WhatsApp Group Join Now
Telegram Group Join Now

ಸ್ನೇಹಿತರೆ, ಕಿರುತೆರೆ ಲೋಕದಲ್ಲಿ ಕಮಾಲ್ ಮಾಡುತ್ತಾ ಹೆಚ್ಚಿನ ಜನಪ್ರಿಯತೆ ಪಡೆದಿದ್ದಂತಹ ನಟಿ ಕಾರುಣ್ಯ ರಾಮ್(Karunya Ram) ‘ಸೀನಾ'(Seena) ಎಂಬ ಚಿತ್ರದ ಮೂಲಕ 2010ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ತಕ್ಕಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಂತಹ ಕಾರುಣ್ಯ ರಾಮ್(Karunya Ram) ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 4 ಸ್ಪರ್ಧಿಯಾಗಿ ಭಾಗವಹಿಸುವಂತಹ ಅವಕಾಶ ದೊರಕುತ್ತದೆ.

ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಕಾರುಣ್ಯ ತಮ್ಮ ಅತಿ ಅದ್ಭುತ ವ್ಯಕ್ತಿತ್ವದ ಮೂಲಕ ಹಲವಾರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರು, ಸಾಕಷ್ಟು ಸಿನಿಮಾಗಳ ಅವಕಾಶ ಪಡೆದು ಬಿಜಿಯಾದಂತಹ ಕಾರುಣ್ಯ ರಾಮ್(Karunya Ram) ಅವರಿಗೆ ಡಾ. ಶಿವರಾಜಕುಮಾರ್ (Dr.Shivrajkumar) ಅವರ ವಜ್ರಕಾಯ ಸಿನಿಮಾದಲ್ಲಿ ನಟಿಸುವಂತಹ ಅವಕಾಶ ದೊರಕುತ್ತದೆ.

ಈ ಪಾತ್ರದ ಮೂಲಕ ಹೆಚ್ಚು ಹೆಸರುವಾಸಿಯಾದಂತಹ ಕಾರುಣ್ಯ ರಾಮ್ ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಸೂಪರ್ ಮಿನಿಟ್, ಕಿಕ್, ಕುಕ್ಕು ವಿತ್ ಕಿರಿಕ್ಕು ಹೀಗೆ ಮುಂತಾದ ರಿಯಾಲಿಟಿ ಶೋ ಗಳಲ್ಲಿಯೂ ಭಾಗವಹಿಸುವ ಮೂಲಕ ಮನೆಮಾತಾದರೂ. ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಈ ನಟಿ ಆಗಾಗ ತಮ್ಮ ಕ್ಯೂಟ್ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಹೀಗಿರುವಾಗ ಕಾರುಣ್ಯ ರಾಮ್ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪನವರ (BS Yeddyurappa) ಮನೆಗೆ ಭೇಟಿ ನೀಡಿ ಅವರೊಂದಿಗೆ ಹೋಗಿದ್ದಂತಹ ಕೆಲಸದ ಕುರಿತು ಮಾತನಾಡಿ ಅನಂತರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ವೈರಲಾಗುತ್ತಿದ್ದು, ಯಥಾ ಪ್ರಕಾರ ಸನ್ಮಾನ್ಯ ಯಡಿಯೂರಪ್ಪನವರು ಬಿಳಿ ಬಣ್ಣದ ಉಡುಪನ್ನು ಧರಿಸಿದರೆ ಕಾರುಣ್ಯ ರಾಮ್(Karunya Ram) ನೀಲಿ ಹಾಗೂ ಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಇರುವಂತಹ ಗೌನ್ ನಲ್ಲಿ ಫೋಟೋಗೆ ಸ್ಮೈಲ್ ಮಾಡಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: