ರಾಹು ಕೇತುವಿನ ಪರಿವರ್ತನೆಯಿಂದ ಮೇಷ ರಾಶಿಯವರ ಮೇಲೆ ಉಂಟಾಗುವ ಪರಿಣಾಮಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣರಾಹು ಕೇತುವಿನ ಪರಿವರ್ತನೆಯಿಂದ ಮೇಷ.
ಇದೇ ಅಕ್ಟೋಬರ್ 30ನೇ ತಾರೀಕಿನಂದು ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಹಾಗೂ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾರೆ ಹೀಗೆ ರಾಹು ಕೇತುಗಳು 561 ದಿನ ಅದೇ ರಾಶಿಯಲ್ಲಿ ಸ್ಥಿತವಾಗಿ ಇರುತ್ತಾರೆ ಇದರಿಂದ ಮೇಷ ರಾಶಿಯವರಿಗೆ ಕಂಡು ಬರುವ ಫಲಗಳನ್ನು ನೋಡುವುದಾದರೆ ರಾಹುವು 12ನೇ ಮನೆಯಲ್ಲಿ ಇರುವುದರಿಂದ ಸ್ವಲ್ಪ ಪಾಪ ಕರ್ಮಗಳು ನಿಮ್ಮನ್ನ ಹುಡುಕಿಕೊಂಡು ಬರುತ್ತದೆ
ನಿಮ್ಮ ಕೈಯಲ್ಲಿ ಕೆಟ್ಟ ಕಾರ್ಯಗಳನ್ನ ಮಾಡಿಸುವಂತದ್ದು ಅಥವಾ ಹಣವನ್ನು ವ್ಯಯ ಮಾಡಿಸುವಂತದ್ದು ಹೀಗೆ ಕೆಲವೊಂದು ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಜೊತೆಗೆ ನೀರಿನಿಂದ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಜೊತೆಗೆ ಕೇತುವಿನ ಸ್ಥಾನ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಈ ಸಮಯದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ನಿಮ್ಮ ಶತ್ರುಗಳನ್ನು ಪಲಾಯನ ಮಾಡಿ ಮಿತ್ರತ್ವಕ್ಕೆ ಕರೆದುಕೊಂಡು ಬರುತ್ತೀರಿ ಅದರಿಂದ ಕೇತು ನಿಮಗೆ ಒಳ್ಳೆಯ ಫಲಗಳನ್ನು ತರುತ್ತಾನೆ ಎಂದು ಹೇಳಬಹುದು.
ಹಾಗೆಯೇ ಈ ಸಮಯದಲ್ಲಿ ನಿಮ್ಮ ರಾಶಿಯವರಿಗೆ ರಾಹುವಿನಿಂದ ಯೋಗ ಹಾಗೂ ಕೇತುವಿನಿಂದ ಮೋಕ್ಷ ದೊರೆಯುತ್ತದೆ. ಈ ಸಮಯದಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಯೋಚನೆ ಮಾಡಬೇಕು ಏಕೆಂದರೆ ರಾಹು ನಿಮ್ಮನ್ನು ಕೆಟ್ಟ ದಾರಿಯಲ್ಲಿ ನಡೆಯಲು ಪ್ರಚೋದನೆ ಮಾಡಿದರೆ ಕೇತು ನೀವು ಕೆಟ್ಟ ದಾರಿಗೆ ಹೋಗದಂತೆ ಎಚ್ಚರಿಕೆಯನ್ನು ನೀಡುತ್ತಾನೆ ಆದ್ದರಿಂದ ನೀವು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಳ್ಳಬೇಕು. ಕೇತು ನಿಮ್ಮ ಶತ್ರುಗಳನ್ನ ನಿರ್ಮೂಲನೆ ಮಾಡಿ ಮಿತ್ರರನ್ನ ಹೆಚ್ಚಿಗೆ ಮಾಡುತ್ತಾನೆ ಅದರಿಂದ ನ್ಯಾಯಯುತವಾಗಿ ದುಡಿದು ಸಂಪಾದಿಸಿ ಧೈರ್ಯದಿಂದ ಜೀವನ ನಡೆಸಬೇಕು.
ಇನ್ನು ದಾಂಪತ್ಯ ಜೀವನದಲ್ಲಿ ತುಂಬಾ ಚೆನ್ನಾಗಿ ಇರುತ್ತೀರಿ ವಿದ್ಯಾರ್ಥಿಗಳಿಗೂ ಸಹ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ ವಿದೇಶದಲ್ಲಿ ಅಭ್ಯಾಸ ಮಾಡುತ್ತಿರುವವರಿಗೆ, ಹೈನುಗಾರಿಕೆ ಮಾಡುವವರಿಗೆ, ಹೂವು ಹಣ್ಣು ತರಕಾರಿ ಇತ್ಯಾದಿಗಳ ಮಾರಾಟಗಾರರಿಗೆ ಸಹ ಈ ಸಮಯ ತುಂಬಾ ಉತ್ತಮವಾಗಿರುತ್ತದೆ. ಜೊತೆಗೆ ಪತ್ರಿಕೋದ್ಯಮದ ಫೀಲ್ಡ್ ನಲ್ಲಿ ಇರುವಂತವರಿಗೆ ಈ ಸಮಯ ತುಂಬಾ ಉತ್ತಮವಾಗಿರುತ್ತದೆ.
ಮೇಷ ರಾಶಿಯವರು ಪ್ರತಿ ದಿನ ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರವನ್ನು ಮಾಡಿ ದೇಹಕ್ಕೆ ಸರಿಯಾದ ವ್ಯಾಯಾಮವನ್ನು ಕೊಡಿ ಇದರಿಂದ ನಿಮ್ಮ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು ಒಟ್ಟಾರೆಯಾಗಿ ಹೇಳುವುದಾದರೆ ರಾಹುಗೆದುವಿನ ದಾನ ಬದಲಾವಣೆಯಿಂದ ಮೇಷ ರಾಶಿಯವರಿಗೆ ಮಿಶ್ರಫಲ ಕಂಡು ಬರಲಿದ್ದು ಹೆಚ್ಚಿನ ಯೋಜನೆ ಮಾಡುವ ಅವಶ್ಯಕತೆ ಇಲ್ಲ ಎಲ್ಲವೂ ಸಮಯಕ್ಕೆ ತಕ್ಕಂತೆ ಸರಿ ಹೋಗುತ್ತದೆ.