ತಾಯಿ ಲಕ್ಷ್ಮೀ ದೇವಿಯು ಸಂಪತ್ತು, ಸಮೃದ್ಧಿಯ ಅಧಿದೇವತೆ. ಮಹಾಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಬೇಕು ಎಂದು ಬಯಸುತ್ತೇವೆ. ತಾಯಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ಸುಲಭವಲ್ಲ ಆದರೆ ಕೆಲವು ವಿಧಾನಗಳನ್ನು ಅನುಸರಿಸಿದರೆ ಲಕ್ಷ್ಮೀ ದೇವಿ ಖಂಡಿತವಾಗಿ ಮನೆಗೆ ಬಂದು ನೆಲೆಸುತ್ತಾಳೆ ಹಾಗಾದರೆ ಲಕ್ಷ್ಮೀ ದೇವಿಯನ್ನು ಒಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ತಾಯಿ ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಸದಾ ಕಾಲ ಸಂಪತ್ತು ಸಮೃದ್ಧಿ ಅದೃಷ್ಟ ತುಂಬಿರುತ್ತದೆ. ತಾಯಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಏಕೆಂದರೆ ಲಕ್ಷ್ಮೀ ದೇವಿ ಚಂಚಲೆ ಯಾರು ಹೆಚ್ಚು ಭಕ್ತಿಯಿಂದ ಆರಾಧಿಸುತ್ತಾರೆ, ಹೆಚ್ಚು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ ಅವರ ಮನೆಗೆ ಹೋಗುತ್ತಾಳೆ. ತಾಯಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಸ್ವಚ್ಛತೆಯಿದ್ದಲ್ಲಿ ಲಕ್ಷ್ಮೀ ಎನ್ನುವ ಮಾತಿದೆ ಸ್ವಚ್ಛತೆ ಇಲ್ಲದೆ ಇರುವ ಜಾಗಕ್ಕೆ ಲಕ್ಷ್ಮೀದೇವಿ ಕಾಲಿಡುವುದಿಲ್ಲ. ಸ್ವಚ್ಛವಾದ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ. ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಕಸಗುಡಿಸಬಾರದು ಧಾರ್ಮಿಕ ಶಾಸ್ತ್ರಗಳಲ್ಲಿ ಮುಸ್ಸಂಜೆ ಸಮಯದಲ್ಲಿ ತಾಯಿ ಲಕ್ಷ್ಮೀ ದೇವಿ ಮನೆಗೆ ಬರುವ ಸಮಯ ಅಂತಹ ಸಮಯದಲ್ಲಿ ಕಸಗುಡಿಸಬಾರದು ಎಂದು ಹೇಳಿದೆ, ಮುಸ್ಸಂಜೆ ಸಮಯದಲ್ಲಿ ಕಸ ಗುಡಿಸಿದರೆ ಮನೆಯ ಸಂತೋಷ, ಸಮೃದ್ಧಿ, ನೆಮ್ಮದಿಯು ಹೊರ ಹೋಗುತ್ತದೆ.
ಮುಸ್ಸಂಜೆಯ ಸಮಯ ಅಥವಾ ಸೂರ್ಯಾಸ್ತ ಆಗುವ ಸಮಯದಲ್ಲಿ ನಿದ್ರೆ ಮಾಡಬಾರದು. ಹೆಚ್ಚು ಸಮಯದವರೆಗೆ ಎಂಜಲು ಪಾತ್ರೆಯನ್ನು ತೊಳೆಯದೆ ಹಾಗೆ ಬಿಡುವುದು ಮನೆಗೆ ಒಳ್ಳೆಯದಲ್ಲ, ಊಟ ತಿಂಡಿಯಾದ ತಕ್ಷಣ ಪಾತ್ರೆಗಳನ್ನು ತೊಳೆದು ಬಿಡಬೇಕು. ಎಂಜಲು ಪಾತ್ರೆಗಳನ್ನು ತೊಳೆಯದೆ ಹಾಗೆ ಗುಡ್ಡೆ ಹಾಕಿದರೆ ಶನಿಯ ಕೋಪಕ್ಕೆ ಒಳಗಾಗಬೇಕಾಗುತ್ತದೆ. ಎಂಜಲು ಪಾತ್ರೆಗಳನ್ನು ಹೆಚ್ಚು ಹೊತ್ತು ಇಡುವವರ ಮನೆಗೆ ಲಕ್ಷ್ಮೀದೇವಿ ಕಾಲಿಡುವುದಿಲ್ಲ.
ಮಹಿಳೆಯನ್ನು ಆ ಮನೆಯ ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ, ಮನೆಯಲ್ಲಿರುವ ಮಹಿಳೆಯ ಕಣ್ಣಲ್ಲಿ ನೀರು ಹಾಕಿಸಬಾರದು, ಮನೆಯ ಹೆಣ್ಣುಮಕ್ಕಳನ್ನು ಸಂತೋಷವಾಗಿರುವಂತೆ ನೋಡಿಕೊಂಡರೆ ಲಕ್ಷ್ಮೀ ದೇವಿ ಮನೆಗೆ ಆಗಮಿಸುತ್ತಾಳೆ. ಪ್ರತಿದಿನ ಬೆಳಗ್ಗೆ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಬೇಕು.
ಪ್ರತಿದಿನ ತುಳಸಿ ಗಿಡವನ್ನು ಪೂಜಿಸಿದರೆ ತಾಯಿ ಲಕ್ಷ್ಮೀ ದೇವಿಗೆ ತೃಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಶಂಖ ನಿನಾದವು ಲಕ್ಷ್ಮೀ ದೇವಿಗೆ ಪ್ರಿಯವಾಗಿದೆ. ಶಂಖನಾದ ಸಕಾರಾತ್ಮಕ ಶಕ್ತಿಯನ್ನು ರವಾನೆ ಮಾಡುತ್ತದೆ. ಸಂಜೆ ದೇವರಿಗೆ ದೀಪ ಹಚ್ಚಿದ ನಂತರ ಶಂಖನಿನಾದ ಮೊಳಗಿದರೆ ಅಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ.
ಕೆಲವು ಮನೆಗಳಲ್ಲಿ ಅವಾಚ್ಯ ಶಬ್ಧಗಳಿಂದ ಜಗಳವಾಡುತ್ತಿರುತ್ತಾರೆ ಅಂತಹ ಮನೆಗೆ ತಾಯಿ ಲಕ್ಷ್ಮೀ ದೇವಿ ಬರುವುದೆ ಇಲ್ಲ. ಮುಸ್ಸಂಜೆ ಸಮಯದಲ್ಲಿ ದೇವರಿಗೆ ದೀಪ ಹಚ್ಚುವುದು, ಪೂಜೆ ಮಾಡಬೇಕು ಈ ಸಮಯದಲ್ಲಿ ಗಂಡ ಹೆಂಡತಿ ದೈಹಿಕ ಅನ್ನೋನ್ಯತೆಗೆ ಒಳಗಾದರೆ ಮನೆಗೆ ದುರದೃಷ್ಟ ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು