ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವವಿದೆ. ಮನೆದೇವರು ಹಾಗೂ ಕುಲದೇವರಿಗೆ ಆರಾಧನೆ ಮಾಡಬೇಕು. ಹಾಗಾದರೆ ಮನೆದೇವರ ಆಶೀರ್ವಾದ ಪಡೆಯುವ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಹಿಂದೂ ಧರ್ಮದ ಸಂಸ್ಕೃತಿ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲಿ ಮನೆದೇವರು ಕುಲದೇವರು ಎಂದು ಇರುತ್ತಾರೆ. ಪ್ರತಿಯೊಬ್ಬರು ಒಮ್ಮೆಯಾದರೂ ಕುಲದೇವರ ದರ್ಶನ ಮಾಡುತ್ತಾರೆ ಹಾಗೂ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಮನೆದೇವರ ಸ್ಥಾನಕ್ಕೆ ಹೋದಾಗ ಒಂದು ಚಿಕ್ಕ ವಸ್ತುವನ್ನು ತೆಗೆದುಕೊಂಡು ಹೋದರೆ ಕುಲದೇವರನ್ನು ನಿಮ್ಮ ಜೊತೆ ಮನೆಗೆ ಬರುವಂತೆ ಮಾಡಬಹುದು. ಮನೆಯಲ್ಲಿ ಯಾವ ಪೂಜೆ ಮಾಡಿದರೂ ಮೊದಲು ಕುಲದೇವರ ಆರಾಧನೆ ಅಥವಾ ಸ್ಮರಣೆ ಮಾಡಲೇಬೇಕು ಇದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ. ಕುಲದೇವರನ್ನು ಸಂತುಷ್ಟ ಪಡಿಸಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.
ಕುಲದೇವರ ಬಳಿ ಹೋದಾಗ ಕೆಲವರು ಚಿನ್ನ, ಬೆಳ್ಳಿ, ಹೂವಿನ ಮಾಲೆ ಹಾಗೂ ಹತ್ತಿರದ ಅಂಗಡಿಗಳಿಂದ ಹೂವು, ಹಣ್ಣು ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ, ಕೆಲವರು ಸಿಹಿಯನ್ನು ಅರ್ಪಿಸುತ್ತಾರೆ ಇನ್ನೂ ಕೆಲವರು ಪೇಡೆ, ಸೀರೆ ಹಾಗೂ ಬಟ್ಟೆಯನ್ನು ನೀಡುತ್ತಾರೆ. ಕುಲದೇವರ ಆಶೀರ್ವಾದ ಪಡೆಯಲು ಜೀವನದುದ್ದಕ್ಕೂ ಯಶಸ್ಸು ಸಿಗಲು ಮನೆಯ ಸದಸ್ಯರ ಮೇಲೆ ಕುಲದೇವರ ಆಶೀರ್ವಾದ ಇರಲು ಒಂದು ಕೆಲಸ ಮಾಡಬೇಕಾಗುತ್ತದೆ. ಕೆಲವರು ದೇವಸ್ಥಾನದ ಹತ್ತಿರ ಇರುವ ತೆಂಗಿನಕಾಯಿ ಅಂಗಡಿಗಳಲ್ಲಿ ಸಿಗುವ ಪ್ರಸಾದವನ್ನು ಬುಟ್ಟಿಯಲ್ಲಿ ಖರೀದಿಸಿ ದೇವಸ್ಥಾನಕ್ಕೆ ಸಮರ್ಪಿಸುತ್ತಾರೆ ಇದರಿಂದ ಮನೆದೇವರು ಸಿಟ್ಟಾಗುತ್ತಾರೆ. ಕುಲದೇವರು ಪ್ರಸಾದ ಅರ್ಪಿಸುವಾಗ ಮನೆಯಿಂದ ಶುದ್ಧವಾಗಿ ಮಡಿಯಿಂದ ನೈವೇದ್ಯ ತಯಾರಿಸಿ ಅರ್ಪಣೆ ಮಾಡಬೇಕು ಹಾಗೂ ಊರಿನಿಂದ ಕೆಡಲಾರದ ಪದಾರ್ಥಗಳನ್ನು ತೆಗೆದುಕೊಂಡು ಹೋಗಬೇಕು. ಬಾಳೆಹಣ್ಣು, ಹೂವಿನ ಮಾಲೆಗಳನ್ನು ದೇವಸ್ಥಾನದ ಎದುರು ಕೊಂಡುಕೊಳ್ಳಬಹುದು. ಮನೆದೇವರು ದೇವಸ್ಥಾನಕ್ಕೆ ಹೋಗುವ ಮೊದಲು ಮನೆಯಲ್ಲಿ ದೇವರ ಫೋಟೋಗೆ ಕುಂಕುಮ ಹಚ್ಚಿ ಧೂಪ, ಪುಷ್ಪ ಇತ್ಯಾದಿಗಳನ್ನು ಅರ್ಪಿಸಿ ನೈವೇದ್ಯ ಮಾಡಿ ಪೂಜೆ ಮಾಡಬೇಕು. ಮನೆದೇವರನ್ನು ನೆನೆಸಿ ನಾವು ನಿಮ್ಮ ದರ್ಶನಕ್ಕೆ ಬರುತ್ತಿದ್ದೇವೆ ಆಶೀರ್ವಾದ ಮಾಡಿ ಅಲ್ಲಿಗೆ ಬರಲು ಅನುಮತಿ ನೀಡಿ ಎಂದು ಪ್ರಾರ್ಥಿಸಿಕೊಳ್ಳಬೇಕು.
ಕುಲದೇವರಿಗೆ ಪ್ರಸಾದ ತಯಾರಿಸಿಕೊಂಡು ಹೋಗಬೇಕು ಇದರಿಂದ ಮನೆದೇವರು ನನಗಾಗಿ ಮಕ್ಕಳು ಪ್ರಸಾದ ತರುತ್ತಿದ್ದಾರೆ ಎಂದು ತಿಳಿಯುತ್ತದೆ. ಅಮ್ಮ ಕೊಟ್ಟ ತಿಂಡಿಯನ್ನು ನಾವು ತಿನ್ನುವಂತೆ ನಾವು ಶುದ್ಧವಾಗಿ ಮಾಡಿದ ನೈವೇದ್ಯವನ್ನು ಮನೆದೇವರು ಸ್ವೀಕರಿಸಿ ಆಶೀರ್ವಾದ ಮಾಡುತ್ತಾರೆ. ಮನೆದೇವರು ನಮ್ಮನ್ನು ರಕ್ಷಣೆ ಮಾಡುವುದರಿಂದ ದಾರಿಯಲ್ಲಿ ಯಾವುದೆ ಅಪಘಾತ ಆಗುವುದಿಲ್ಲ. ದೇವಸ್ಥಾನಕ್ಕೆ ಹೋದ ತಕ್ಷಣ ಸ್ನಾನ ಮಾಡಿ ಅರ್ಚಕರಿಗೆ ತೆಗೆದುಕೊಂಡು ಹೋದ ಪ್ರಸಾದವನ್ನು ಕೊಟ್ಟು ಸ್ವಲ್ಪ ವಾಪಸ್ ಕೊಡಲು ಹೇಳಬೇಕು. ನಂತರ ಮೂರು ಬಾರಿ ನೀವು ನಮ್ಮ ಮನೆದೇವರು ನಿಮಗೆ ನಾವು ಈ ಪ್ರಸಾದವನ್ನು ಮನೆಯಲ್ಲಿ ತಯಾರಿಸಿ ತಂದಿದ್ದೇವೆ ದಯವಿಟ್ಟು ನಮ್ಮನ್ನು ಆಶೀರ್ವದಿಸಿ ಹಾಗೂ ಪ್ರತಿದಿನ ಈ ಪ್ರಸಾದವನ್ನು ಸೇವಿಸಲು ನಮ್ಮ ಮನೆಗೆ ಬನ್ನಿ ಎಂದು ಪ್ರಾರ್ಥಿಸಿ ಆಗ ನಾವು ದೇವಸ್ಥಾನದಿಂದ ಹೊರಡುವಾಗ ನಮ್ಮ ಜೊತೆ ಮನೆದೇವರು ಬರುತ್ತಾರೆ. ಭಕ್ತರು ಮನೆದೇವರಿಗೆ ಮನೆಯಲ್ಲಿ ಪ್ರಸಾದ ಮಾಡಿ ಅರ್ಪಿಸಿದರೆ ಒಲಿಯುವುದು ಖಚಿತ ಇಂತವರ ಮನೆಯಲ್ಲಿ ಹಣಕಾಸಿಗೆ, ನೆಮ್ಮದಿಗೆ ಕೊರತೆಯಿರುವುದಿಲ್ಲ ಹಾಗೂ ಮನೆದೇವರ ಆಶೀರ್ವಾದ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು