WhatsApp Group Join Now
Telegram Group Join Now

Actor Darshan: ನಟ ದರ್ಶನ್, ಅಭಿಮಾನಿಗಳ ಪಾಲಿನ ಡಿಬಾಸ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಡಿಬಾಸ್ ಎಂದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕ್ರೇಜ್, ನಟ ದರ್ಶನ್ (Actor Darshan) ಅವರಿಗೆ ಇರುವಂಥ ಫ್ಯಾನ್ ಬೇಸ್ ಸ್ಯಾಂಡಲ್ ವುಡ್ ನಲ್ಲಿ ಬೇರೆ ಕಲಾವಿದರಿಗೆ ಇದೆ ಎಂದು ಕೂಡ ಹೇಳುವುದು ಕಷ್ಟವೆ.. ಸ್ಟಾರ್ ಕಲಾವಿದರ ಮಗ ಆದರು ಕೂಡ ನಟ ದರ್ಶನ್ ಅವರು ಚಿತ್ರರಂಗಕ್ಕೆ ಬಂದಿದ್ದು ಸುಲಭದ ದಾರಿಯಲ್ಲಿ ಅಲ್ಲ. ಬಹಳ ಕಷ್ಟಪಟ್ಟು, ಲೈಟ್ ಬಾಯ್ ಆಗಿ ಕೆರಿಯರ್ ಶುರು ಮಾಡಿ ಇಂದು ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಆಗಿ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ಡಿಬಾಸ್ ದರ್ಶನ್ ಅವರ ಸಿನಿಮಾಗಳ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ, ಅವರ ಸಿನಿಮಾ ಬಗ್ಗೆ ಒಂದು ಹೊಸ ಅಪ್ಡೇಟ್ ಸಿಕ್ಕರೂ ಕೂಡ ಅಭಿಮಾನಿಗಳು ಹಬ್ಬ ಮಾಡುವ ಹಾಗೆ ಸೆಲೆಬ್ರೇಟ್ ಮಾಡುತ್ತಾರೆ. ದರ್ಶನ್ ಅವರು ಒಬ್ಬ ನಟ ಎನ್ನುವುದಕ್ಕಿಂತ ಹೆಚ್ಚಾಗಿ, ಮಾನವೀಯತೆ ಒಳ್ಳೆಯ ಗುಣಗಳಿರುವ ವ್ಯಕ್ತಿಯಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸ್ನೇಹಿತರನ್ನು ದರ್ಶನ್ ಅವರು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಅಭಿಮಾನಿಗಳು ಫಿದಾ ಆಗುತ್ತಾರೆ..

ಇನ್ನು ಅಭಿಮಾನಿಗಳ ಮೇಲೆ ಕೂಡ ದರ್ಶನ್ ಅವರಿಗೆ ಅಷ್ಟೇ ಪ್ರೀತಿ ಇದೆ. ಅಭಿಮಾನಿಗಳನ್ನು ಯಾವಾಗಲೂ ಬಿಟ್ಟುಕೊಡುವುದಿಲ್ಲ ಡಿಬಾಸ್. ಅಭಿಮಾನಿಗಳು ಕೂಡ ಅದೇ ರೀತಿ, ದರ್ಶನ್ ಅವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಕ್ರೇಜ್, ಡಿಬಾಸ್ ಮನೆಯಲ್ಲಿದ್ದಾರೆ ಎಂದು ಗೊತ್ತಾದರೆ ಸಾಕು ಅವರ ಮನೆಯ ಎದುರು ಅಭಿಮಾನಿಗಳು ದಂಡೇ ನೆರೆದಿರುತ್ತದೆ. ದರ್ಶನ್ ಅವರಿಗೆ ಮಾಸ್ ಫ್ಯಾನ್ ಬೇಸ್ ಮಾತ್ರವಲ್ಲ, ದೊಡ್ಡ ಮಟ್ಟದ ಮಹಿಳಾ ಅಭಿಮಾನಿ ಬಳಗ ಕೂಡ ಇದೆ.

ದರ್ಶನ್ ಅವರಿಗೆ ತಮ್ಮ ಮಹಿಳಾ ಅಭಿಮಾನಿಗಳನ್ನು ಸಹೋದರಿಯರ ಹಾಗೆ ಕಾಣುತ್ತಾರೆ. ಮಹಿಳಾ ಅಭಿಮಾನಿಗಳು ಕೂಡ ದರ್ಶನ್ ಅವರನ್ನು ತಮ್ಮ ಅಣ್ಣ ಎಂದೇ ಭಾವಿಸಿದ್ದಾರೆ. ಪ್ರತಿ ವರ್ಷ ರಕ್ಷಾಬಂಧನ ಹಬ್ಬದ ದಿನ ದರ್ಶನ್ ಅವರ ಮನೆಗೆ ಅವರ ಮಹಿಳಾ ಅಭಿಮಾನಿಗಳು ಬಂದು ರಾಖಿ ಕಟ್ಟುತ್ತಾರೆ. ಈ ವರ್ಷ ಕೂಡ ಅದು ಮುಂದುವರೆದಿದ್ದು, ಸಾಕಷ್ಟು ಮಹಿಳಾ ಅಭಿಮಾನಿಗಳು ಬಂದು ಡಿಬಾಸ್ ಅವರಿಗೆ ರಾಖಿ ಕಟ್ಟಿದ್ದಾರೆ. ಈ ಫೋಟೋಸ್ ಗಳನ್ನು ದರ್ಶನ್ ಅವರೇ ಶೇರ್ ಮಾಡಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಕೈತುಂಬಾ ರಾಖಿ ಇರುವ ಫೋಟೋಸ್ ಗಳನ್ನು ದರ್ಶನ್ ಅವರು ಶೇರ್ ಮಾಡಿಕೊಂಡಿದ್ದು, ರಾಖಿ ಕಟ್ಟಿದ ಎಲ್ಲಾ ಅಕ್ಕತಂಗಿಯರಿಗೂ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ದರ್ಶನ್ ಅವರಿಗೆ ರಾಖಿ ಕಟ್ಟುತ್ತಿರುವ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೀವು ಕೂಡ ದರ್ಶನ್ ಅವರ ಅಭಿಮಾನಿಯಾಗಿದ್ದರೆ ಈ ಫೋಟೋಸ್ ನೋಡಿ..

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: