ಗೋವಿನ ಬಗ್ಗೆ ನಾವು ನೀವು ಕೇಳಿರುತ್ತೇವೆ ಗೋವಿನ ಪೂಜೆ ಮಾಡುತ್ತಾ ಪ್ರೀತಿಯಿಂದ ನೋಡಿಕೊಂಡರೆ ಅದು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ. ಅಂತಹ ಗೋಮಾತೆಯ ಮಹಿಮೆಯನ್ನು ಈ ಲೇಖನದಲ್ಲಿ ನೋಡೋಣ
ಒಂದು ಬಾರಿ ಶ್ರೀಕೃಷ್ಣನನ್ನು ಭೇಟಿ ಮಾಡಲು ದ್ವಾರಕಾನಗರಕ್ಕೆ ಅವರ ಮಿತ್ರನು ಬರುತ್ತಾನೆ ಇವರು ಅತ್ಯಂತ ದುಃಖಿ ಹಾಗೂ ದರಿದ್ರರು ಆಗಿದ್ದರು. ಹೀಗಾಗಿ ಅವರು ಶ್ರೀಕೃಷ್ಣನ ಬಳಿ ಬಡತನವನ್ನು ದೂರ ಮಾಡಲು ಉಪಾಯವನ್ನು ಕೇಳುತ್ತಾ ನನಗೆ ಹಣ ಹಾಗೂ ಸಂಪತ್ತು ಬೇಡ ನನ್ನ ಕುಟುಂಬವನ್ನು ನಡೆಸಲು ಉಪಾಯ ಹೇಳಿ ಎಂದು ಕೇಳುತ್ತಾರೆ ಆಗ ಶ್ರೀ ಕೃಷ್ಣನು ನನಗೆ ತಿಳಿದಿದೆ ಧನ ಸಂಪತ್ತು ಕೊಟ್ಟರು ನೀವು ಸ್ವೀಕರಿಸುವುದಿಲ್ಲ, ನಾನು ಹಣ ಕೊಡುವುದಿಲ್ಲ ಬಡತನದಿಂದ ದೂರವಾಗಲು ಉಪಾಯವನ್ನು ಹೇಳಿಕೊಡುತ್ತೇನೆ
ಈ ಮೂಲಕ ನಿನ್ನ ಬಡತನ ದೂರವಾಗುತ್ತದೆ ಎಂದು ಹೇಳುತ್ತಾರೆ. ಕಾಮಧೇನುವನ್ನು ಆರಾಧಿಸಿದರೆ ಬಡತನ ನಮ್ಮಿಂದ ದೂರವಾಗುತ್ತದೆ ಅದರ ಬಗ್ಗೆ ಒಂದು ಕಥೆಯನ್ನು ಶ್ರೀಕೃಷ್ಣ ಹೇಳುತ್ತಾರೆ. ಪೂರ್ವ ದೇಶದಲ್ಲಿ ಒಬ್ಬ ಅತ್ಯಂತ ಶ್ರೀಮಂತನಿದ್ದ ಅವನ ಹೆಸರು ಪುಷ್ಪರಾಗ ಅವನ ಹೆಂಡತಿ ಲೀಲಾವತಿ ಅವಳು ಸುಂದರಿ ಹಾಗೂ ಪತಿವ್ರತೆ ನಾರಿಯಾಗಿದ್ದಳು ಇವರಿಗೆ 5 ಮಕ್ಕಳಿದ್ದರು ಅವರು ತಂದೆಗೆ ಕೆಲಸ ಕಾರ್ಯದಲ್ಲಿ ಸಹಾಯ ಮಾಡುತ್ತಾರೆ. ಪುಷ್ಪರಾಗ ದುರಾಸೆ ಹಾಗೂ ಸ್ವಾರ್ಥಿಯಾಗಿದ್ದನು ದುರ್ಬಲ ಜನರನ್ನು ಬಳಸಿಕೊಂಡು ಹಣವನ್ನು ಕೂಡಿಸಿಕೊಂಡಿದ್ದನು ಆತ ಪುಣ್ಯಕಾರ್ಯ ಮಾಡುವುದಿಲ್ಲ ಶಾಸ್ತ್ರದ ಪ್ರಕಾರ ನಾವು ಎಷ್ಟು ಗಳಿಸುತ್ತೇವೆ ಅದರ ಒಂದು ಭಾಗ ದಾನವಾಗಿ ಕೊಡಬೇಕು ಆದರೆ ಪುಷ್ಪರಾಗ ದಾನ ಮಾಡುತ್ತಿರಲಿಲ್ಲ.
ಒಮ್ಮೆ ಶ್ರೀಮಂತ ವ್ಯಕ್ತಿಯ ಮನೆಗೆ ಕೆಲವು ಕಳ್ಳರು ಧಾಳಿ ಮಡುತ್ತಾರೆ ಆತನ ಧನ ಸಂಪತ್ತು ಒಂದೆ ಬಾರಿ ಕಳೆದುಹೋಗುತ್ತದೆ ಇದರಿಂದ ಶ್ರೀಮಂತ ವ್ಯಕ್ತಿ ನಿರಾಶನಾಗಿ ಯಾವಾಗಲೂ ಚಿಂತೆ ಮಾಡುತ್ತಾನೆ ಇದರಿಂದ ರೋಗಗಳು ಕಾಣಿಸಿಕೊಳ್ಳುತ್ತದೆ. ಹಣದ ಕೊರತೆಯಿಂದ ಮನೆ ಬಡತನದಲ್ಲಿ ನಡೆಯುತ್ತದೆ. ಹಲವು ದಿನಗಳು ಕಳೆದವು ಆ ವ್ಯಕ್ತಿಯ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ ಸಾವಿನ ಭಯ ಕಾಡುತ್ತದೆ. ಆತನ ಹೆಂಡತಿ ಆತನಿಗೆ ಸೇವೆ ಮಾಡುತ್ತಾಳೆ ಆದರೆ ರೋಗದಿಂದ ಗುಣಮುಖ ಆಗುವುದಿಲ್ಲ. ಒಮ್ಮೆ ಯಮನು ಒಬ್ಬ ಸಾಧುವಿನ ರೂಪದಲ್ಲಿ ಮನೆಯ ಮುಂದೆ ಬಂದು ಆ ವ್ಯಕ್ತಿಯ ಹೆಂಡತಿಗೆ ಅನ್ನದಾನ ಮಾಡಲು ಹೇಳುತ್ತಾರೆ. ಅವಳು ಸಾಧುವನ್ನು ಮನೆಯ ಒಳಗೆ ಕರೆದು ಅಡುಗೆ ಮನೆಯಲ್ಲಿ ಇರುವ ಸಾಮಾನಿನಿಂದ ಅಡುಗೆ ತಯಾರಿಸಿ ಸಾಧುವಿಗೆ ಕೊಡುತ್ತಾಳೆ
ಇದರಿಂದ ತೃಪ್ತನಾದ ಸಾಧು ಅವಳಿಗೆ ತಾಯಿ ಹಸಿದವನ ಹೊಟ್ಟೆ ತುಂಬಿಸಿದ್ದೀರಾ ದೊಡ್ಡದಾದ ಪುಣ್ಯವನ್ನು ಗಳಿಸಿದ್ದೀರಾ ಎನ್ನುತ್ತಾರೆ ಹಾಗೂ ನಿಮಗೆ ವರವನ್ನು ಕೊಡುವ ಆಸೆಯಾಗುತ್ತಿದೆ ಏನು ವರ ಕೊಡಬೇಕು ಎಂದು ಕೇಳುತ್ತಾರೆ ಆಗ ಅವಳು ಮಹಾತ್ಮರೆ ನಾವು ಕೆಲವು ಸಮಯದ ಹಿಂದೆ ಶ್ರೀಮಂತರಾಗಿದ್ದೆವು ಕಳ್ಳರು ಸಂಪತ್ತನ್ನು ಲೂಟಿ ಮಾಡಿದರು ಅಲ್ಲಿಂದ ದರಿದ್ರದಲ್ಲಿ ಬದುಕುತ್ತಿದ್ದೇವೆ ಜೊತೆಗೆ ಗಂಡನ ಆರೋಗ್ಯವು ಕೆಟ್ಟು ನರಳುತ್ತಿದ್ದಾರೆ ನಮ್ಮ ದುಃಖ ನಿವಾರಣೆಯಾಗುವಂತೆ ಉಪಾಯ ಹೇಳಿ ಎಂದು ಕೇಳುತ್ತಾಳೆ ಆಗ ಸಾಧು ತಾಯಿ ನಿನ್ನ ಗಂಡನ ಕಾರಣದಿಂದ ನಿಮಗೆ ಈ ಸ್ಥಿತಿ ಬಂದಿದೆ ಅವರು ದಾನ ಧರ್ಮ ಮಾಡಿಲ್ಲ, ಬೇರೆಯವರಿಗೆ ದುಃಖವನ್ನು ಕೊಟ್ಟಿದ್ದಾರೆ ಆದರೆ ನಿನಗೆ ದುಃಖವನ್ನು ದೂರ ಮಾಡಲು ಒಂದು ಉಪಾಯವನ್ನು ಹೇಳುತ್ತೇನೆ ನೀನು ಕಾಮಧೇನುವಿನ ಮೊರೆ ಹೋಗಬೇಕು. ಒಂದು ಹಸುವನ್ನು ಮನೆಗೆ ತಂದು ಸೇವೆ ಮಾಡಬೇಕು, ಪ್ರತಿದಿನ ಅದಕ್ಕೆ ಏನಾದರೂ ತಿನ್ನಿಸು ಎಂದು ಹೇಳಿ ಸಾಧು ಮಾಯವಾಗುತ್ತಾರೆ.
ಶ್ರೀಮಂತ ವ್ಯಕ್ತಿಯ ಹೆಂಡತಿಗೆ ಆಶ್ಚರ್ಯವಾಗುತ್ತದೆ ಹಾಗೂ ಸಾಧು ಹೇಳಿದ ಉಪಾಯವನ್ನು ಮಾಡಲು ಮುಂದಾಗುತ್ತಾಳೆ. ಗೋವನ್ನು ಖರೀದಿಸಲು ಅವರ ಬಳಿ ಹಣವಿರಲಿಲ್ಲ ಆದ್ದರಿಂದ ಅವಳು ಹತ್ತಿರದ ಗೋಶಾಲೆಗೆ ಪ್ರತಿದಿನ ಹೋಗಿ ಗೋವುಗಳಿಗೆ ಆಹಾರ ತಿನ್ನಿಸುತ್ತಿದ್ದಳು ಹೀಗೆ ಒಂದು ದಿನ ರಾಜರು ಕಳ್ಳರನ್ನು ಹಿಡಿದಿದ್ದಾರೆ ಎಂಬ ಸುದ್ದಿ ತಿಳಿಯುತ್ತದೆ ಆ ಕಳ್ಳರು ಶ್ರೀಮಂತ ವ್ಯಕ್ತಿಯ ಮನೆಗೆ ನುಗ್ಗಿದ ಕಳ್ಳರಾಗಿರುತ್ತಾರೆ ಗೋಮಾತೆಯ ಆಶೀರ್ವಾದದಿಂದ ಕಳ್ಳರಿಂದ ಮರಳಿ ಸಂಪತ್ತು ಶ್ರೀಮಂತ ವ್ಯಕ್ತಿಗೆ ಸಿಗುತ್ತದೆ ನಂತರ ಶ್ರೀಮಂತ ವ್ಯಕ್ತಿ ತನ್ನ ಹೆಂಡತಿಯ ಜೊತೆ ಪ್ರತಿದಿನ ಗೋಶಾಲೆಗೆ ಹೋಗುತ್ತಾರೆ ದಿನ ಕಳೆದಂತೆ ವ್ಯಕ್ತಿಯ ರೋಗ ನಿವಾರಣೆಯಾಗುತ್ತದೆ ನಂತರ ಗೋಶಾಲೆಯನ್ನು ನಿರ್ಮಿಸುತ್ತಾರೆ.
ಶ್ರೀಕೃಷ್ಣನು ಹೇಳಿದ ಕಥೆಯನ್ನು ಕೇಳಿ ಕೃಷ್ಣನ ಮಿತ್ರನಿಗೆ ಆಶ್ಚರ್ಯವಾಗುತ್ತದೆ. ಗೋಮಾತೆಯ 6 ಅಂಗ ಗೊಬ್ಬರ, ಮೂತ್ರ, ಹಾಲು , ಮೊಸರು ಹಾಗೂ ತುಪ್ಪ ಇವು ಪವಿತ್ರವಾಗಿದೆ. ಹಸುವಿನ ಗೊಬ್ಬರದಿಂದ ಬಿಲ್ವಪತ್ರೆ ಮರ ಹಾಗೂ ಕಮಲದ ಬೀಜಗಳು ಉಪ್ತತ್ತಿಯಾಗಿದೆ. ಗೋವಿನ ಮೂತ್ರ ಅನೇಕ ರೋಗಗಳ ನಿವಾರಣೆಗೆ ಕಾರಣವಾಗಿದೆ, ಗೋವಿನ ಹಾಲು ಮಕ್ಕಳಿಗೆ ಪ್ರಿಯವಾಗಿದೆ, ತುಪ್ಪದಿಂದ ಅಮೃತ ಉತ್ಪತ್ತಿಯಾಗುತ್ತದೆ. ಗೋಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ವಾಸವಾಗಿದ್ದಾರೆ. ಗೋಮಾತೆಯ ದರ್ಶನ ಮಾಡಿದರೆ ಮನುಷ್ಯನ ಪಾಪಗಳು ನಿವಾರಣೆಯಾಗುತ್ತದೆ.
ಪ್ರತಿದಿನ ಗೋವಿನ ಪೂಜೆ ಮಾಡುವುದರಿಂದ ಹಾಗೂ ಗೋವಿಗೆ ಬೆಲ್ಲ, ಕಡಲೆಯನ್ನು ಸೇವಿಸಿದರೆ ಒಳ್ಳೆಯದಾಗುತ್ತದೆ. ನಮ್ಮ ಬಳಿ ಗೋವು ಬಂದರೆ ಅದಕ್ಕೆ ಏನಾದರೂ ತಿನ್ನಲು ಕೊಡಿ ಹಾಗೆಯೆ ಕಳುಹಿಸಬೇಡಿ ಒಂದು ವೇಳೆ ಹಾಗೆ ಕಳುಹಿಸಿದರೆ ದುರ್ಭಾಗ್ಯ ಉಂಟಾಗುತ್ತದೆ. ಗೋಮಾತೆಗೆ ಹಳಸಿದ ಆಹಾರವನ್ನು ತಿನ್ನಿಸಬಾರದು. ಗೋವಿಗೆ ಬಾಳೆಹಣ್ಣನ್ನು ತಿನ್ನಿಸಿದರೆ ಮನೆಯಲ್ಲಿ ದರಿದ್ರತೆ ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು