ್ನು ನೋಡಬಹುದು, ಮೂರು ಗರಿಗಳು ಸೂರ್ಯ, ನವಿಲು ಹಾಗೂ ಮೀನು ಮೂರು ಅಂಶಗಳನ್ನು ಪ್ರತಿನಿಧಿಸುತ್ತದೆ ಹಾಗೂ ಕಿರೀಟದಲ್ಲಿ ಪಚ್ಚೆ ಕಲ್ಲನ್ನು ಅಳವಡಿಸಲಾಗಿದೆ.

ಕಿರೀಟವನ್ನು ಉತ್ತರ ಪ್ರದೇಶ ರಾಜ್ಯದ ಬದಾಯೂನ್ ನಗರದ ಹರ್ಷಹೈಮಲ್ ಶಾಮಿಲಾಲ್ ಜುವೆಲ್ಲರಿ ಸಂಸ್ಥೆ ಇವರು ಕಿರೀಟ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ ಹೀಗಾಗಿ ಅಯೋಧ್ಯಾ ರಾಮ ಮಂದಿರ ಟ್ರಸ್ಟ್ ಇವರಿಗೆ ಕಿರೀಟ ಮಾಡಲು ಹೇಳಿತ್ತು. ಜುವೆಲರ್ಸ್ ನ ನಿರ್ದೇಶಕ ಅಂಕುರಾನಂದ್ ನಮಗೆ ರಾಮಲಲ್ಲಾ ಐದು ವರೆ ವರ್ಷದ ಮಗು ಎಂದು ನಮಗೆ ಟ್ರಸ್ಟ್ ನಿಂದ ಹೇಳಿದ್ದರು, ಮುಖ ಉಡುಗೆ ಆಭರಣಗಳು ಐದು ವರೆ ವರ್ಷದ ಮಗುವಿಗೆ ಹೊಂದಿಕೆ ಆಗುವಂತೆ ಇರಬೇಕು ಹಾಗೂ ರಾಮಲಲ್ಲಾ ರಾಜವಂಶದ ಮಗು ಹೀಗಾಗಿ ಕಿರೀಟ ಅದಕ್ಕೆ ತಕ್ಕಂತೆ ವಿನ್ಯಾಸಗೊಳಿಸಬೇಕು ಎಂದು ಹೇಳಲಾಗಿತ್ತು. ಬಾಲ ರಾಮನ ಕಿರೀಟವನ್ನು ಸೂರ್ಯನ ಚಿತ್ರದಿಂದ ವಿನ್ಯಾಸಗೊಳಿಸಲಾಗಿದೆ ರಾಮಲಲ್ಲಾ ಸೂರ್ಯವಂಶಿ ಎಂದು ಸೂಚಿಸುತ್ತದೆ ಹಾಗೂ ಪಚ್ಚೆ ಕಲ್ಲು ಅಧಿಕಾರದಲ್ಲಿ ಈತ ಇರುವವನು ಎಂದು ಸೂಚಿಸುತ್ತದೆ. ಮೀನು ಉತ್ತರ ಪ್ರದೇಶದ ಸಂಕೇತವಾಗಿದೆ ಹಾಗೂ ನವಿಲು ರಾಷ್ಟ್ರ ಪಕ್ಷಿಯಾಗಿದೆ. ಕಿರೀಟದ ತೂಕ ಒಂದು ಕೆಜಿ 100 ಗ್ರಾಂ. ಈ ಕಿರೀಟದಲ್ಲಿ 25 ಕ್ಯಾರೆಟ್ ಡೈಮಂಡ್ ಅಳವಡಿಸಲಾಗಿದೆ.

ಮೂರ್ತಿಗೆ ಹಾಕಿರುವ ಆಭರಣಗಳಲ್ಲಿ ಒಂದು ನೆಕ್ಲೆಸ್ ಅರ್ಧಚಂದ್ರಾಕೃತಿಯಾಗಿದ್ದು ಇದನ್ನು ಕಂಠ ಎಂದು ಕರೆಯಲಾಗುತ್ತದೆ ಇದು ಅದೃಷ್ಟವನ್ನು ಸೂಚಿಸುತ್ತದೆ ಇದು ಹೂವಿನ ವಿನ್ಯಾಸವನ್ನು ಹೊಂದಿದೆ ಸೂರ್ಯನ ಚಿತ್ರವನ್ನು ನೋಡಬಹುದಾಗಿದೆ. ಹೊಕ್ಕಳ ಮೇಲ್ಭಾಗದಲ್ಲಿ ಧರಿಸುವ ಒಂದು ಹಾರ ಇದನ್ನು ಪದಿಕ ಎಂದು ಕರೆಯುತ್ತಾರೆ, ಇದು ವಜ್ರ ಹಾಗೂ ಪಚ್ಚೆ ಕಲ್ಲುಗಳಿಂದ ತಯಾರಿಸಿದ ಐದು ಎಳೆಗಳ ತುಂಡು. ಕಂಚಿ ವಜ್ರದ ಮಾಣಿಕ್ಯಗಳು, ಮುತ್ತುಗಳು ಹಾಗೂ ಪಚ್ಚೆಗಳಿಂದ ಕೂಡಿದ ಚಿನ್ನದ ಸೊಂಟದ ಪಟ್ಟಿಯಾಗಿದೆ, ಈ ಸೊಂಟದ ಪಟ್ಟಿಯಲ್ಲಿ ಸಣ್ಣ ಗಂಟೆಗಳನ್ನು ಜೋಡಿಸಲಾಗಿದೆ. ದೇವಾಲಯದ ಅಧಿಕಾರಿಗಳ ಪ್ರಕಾರ ಈ ಗಂಟೆಗಳು ಶುದ್ಧತೆಯ ಸಂಕೇತವಾಗಿದೆ.

ರಾಮಲಲ್ಲಾ ವಿಗ್ರಹದಲ್ಲಿ ಬಂಗಾರದ ಭುಜಬಂದ್, ಕಂಗನ್ ಹಾಗೂ ಉಂಗುರಗಳನ್ನು ನೋಡಬಹುದು. ಬಾಲರಾಮನ ಕಾಲುಗಳಿಗೆ ದಪ್ಪವಾದ ಬಂಗಾರದ ಕಡಗಗಳನ್ನು ಹಾಕಲಾಗಿದೆ. ಬೆರಳುಗಳಿಗೆ ಹಾಕಲಾಗಿರುವ ಉಂಗುರಗಳು ವಜ್ರ ಹಾಗೂ ಮಾಣಿಕ್ಯಗಳಿಂದ ಕೂಡಿದೆ. ಬಾಲ ರಾಮನ ಎಡಗೈಯಲ್ಲಿ ಬಿಲ್ಲು ಇದ್ದು ಅದು ಮುತ್ತುಗಳು ಹಾಗೂ ಪಚ್ಚೆಗಳಿಂದ ಕೂಡಿದೆ. ಇನ್ನೊಂದು ಕೈಯಲ್ಲಿ ಚಿನ್ನದ ಬಾಣವಿದೆ. ಬಾಲ ರಾಮನ ವಿಗ್ರಹದ ಪ್ರಮುಖ ವಿಶೇಷತೆ ಎಂದರೆ ಹಣೆಯ ಮೇಲಿರುವ ಬೆಳ್ಳಿ ಮತ್ತು ಕೆಂಪು ತಿಲಕ ಈ ತಿಲಕವು ವಜ್ರ ಹಾಗೂ ಮಾಣಿಕ್ಯದಿಂದ ಕೂಡಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ಆಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮಚರಿತ ಮಾನಸ್ ಮತ್ತು ಅಳವಂದ ಸ್ತೋತ್ರ ಈ ಗ್ರಂಥಗಳನ್ನು ಸಂಶೋಧಿಸಿ ಅಧ್ಯಯನ ಮಾಡಿ ಬಾಲರಾಮ ವಿಗ್ರಹದ ಆಭರಣಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.

ಬಾಲರಾಮನು ಉಟ್ಟಿರುವ ಧೋತಿ ಹಾಗೂ ಕೆಂಪು ಪಂಚೆಯನ್ನು ಶುದ್ಧವಾದ ಬನರಸಿ ಬಟ್ಟೆಯಿಂದ ತಯಾರಿಸಲಾಗಿದೆ, ನವದೆಹಲಿ ಜವಳಿ ವಿನ್ಯಾಸಕ ಮನಿಷ್ ತ್ರಿಪಾಠಿಯವರು ಬಾಲ ರಾಮನ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ. ಇನ್ನೊಂದು ಮುಖ್ಯ ಆಕರ್ಷಕವೆಂದರೆ ಬಾಲರಾಮನು ಧರಿಸಿರುವ ದೊಡ್ಡ ಹಾರ ಮಾಣಿಕ್ಯ ಗಳಿಂದ ಕೂಡಿದ ಚಿನ್ನದ ಹಾರವು ವಿಜಯದ ಸಂಕೇತವಾಗಿದೆ. ಈ ಹಾರವು ವೈಷ್ಣವ ಸಂಪ್ರದಾಯದ ಸಂಕೇತವಾಗಿದೆ, ಈ ಹಾರದಲ್ಲಿ ಸುದರ್ಶನ ಚಕ್ರ, ಕಮಲ, ಶಂಖ ಮಂಗಳ ಕಳಶದ ವಿನ್ಯಾಸವನ್ನು ನೋಡಬಹುದಾಗಿದೆ. ಬಾಲರಾಮನ ವಿಗ್ರಹದ ಮೇಲಿರುವ ಕೌಸ್ತುಭ ಮಣಿ ಮಾಣಿಕ್ಯ ಹಾಗೂ ವಜ್ರಗಳಿಂದ ಬಾಲರಾಮನ ಹೃದಯವನ್ನು ಅಲಂಕರಿಸಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ರಾಮನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: