ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣುವೇ, ಶಿವತ್ಯ ಹೃದಯಂ ವಿಷ್ಣುಹು ವಿಷ್ಣುಚ ಹೃದಯಂ ಶಿವ. ಈ ಶ್ಲೋಕದ ಅರ್ಥವೇನೆಂದರೆ ಶಿವನು ವಿಷ್ಣು ರೂಪಿಯಾಗಿದ್ದಾರೆ ವಿಷ್ಣುದೇವರು ಇವರು ಶಿವರೂಪಿಯಾಗಿದ್ದಾರೆ ಸದಾ ಶಿವನ ಹೃದಯದಲ್ಲಿ ವಿಷ್ಣು ನೆಲೆಸಿರುವಂತೆ ವಿಷ್ಣುವಿನ ಹೃದಯದಲ್ಲು ಸಹ ಶಿವನು ನೆಲೆಸಿರುತ್ತಾನೆ. ಅದರಂತೆಯೇ ಇಂದು ನಾವು ಈ ಲೇಖನದಲ್ಲಿ ಒಂದು ಅದ್ಭುತವಾದ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ಪಡೆಯಲಿದ್ದೇವೆ ಆ ಕ್ಷೇತ್ರದಲ್ಲಿ ಇರುವ ವಿಶೇಷತೆ ಏನೆಂದರೆ, ಹರಿಹರ ಸಂಗಮ ಮೂರ್ತಿ.
ನಮ್ಮ ದೇಶದಲ್ಲಿ ಅನೇಕ ಹರಿಹರ ಸಂಗಮ ಕ್ಷೇತ್ರಗಳು ಕಂಡುಬರುತ್ತವೆ. ಇದ್ದ ಕ್ಷೇತ್ರಗಳಲ್ಲಿ ವಿಷ್ಣು ಹಾಗೂ ಶಿವನ ಮೂರ್ತಿಗಳು ಬೇರೆ ಬೇರೆಯಾಗಿ ಕಂಡುಬರುತ್ತವೆ ಇನ್ನು ಕೆಳಗಡೆ ಒಂದೇ ವಿಗ್ರಹದಲ್ಲಿ ಅರ್ಧ ಭಾಗ ವಿಷ್ಣುವಿನ ರೂಪ ಮತ್ತು ಇನ್ನರ್ಧ ಭಾಗ ಶಿವನ ರೂಪವನ್ನು ಕಾಣಬಹುದು ಆದರೆ ನಾವು ಇಂದು ತಿಳಿಸಲು ಹೊರಟಿರುವ ಕ್ಷೇತ್ರದಲ್ಲಿ ಇರುವುದು ಅತಿ ಅಪರೂಪವಾದಂತಹ ವಿಗ್ರಹ ಅಂದರೆ ಈ ವಿಗ್ರಹದ ಮುಂಭಾಗದಲ್ಲಿ ಶಿವದೇವರ ಆಕೃತಿ ಇದ್ದರೆ ಅದರ ಹಿಂಭಾಗಕ್ಕೆ ಹೊಂದಿಕೊಂಡು ವಿಷ್ಣು ದೇವರ ರಚನೆ ಇದೆ
ಇಂತಹ ಅತಿ ಅಪರೂಪವಾದ ಕ್ಷೇತ್ರ ಯಾವುದೆಂದರೆ ನಮ್ಮ ನೆರೆಯ ಆಂಧ್ರಪ್ರದೇಶದ ತಿರುಪತಿ ಪಟ್ಟಣದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಹಾಗೂ ತಿರುಪತಿ ಬಾಲಾಜಿ ದೇವಾಲಯದಿಂದ ಸುಮಾರು 29 ಕಿಲೋಮೀಟರ್ ದೂರದಲ್ಲಿರುವ ಮುಕ್ಕೋಟಿ ಎಂಬ ಚಿಕ್ಕ ಪಟ್ಟಣದಲ್ಲಿ ಈ ದೇವಾಲಯವು ಕಂಡುಬರುತ್ತದೆ ಈ ಕ್ಷೇತ್ರದ ಹೆಸರು ಅಗಸ್ತೇಶ್ವರ ಕ್ಷೇತ್ರ ಎಂಬುದಾಗಿದ್ದು ಈ ಕ್ಷೇತ್ರವು ತಿರುಪತಿ ಬಳಿಯ ಸುವರ್ಣಮುಖಿ, ಭೀಮ, ಹಾಗೂ ಕಲ್ಯಾಣಿ ನದಿಗಳ ಸಂಗಮ ಸ್ಥಳದಲ್ಲಿ ಕಂಡುಬರುತ್ತದೆ.
ಈ ಸ್ಥಳದ ಪೌರಾಣಿಕ ಹಿನ್ನೆಲೆಯನ್ನು ನೋಡುವುದಾದರೆ ಹಿಂದೆ ಸಂತರಾದಂತಹ ಅಗಸ್ತ್ಯ ಮುನಿಗಳು ಶಿವ ಪರಮಾತ್ಮರ ಆಜ್ಞೆಯಂತೆ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಪ್ರಯಾಣವನ್ನ ಬೆಳೆಸುತ್ತಾರೆ ಹೀಗೆ ಮಹಾಮನಿಗಳು ದಕ್ಷಿಣ ಭಾರತದಲ್ಲಿ ಅನೇಕ ಕಡೆ ಶಿವ ದೇವಾಲಯಗಳನ್ನು ನಿರ್ಮಿಸುತ್ತಾರೆ ಹೀಗೆ ನೆಲೆಗೊಂಡಂತಹ ಎಲ್ಲಾ ದೇವಸ್ಥಾನಗಳು ಅಗಸ್ತೇಶ್ವರ ದೇವಸ್ಥಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಹೀಗೆ ಮುನಿಗಳು ಇಂತಹ ನದಿಗಳ ಸಂಗಮ ಪ್ರದೇಶವನ್ನ ಕಂಡು ಇದೇ ಸ್ಥಳದಲ್ಲಿ ಆಶ್ರಮವನ್ನು ನಿರ್ಮಿಸಿ ಕೆಲಕಾಲ ಅಲ್ಲಿ ವಾಸ ಮಾಡುತ್ತಾರೆ ಒಂದು ದಿನ ಅಗಸ್ತ್ಯ ಮಹರ್ಷಿಗಳು ಸುವರ್ಣಮುಖಿ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಒಂದು ಶಿವಲಿಂಗ ಅವರ ಕಣ್ಣಿಗೆ ಕಾಣಿಸುತ್ತದೆ ಅವರು ಅದನ್ನು ನದಿಯ ತೀರದಲ್ಲಿ ಸ್ಥಾಪಿಸಿ ಪೂಜಿಸಲು ಪ್ರಾರಂಭಿಸುತ್ತಾರೆ
ಈ ಶಿವಲಿಂಗದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ನೆರದಿದ್ದರಂತೆ ಆದ್ದರಿಂದಲೇ ಈ ಸ್ಥಳಕ್ಕೆ ಮುಕ್ಕೋಟಿ ಎಂಬ ಹೆಸರು ಬಂದಿರುವುದಾಗಿ ಹೇಳುತ್ತಾರೆ. ಹಾಗೆಯೇ ಕಲಿಯುಗದ ಆರಾಧ್ಯ ದೈವ ಶ್ರೀನಿವಾಸ ಇಲ್ಲಿಗೆ ಸಮೀಪವಿರುವ ನಾರಾಯಣ ಬಲದಲ್ಲಿಯೇ ಆಕಾಶ ರಾಜನ ಪುತ್ರಿ ಪದ್ಮಾವತಿ ದೇವಿಯನ್ನು ವಿವಾಹವಾಗುತ್ತಾರೆ ಮದುವೆಯಾದ ನಂತರ ತಿರುಮಲಕ್ಕೆ ಹಿಂದಿರುಗುವ ದಾರಿಯಲ್ಲಿ ಮುಕ್ಕೋಟಿಗೆ ಆಗಮಿಸಿ ಅಗತ್ಯ ಮುನಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ ಹೀಗೆ ಅಗತ್ಯರ ಆಮಂತ್ರಣದ ಮೇರೆಗೆ ಅವರ ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ವಾಸವಿದ್ದು ಅಗಸ್ತ್ಯರ ಆತಿತ್ಯವನ್ನು ಈ ದಂಪತಿಗಳು ಸ್ವೀಕರಿಸಿದರು ಎಂದು ಪುರಾಣ ನಮಗೆ ತಿಳಿಸುತ್ತದೆ ಹೀಗೆ ಶ್ರೀನಿವಾಸರು ಹೊರಡುವ ಮುನ್ನ ಸುವರ್ಣ ನದಿಯ ತಟದಲ್ಲಿರುವ ಕಲ್ಲಿನ ಮೇಲೆ ತಮ್ಮ ಪಾದದ ಗುರುತನ್ನ ಮೂಡಿಸುತ್ತಾರೆ.
ಈ ದೇವಸ್ಥಾನದ ಆವರಣದಲ್ಲಿ ಐದು ವಿಶೇಷ ವೃಕ್ಷಗಳನ್ನು ನಾವು ಕಾಣಬಹುದು ಈ ವೃಕ್ಷಗಳಿಗೆ ವಿವಿಧ ಹರಕೆಯನ್ನು ಹೊತ್ತುಕೊಂಡು ಪೂಜೆ ಸಲ್ಲಿಸಿದರೆ ಅದು ಈಡೇರುತ್ತದೆ ಎಂಬ ಪ್ರತೀತಿ ಕೂಡ ಇದೆ. ವೆಂಕಟೇಶ್ವರನ ಪಾದದ ಪಕ್ಕದಲ್ಲಿಯೇ ಈ ಒಂದು ವಿಶೇಷವಾದ ಮೂರ್ತಿಯನ್ನು ಕೆತ್ತಲಾಗಿದೆ ಹೀಗೆ ಹರಿಹರ ಸಂಗಮದ ಈ ಮೂರ್ತಿಯನ್ನು ನೀವು ನೋಡಲು ಬಯಸಿದರೆ ಮುಕ್ಕೋಟಿಗೆ ಒಮ್ಮೆ ಭೇಟಿ ನೀಡಿ ದೇವರ ಆಶೀರ್ವಾದಕ್ಕೆ ಪಾತ್ರರಾಗಿರಿ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519