WhatsApp Group Join Now
Telegram Group Join Now

ಇದೇ ಅಕ್ಟೋಬರ್ 30ನೇ ತಾರೀಕು ರಾಹುವಿನ ಜೊತೆಗೆ ಕೇತು ಕೂಡ ಪರಿವರ್ತನೆ ಹೊಂದುತ್ತಾನೆ ಇದರಿಂದ ಪಶ್ಚಿಕ ರಾಶಿಯವರ ಭಾಗ್ಯದ ಬಾಗಿಲು ತೆರೆಯುತ್ತದೆ ಅಷ್ಟೇ ಅಲ್ಲದೆ ಭರ್ಜರಿ ಲಾಭವನ್ನು ನೀವು ಪಡೆಯುತ್ತೀರಿ. ಬ್ಯಾಂಕಿಂಗ್ ಇನ್ಶೂರೆನ್ಸ್ ಇನ್ವೆಸ್ಟ್ಮೆಂಟ್ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತುಂಬಾ ಒಳ್ಳೆಯ ಫಲಗಳು ಕಂಡು ಬರಲಿವೆ. ಕೇತು ಪರಿವರ್ತನೆ ಆಗುತ್ತಿರುವ ಮೀನ ರಾಶಿಯು ನಿಮ್ಮಿಂದ 11ನೇ ಮನೆಯಲ್ಲಿದ್ದು ಇದು ಲಾಭದಾಯಕವಾಗಿದೆ ಇದು ನೇರವಾದ ದಾರಿ ಅಥವಾ ಅಡ್ಡ ದಾರಿಯಲ್ಲೂ ಸಹ ದುಡ್ಡನ್ನ ತಂದು ಕೊಡಬಹುದು ಒಟ್ಟಾರೆಯಾಗಿ ಧನ ಲಾಭ ಆಗುವುದಂತೂ ಖಂಡಿತ.

ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಅಥವಾ ಶೇರು ಮಾರುಕಟ್ಟೆಗಳಲ್ಲಿ ಲಾಭ ರಿಯಲ್ ಎಸ್ಟೇಟ್ ವ್ಯವಹಾರ ಹೀಗೆ ಅಂದಾಜು ಮಾಡದೆ ಕೆಲವೊಂದು ಫೀಲ್ಡ್ ಗಳಲ್ಲಿ ಲಾಭ ಕಂಡು ಬರುತ್ತದೆ ಹೀಗೆ ಕೇತುವ 11ನೇ ಮನೆಯಲ್ಲಿ ಇರುವಂತಹ ಸಂದರ್ಭದಲ್ಲಿ ಜಾಗ ಮನೆ ಇತ್ಯಾದಿಗಳ ಖರೀದಿಗೂ ಕಾರಣವಾಗಬಹುದು ಅಥವಾ ಮನೆ ನಿರ್ಮಾಣದ ಕೆಲಸ ಕೂಡ ಪ್ರಾರಂಭಿಸಬಹುದು. ಇನ್ನೂ ರೈತರಿಗೆ ಹಾಗೂ ಕೃಷಿಗೆ ಸಂಬಂಧಪಟ್ಟ ಕೆಲವು ವಿಚಾರಗಳಲ್ಲಿ ಲಾಭ ದೊರೆಯುವ ಸಾಧ್ಯತೆ ಕೂಡ ಇದೆ. ಅಷ್ಟೇ ಅಲ್ಲದೆ ಅಡ್ಡ ದಾರಿಯ ಮೂಲಕವೂ ಸಹ ಕೆಲವರು ಹಣವನ್ನು ಗಳಿಸಬಹುದು.

ಇನ್ನು ನಿಮಗೆ ಅನಾರೋಗ್ಯ ಕಾಡುತ್ತಿದ್ದಲ್ಲಿ ಅದು ಶೀಘ್ರವಾಗಿ ಕಡಿಮೆಯಾಗುತ್ತದೆ ಹಾಗೆ ನಿಮ್ಮ ಕುಟುಂಬದಲ್ಲಿ ನಿಮಗೆ ಬೇಕಾದವರಿಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ಹಾಗೆ ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನಿಮಗೆ ಬಹುಮಾನಗಳು ದೊರೆಯಬಹುದು ಅಷ್ಟೇ ಅಲ್ಲದೆ ನೀವು ತುಂಬಾ ದಿನಗಳಿಂದ ಯಾವುದಾದರೂ ಜಾಗಕ್ಕೆ ಹೋಗಬೇಕೆಂದು ಬಯಸಿದ್ದಲ್ಲಿ ಅದು ಕೂಡ ಈಡೇರುವ ಸಾಧ್ಯತೆ ಇದೆ ಮನೆ ಮಂದಿಯ ಜೊತೆ ಪ್ರಯಾಣ ಬೆಳೆಸುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ನಿಮ್ಮ ಬಯಕೆಗಳನ್ನ ಈಡೇರಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ನಿಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಲು ಒಳ್ಳೆಯ ಕೆಲಸಗಳನ್ನು ಮಾಡುವಲ್ಲಿ ನೀವು ಮುಂದುವರೆಯುತ್ತೀರಿ.

ನಿಮಗೆ ಅರ್ಥಾಶ್ರಮ ಶನಿ ನಡೆಯುತ್ತಿರುವುದರಿಂದ ಕೆಲವರು ನಿಮ್ಮ ನೆಮ್ಮದಿಗೆ ಭಂಗ ತರಲು ಪ್ರಯತ್ನಿಸುತ್ತಿರುತ್ತಾರೆ ಅಂತಹ ಸಮಸ್ಯೆಗಳನ್ನ ಬಗೆಹರಿಸಲು ನಿಮಗೆ ಕೇತು ಸಹಾಯ ಮಾಡುತ್ತಾನೆ. ಇಷ್ಟೆಲ್ಲ ಲಾಭ ಇದೆ ಎಂದು ಜಂಭಪಡುವ ಗೋಜಿಗೆ ಹೋಗಬಾರದು ದೇವರ ಆರಾಧನೆಯಲ್ಲಿ ತೊಡಗಿ ದಾನ ಧರ್ಮ ಮಾಡುವುದರಿಂದ ಕೇತುವಿನ ಪೂರ್ಣ ಕೃಪೆಗೆ ಪಾತ್ರರಾಗಬಹುದು.

ಇದನ್ನೂ ಓದಿ Cancer Sign In Kannada: ಕಟಕ ರಾಶಿಯವರಿಗೆ ಕೇತು ಫಲ ಹೇಗಿದೆ ಗೊತ್ತಾ, ಶ್ರೀಮಂತಿಕೆಯ ಜೀವನ ನಿಮ್ಮದಾಗುತ್ತೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: