WhatsApp Group Join Now
Telegram Group Join Now

ಸ್ನೇಹಿತರೆ, ಸ್ಯಾಂಡಲ್ವುಡ್ನ ಪ್ರಿನ್ಸೆಸ್ ರಾಧಿಕಾ ಪಂಡಿತ್(Radhika Pandit) ಕಿರುತೆರೆಯ ಮೂಲಕ ತಮ್ಮ ಸಿನಿ ಪಯಣವನ್ನು ಶುರು ಮಾಡಿ ಎಂದು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಾಗಿ ಬೆಳ್ಳಿತೆರೆಯ ಅದೃಷ್ಟ ಪರೀಕ್ಷೆ ಮಾಡಲು ಮುಂದಾದ ರಾಕಿಂಗ್ ಸ್ಟಾರ್ ಯಶ್(yash) ಹಾಗೂ ರಾಧಿಕಾ ಪಂಡಿತ್(Radhika Pandit)

ಮೊದಲ ಸಿನಿಮಾದಲ್ಲಿಯೇ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಗಳಿಸುತ್ತಾರೆ. ಈ ಮೂಲಕ ಜನಪ್ರಿಯತೆ ಪಡೆದ ಯಶ್ ಹಾಗೂ ರಾಧಿಕಾ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸುತ್ತ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಗಳ ಪಟ್ಟಿಗೆ ಸೇರ್ಪಡೆಯಾದರು. ಕಿರುತರೆ(television) ದಿನಗಳಿಂದಲೂ ಪ್ರೀತಿಸುತ್ತಿದ್ದ ಈ ಜೋಡಿ ಹಕ್ಕಿಗಳು ಮನೆಯವರೆಲ್ಲರ ಒಪ್ಪಿಗೆ ಪಡೆದು ಸ್ಯಾಂಡಲ್ ವುಡ್ನ ಸಾಕ್ಷಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೌದು ಗೆಳೆಯರೇ ಅವಕಾಶಗಳ ಸುರಿಮಳೆ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್(Yash) ಅವರೊಂದಿಗೆ ಡಿಸೆಂಬರ್ 9ನೇ ತಾರೀಕು 2016 ರಂದು ಸಪ್ತಪದಿ ತುಳಿದ ರಾಧಿಕಾ ಪಂಡಿತ್(Radhika Pandit), ಸದ್ಯ ಎರಡು ಮುದ್ದಾದ ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಇನ್ನು ಮೊದಲ ಮಗು ಜನಿಸುವ ಸಂದರ್ಭದಲ್ಲಿ ರಾಧಿಕಾ ಪಂಡಿತ್(Radhika Pandit) ಅವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗಿತ್ತು.

ಈ ಒಂದು ಶುಭ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ನಾಗತಿಹಳ್ಳಿ ಚಂದ್ರಶೇಖರ್, ಸುಧಾರಾಣಿ, ವಿನಯ್ ರಾಜಕುಮಾರ್ ಸೇರಿದಂತೆ ಮುಂತಾದ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳೆಲ್ಲರೂ ಬಂದು ತಾಯಿ ಮಗುವನ್ನು ಹರಸಿ ಆಶೀರ್ವದಿಸಿದರು. ಅಮೂಲ್ಯ ಮತ್ತು ದಂಪತಿ ರಾಧಿಕಾ ಪಂಡಿತ್(Radhika Pandit) ಅವರೊಡನೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ.

ಅಲ್ಲದೆ ಅಮೂಲ್ಯ(Amulya) ತಮ್ಮ ಆತ್ಮೀಯ ಗೆಳತಿ ರಾಧಿಕಾ ಅವರಿಗೆ ಅರಿಶಿಣ ಕುಂಕುಮವನ್ನು ಇಡುತ್ತಿರುವ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಎರಡು ನಟಿಯರನ್ನು ಒಂದೇ ಫ್ರೇಮ್ನಲ್ಲಿ ಕಂಡ ನೆಟ್ಟಿಗರು ಲೈಕ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯ ಹಂಚಿಕೊಳ್ಳುತ್ತಿದ್ದಾರೆ. ಸಿನಿ ಬದುಕಿಗೆ ಗುಡ್ ಬೈ ಹೇಳಿ ಶಬರಿಮಲೆಯಲ್ಲಿ ಕಾಣಿಸಿಕೊಂಡ ನಟಿ ಸಿತಾರ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: