Sri Dharmasthala Temple Story: ಧರ್ಮ ನೆಲೆಸಿರುವ ಸ್ಥಳವೆ ಧರ್ಮಸ್ಥಳ ಎಂದು ಹೇಳುತ್ತಾರೆ. ಇಲ್ಲಿ ಸಾಕ್ಷಾತ್ ಪರಶಿವನೆ ನೆಲೆಸಿದ್ದಾನೆಂದು ಭಕ್ತರು ಹೇಳುತ್ತಾರೆ. ಇಂತಹ ಪುಣ್ಯಕ್ಷೇತ್ರ ಧರ್ಮಸ್ಥಳದ ಗರ್ಭಗುಡಿಯ ರಹಸ್ಯ ಹಾಗೂ ವಾದಿರಾಜ ಸ್ವಾಮಿಗಳ ಭೇಟಿ ಮೊದಲಾದ ರಹಸ್ಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ
ಧರ್ಮಸ್ಥಳದ ಮಂಜುನಾಥನನ್ನು ದರ್ಶನ ಮಾಡಿದರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಶಿವನನ್ನು ಅತ್ಯಂತ ಧಾರ್ಮಿಕವಾಗಿ ಪೂಜಿಸುವ ಸ್ಥಳ ಇದಾಗಿದೆ ಜೈನ ಭಟ್ಟ ಸಮುದಾಯವು ಈ ದೇವಸ್ಥಾನವನ್ನು ಆರಂಭಿಸಿದ್ದು ಈಗ ಹೆಗ್ಗಡೆ ಕುಟುಂಬವು ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಧರ್ಮಸ್ಥಳದ ದೇವಾಲಯ 800 ವರ್ಷಗಳ ಇತಿಹಾಸವನ್ನು ಹೊಂದಿದೆ.
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಇತಿಹಾಸದ ಪ್ರಕಾರ ಇಲ್ಲಿರುವ ನಲ್ಲಾಡಿ ಬೀಡಿನಲ್ಲಿ ಜೈನದಂಪತಿಗಳಿದ್ದರು ಇವರು ಈ ಪ್ರದೇಶದ ನಾಯಕರು ಹಾಗೂ ದಾನಿಗಳಾಗಿದ್ದರು. ಧರ್ಮದೇವತೆಗಳು ಇಲ್ಲಿಗೆ ಭೇಟಿ ನೀಡಿ ದಂಪತಿಗಳನ್ನು ಹರಸಿ ದೇವಸ್ಥಾನವನ್ನು ನಿರ್ಮಿಸುವಂತೆ ಆಜ್ಞೆ ಮಾಡುತ್ತಾರೆ ಇದೆ ಕಾರಣದಿಂದ ಈ ದೇವಸ್ಥಾನದಲ್ಲಿ ಆನೆಯೊಂದನ್ನು ಸಾಕಲಾಗುತ್ತದೆ.
ದೇವರಿಲ್ಲದ ಕಾರಣ ಪೂಜೆ ಮಾಡಲಾಗದೆ ದೇವತೆಗಳ ಆದೇಶದಂತೆ ಅವರ ದಾಸನಾದ ಅಣ್ಣಪ್ಪ ದೇವರು ಕದ್ರಿಯಿಂದ ಲಿಂಗವನ್ನು ಧರ್ಮಸ್ಥಳಕ್ಕೆ ತಂದು ಪ್ರತಿಷ್ಠಾಪಿಸುತ್ತಾನೆ. ದೇವರಾಜ ಹೆಗ್ಗಡೆಯವರ ಕಾಲದಲ್ಲಿ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ವಾದಿರಾಜ ಸ್ವಾಮಿಗಳು ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ ಆಗ ದೇವರಾಜ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಬರುವಂತೆ ವಾದಿರಾಜ ಸ್ವಾಮಿಗಳಲ್ಲಿ ವಿನಂತಿಸಿಕೊಳ್ಳುತ್ತಾರೆ ವಾದಿರಾಜರು ಧರ್ಮಸ್ಥಳಕ್ಕೆ ಬರುತ್ತಾರೆ ಶಿವಲಿಂಗದ ಪ್ರಸಾದವನ್ನು ಅವರಿಗೆ ಕೊಡಲು ಮುಂದಾದಾಗ ವಾದಿರಾಜರು ನಿರಾಕರಿಸುತ್ತಾರೆ ಕಾರಣ ರಾಜರು ಗರ್ಭಗುಡಿಯಲ್ಲಿ ಶಿವಲಿಂಗವನ್ನು ನೋಡಿ ವಿಚಲಿತರಾಗುತ್ತಾರೆ ವಾದಿರಾಜರು ಶಿವಲಿಂಗವನ್ನು ಸರಿಯಾಗಿ ಪ್ರತಿಷ್ಠಾಪನೆ ಮಾಡಲಿಲ್ಲ ಎಂದು ಹೇಳುತ್ತಾರೆ ಆಗ ದೇವರಾಜ ಹೆಗ್ಗಡೆಯವರು ವಾದಿರಾಜರ ಬಳಿ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಲು ಬೇಡಿಕೊಳ್ಳುತ್ತಾರೆ.
Sri Dharmasthala Temple Story
ವಾದಿರಾಜರು ತಮ್ಮ ಯೋಗ ಶಕ್ತಿಯ ಮೂಲಕ ಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ ಜೊತೆಗೆ ಕುಡುಮ ಎಂಬ ಹೆಸರಿದ್ದ ಧರ್ಮಸ್ಥಳಕ್ಕೆ ಧರ್ಮಸ್ಥಳ ಎಂಬ ಹೆಸರನ್ನು ಕೊಡುತ್ತಾರೆ ಈ ಕ್ಷೇತ್ರದಲ್ಲಿ ದಾನ ಧರ್ಮವನ್ನು ಆರಾಧಿಸಬೇಕೆಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ ನಂತರದಲ್ಲಿ ಲಿಂಗಕ್ಕೆ ಮಂಜುನಾಥ ಎಂಬ ಹೆಸರು ಬರುತ್ತದೆ. ಅಲ್ಲಿಂದ ಹೆಗ್ಗಡೆ ಮನೆತನದವರು ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡು ಬರುತ್ತಿದ್ದಾರೆ ವೀರೇಂದ್ರ ಹೆಗ್ಗಡೆ ಅವರು 1968 ರಿಂದ ಧರ್ಮದರ್ಶಿಗಳಾಗಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ಬ್ರಿಟಿಷರ ಕಾಲದಲ್ಲಿ ಅವರು ಭೇಟಿ ನೀಡಿ ಮಂಜುನಾಥನ ದರ್ಶನ ಪಡೆಯುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯ ಶೈವ ದೇವಾಲಯವಾಗಿದ್ದು ಬ್ರಾಹ್ಮಣರು ಇಲ್ಲಿನ ಅರ್ಚಕರು, ಜೈನ ಸಂಪ್ರದಾಯದವರಾದ ಹೆಗ್ಗಡೆಯವರು ಇಲ್ಲಿಯ ಧರ್ಮಾಧಿಕಾರಿಗಳು ಈ ದೇವಾಲಯದ ಭಕ್ತರಲ್ಲಿ ಹಿಂದುಗಳು, ಮುಸ್ಲಿಮರು, ಕ್ರೈಸ್ತರು ಇದ್ದಾರೆ ಎಲ್ಲ ಜಾತಿ ಮತಸ್ತರಿಗೆ ಈ ದೇವಾಲಯದಲ್ಲಿ ಪ್ರವೇಶವಿದೆ. ಧರ್ಮಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ವಿವಿಧ ಮತಗಳ ಸಾಮೂಹಿಕ ವಿವಾಹ ನಡೆಯುತ್ತದೆ.
ಈ ದೇವಾಲಯದಲ್ಲಿ ನಾಗರಿಕ ಜಗಳಗಳು ತೀರ್ಮಾನವಾಗುತ್ತದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದ ಮಂಜುನಾಥ ದೇವಾಲಯದಲ್ಲಿ ದೀಪೋತ್ಸವ ನಡೆಯುತ್ತದೆ ಅಲ್ಲದೆ ಪ್ರತಿ ವರ್ಷ ಇಲ್ಲಿ ಜಾತ್ರೆ, ರಥೋತ್ಸವ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆಯಬೇಕು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮಂಜುನಾಥ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು