Actress Darshan Kaveri Strike In Mandya: ಸ್ನೇಹಿತರೆ, ಕರ್ನಾಟಕದಾದ್ಯಂತ ಕಾವೇರಿ ಹೋರಾಟ (Kauvery Dispute) ದಿನೇ ದಿನೇ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಕಾವೇರಿಯನ್ನು ತಮಿಳುನಾಡಿಗೆ ಬಿಟ್ಟುಕೊಡುವ ಮಾತೇ ಇಲ್ಲ ಎಂದು ರೈತರು, ಕನ್ನಡಪರ ಹೋರಾಟಗಾರರು, ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ವ್ಯಕ್ತಿಗಳೆಲ್ಲರೂ ಹೋರಾಟ ನಡೆಸುತ್ತಿದ್ದಾರೆ.
ನಾಳೆ ಅಂದರೆ ಸೆಪ್ಟೆಂಬರ್ 26 ನೇ ತಾರೀಕು ಕಾವೇರಿ ಗೋಸ್ಕರ ಬಂದ್ ಮಾಡುವ ಮೂಲಕ ತಮ್ಮ ಹೋರಾಟದ ಬಿಸಿಯನ್ನು ಸುಪ್ರೀಂ ಕೋರ್ಟ್(Supreme Court) ಗೆ ಮುಟ್ಟಿಸುವ ಪ್ರಯತ್ನಕ್ಕೂ ಸಿದ್ಧರಾಗಿದ್ದಾರೆ. ಹೀಗಿರುವಾಗ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕಾವೇರಿಗಾಗಿ ದನಿಯ ಎತ್ತುತ್ತಾ ಬಂದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ” ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಾ ಬಂದಿದೆ.
ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟೂ ಬೇಗ ನ್ಯಾಯ ಸಿಗುವಂತಾಗಲಿ” ಎಂದು ಪೋಸ್ಟ್ ಮೂಲಕ ಕೇಳಿಕೊಂಡಿದ್ದರು. ಆದರೆ ಸುಪ್ರೀಂ ಕೋರ್ಟ್ ನಮ್ಮೆಲ್ಲರ ವಿರೋಧವಾಗಿ ತೀರ್ಪನ್ನು ನೀಡಿದ ಬೆನ್ನಲ್ಲೇ ಸಾಕಷ್ಟು ಸಂಘಟನೆಗಳು ಹಾಗೂ ಹೋರಾಟಗಾರರು ರಸ್ತೆಗಿಳಿದು ತಮ್ಮ ಆಕ್ರೋಶವನ್ನು ಹೊರ ಹಾಕುವುದರ ಜೊತೆಗೆ ನಾಳಿನ ಬಂದು ಕುರಿತಾಗಿಯೂ ಚರ್ಚಿಸಿದ್ದಾರೆ.
ಅದರಂತೆ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಕೂಡ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ದರ್ಶನ್(Darshan) ಕೂಡ ಮೈಸೂರಿನ ಬನ್ನೂರಿನಲ್ಲಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಮಾತನಾಡಿದಂತಹ ದರ್ಶನವರು ಮೌನ ಮುರಿದು ಕಾವೇರಿ ಹೋರಾಟದ ಕೂಗಿಗೆ ನಮ್ಮ ಬೆಂಬಲ ಸದ ಇರಲಿದೆ. ದರ್ಶನ್ ಸುದೀಪ ಶಿವಣ್ಣ ಹಾಗೂ ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣ್ಸೋದಾ?
ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲಿ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣುತ್ತಿಲ್ಲವೇ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರರಂಗದಿಂದ(Tamil Cinema) ಕರ್ನಾಟಕದಲ್ಲಿ 36 ಕೋಟಿ ರೂಪಾಯಿ ಮಾಡಿದ್ದಾನೆ. ಆರು ಕೋಟಿ ಹಾಕಿ 36 ಕೋಟಿ ಲಾಭ ಮಾಡಿಕೊಂಡವನಿಗೆ ಯಾಕೆ ನೀವು ಪ್ರಶ್ನೆ ಮಾಡಲ್ಲ? ಎನ್ನುತ್ತಾ ಡಿ ಬಾಸ್ ದರ್ಶನ್(D boss Darshan) ಕನ್ನಡ ಪರ ಹೋರಾಟಗಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದರು.