Actor Shruthi family: ತಮ್ಮ ಅಳಮುಂಜಿ ಪಾತ್ರದ ಮೂಲಕವೇ 80-90 ರ ದಶಕದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಕನ್ನಡ ಸಿನಿ ಪ್ರೇಕ್ಷಕರನ್ನು ಥಿಯೇಟರ್ನಲ್ಲೇ (Theatre) ಕಣ್ಣೀರು ಹಾಕುವಂತಹ ಅಭಿನಯ ಮಾಡಿ ಕನ್ನಡಿಗರ ಮನೆಮಗಳಾಗಿ ಹೋಗಿದಂತಹ ಶ್ರುತಿ (Shruthi) ಪ್ರತಿಯೊಬ್ಬರಿಗೂ ಚಿರಪರಿಚಿತ. ನಟಿ ಮಹಾಲಕ್ಷ್ಮಿ, ಸಿತಾರಾ, ಸೌಂದರ್ಯರಂತಹ ಸ್ಟಾರ್ ನಟಿಯರ ಆಳ್ವಿಕೆ ಇದ್ದಂತಹ ಆ ಕಾಲದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ತಮ್ಮ ಅಮೋಘ
ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡ ಶ್ರುತಿಯವರು ಅಳುಮುಂಜಿ ಪಾತ್ರಗಳ ಮೂಲಕ ಕನ್ನಡಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದರು ಎಂದರೆ ತಪ್ಪಾಗಲಾರದು. ಕೌಟುಂಬಿಕ ಕಥಾಂದರ ಹೊಂದಿರುವ ಸಿನಿಮಾಗಳ ಮೂಲಕ ಆಗಿನ ಸಿನಿಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದ ಶ್ರುತಿ ಅವರು ಎಸ್ ಮಹೇಂದರ್ ಎಂಬ ಪ್ರಖ್ಯಾತ ನಿರ್ದೇಶಕರೊಂದಿಗೆ ಪ್ರೀತಿಯಲ್ಲಿ ಬಿದ್ದು ಮನೆಯವರೆಲ್ಲರ
ಒಪ್ಪಿಗೆ ಪಡೆದು ಅಗ್ನಿಸಾಕ್ಷಿಯಾಗಿ ಕನ್ನಡ ಸಿನಿಮಾ ರಂಗದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವಾರು ವರ್ಷಗಳ ಕಾಲ ಬಹಳ ಅನ್ಯೂನ್ಯವಾಗಿ ಸುಖ ಸಂಸಾರಿಕ ಜೀವನ ನಡೆಸುತ್ತಿದ್ದ ಈ ದಂಪತಿಗಳಿಗೆ ಗೌರಿ ಎಂಬ ಮುದ್ದು ಹೆಣ್ಣುಮಗಳು ಜನಿಸಿದ ನಂತರ ವೈಯಕ್ತಿಕ ಬದುಕಿನಲ್ಲಿ ಮನಸ್ತಾಪ ಕಿರಿಕಿರಿಗಳೆಂಬುದು ಸೃಷ್ಟಿಯಾಗಿ ಮಹೆಂದರ್ ಶ್ರುತಿ ಬೇರಾದರು.
ವಿಚ್ಛೇದನ ಪಡೆದ ಬಳಿಕ ಚಕ್ರವರ್ತಿ ಚಂದ್ರ ಚೂಡ್ ಅವರೊಂದಿಗೆ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರುತಿ ಅವರಿಂದಲೂ ದೂರಾಗಿ, ಸದ್ಯ ತಮ್ಮ ಸುಂದರ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಹೌದು ಗೆಳೆಯರೇ ಶೃತಿ ಅವರ ತಂದೆ ಕೃಷ್ಣ(Krishna) ಅವರು ರಾಧಾ ಮತ್ತು ರುಕ್ಮಿಣಿ (Radha & Rukmini)ಎಂಬ ಇಬ್ಬರು ಅವಳಿ ಜವಳಿ, ಹುಡುಗಿಯರನ್ನು ಮದುವೆಯಾಗಿದ್ದರು.
ಈ ಕಾರಣದಿಂದ ಶ್ರುತಿ ಮತ್ತು ಶರಣವರಿಗೆ ಇಬ್ಬರು ತಾಯಂದಿರಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಶ್ರುತಿ (Shruthi) ಅವರು ಆಗಾಗ ಫ್ಯಾಮಿಲಿ ಫೋಟೋ(Family Photo) ಹಾಗೂ ಮನೆಯಲ್ಲಿ ನಡೆಯುವಂತಹ ಕಾರ್ಯಕ್ರಮಗಳ ಅಪರೂಪದ ಫೋಟೋನೆಲ್ಲ ಕ್ಯಾಪ್ಚರ್ ಮಾಡಿ ಅದನ್ನು (instagram) ನಲ್ಲಿ ಪೋಸ್ಟ್ ಮಾಡುತ್ತಲಿರುತ್ತಾರೆ.
ಅದರಂತೆ ಕಳೆದ ಕೆಲವು ದಿನಗಳ ಹಿಂದಷ್ಟೇ ಮನೆಯವರೆಲ್ಲರೂ ಕಪ್ಪು ಬಣ್ಣದ ಉಡುಪನ್ನು ತೊಟ್ಟು ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದರ ಕೆಲ ಸುಂದರ ಚಿತ್ರಗಳನ್ನು ಶ್ರುತಿ ಮತ್ತು ಮಗಳು ಗೌರಿ ತಮ್ಮ (instagram) ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಸದ್ಯಾ ಭಾರಿ ವೈರಲ್ ಆಗುತ್ತಿದ್ದು ಶ್ರುತಿ ಅವರ ಫ್ಯಾಮಿಲಿ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.ಇದನ್ನೂ ಓದಿ Dunia Vijay: ದುನಿಯಾ ವಿಜಯ್ ಮತ್ತು ಕೀರ್ತಿ ಅವರ ವಯಸ್ಸಿನ ಅಂತರವೆಷ್ಟು ಗೊತ್ತೇ? ಇಲ್ಲಿದೆ ನೋಡಿ