WhatsApp Group Join Now
Telegram Group Join Now

ಮಾರ್ಚ್ ತಿಂಗಳು ಎನ್ನುವುದೆ ಬಹು ವಿಶೇಷವಾದ ತಿಂಗಳಾಗಿದೆ. ಅಲ್ಪಸ್ವಲ್ಪ ಚಳಿಯ ಜೊತೆ ಬೇಸಿಗೆಯ ಆರಂಭವಾಗುತ್ತದೆ. ಶಿಶಿರ ಋತುವು ಪೂರ್ಣ ಪ್ರಮಾಣದಲ್ಲಿ ಇರುವುದರಿಂದ ಎಲ್ಲ ಕಡೆಯೂ ಮರಗಳು ತಮ್ಮ ಹಣ್ಣೆಲೆಗಳನ್ನು ಉದುರಿಸಕೊಂಡು, ಹೊಸ ಚಿಗುರಿಗಾಗಿ ಕಾಯುತ್ತಿರುವುದನ್ನು ಎಲ್ಲೆಡೆಯು ಕಾಣಬಹುದಾಗಿದೆ. ಇಂತಹ ಸಮಯದಲ್ಲಿ ತುಲಾ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ಎನ್ನುವುದನ್ನು ನೋಡೊಣ.

ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕು ಪಾದಗಳು, ವಿಶಾಖಾ ನಕ್ಷತ್ರದ ಮೊದಲು ಮೂರು ಚರಣಗಳು ಸೇರಿ ತುಲಾ ರಾಶಿಯಾಗುತ್ತದೆ‌. ತುಲಾ ರಾಶಿಯು ಬಿಳಿ ಮತ್ತು ನೀಲಿ ಬಣ್ಣದಿಂದ ಕೂಡಿದ್ದು, ಮಹಾಲಕ್ಷ್ಮೀಯು ಈ ರಾಶಿಯ ಅದೃಷ್ಟ ದೇವತೆಯಾಗಿದ್ದಾಳೆ. ಮಿಥುನ, ಕಟಕ ರಾಶಿಗಳು ತುಲಾ ರಾಶಿಯವರ ಮಿತ್ರರಾಶಿಗಳಾಗಿದ್ದು, ಸಿಂಹರಾಶಿಯು ಶತೃರಾಶಿಯಾಗಿದೆ. ತುಲಾ ರಾಶಿಯಲ್ಲಿ ಜನಿಸಿದ ಬಹುತೇಕರು ಎಲ್ಲ ಕೆಲಸಗಳಲ್ಲಿಯೂ ನಿಪುಣರಾಗಿರುತ್ತಾರೆ. ಬಹಳ ಅಧ್ಯಯನ ಶೀಲರಾಗಿರುತ್ತಾರೆ‌.

ಮಾರ್ಚ್ ತಿಂಗಳಲ್ಲಿ 5, 15, 25ನೇ ತಾರೀಖು ಬಹಳ ಒಳ್ಳೆಯ ದಿನವಾಗಿದ್ದು ಅನುಕೂಲಕರವಾಗಿದೆ. ಈ ಒಂದು ತಿಂಗಳಲ್ಲಿ ತುಲಾ ರಾಶಿಯವರಿಗೆ ಬಹಳ ನಿರೀಕ್ಷೆಗಳಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗುತ್ತದೆ ಎನ್ನುವ ಉತ್ಸಾಹದಲ್ಲಿ ಇರುತ್ತಾರೆ‌. ಆದರೆ ಎಲ್ಲವು ನೀವು ಅಂದುಕೊಂಡ ಹಾಗೆ ನಡೆಯದು, ನೀವೆ ಮುಂದೆ ನಿಂತು ಎಲ್ಲವನ್ನೂ ಮಾಡಿ ಫಲಗಳನ್ನು ನೀರಿಕ್ಷಿಸದೆ ಇದ್ದರೆ ಒಳ್ಳೆಯದು. ಇನ್ನೊಬ್ಬರನ್ನು ಅವಲಂಬಿಸಬೇಡಿ. ಸಮಸ್ಯೆ ಆರಂಭವಾಗುವ ಮುನ್ನವೇ ಎಚ್ಚರ ವಹಿಸಿ.

ತುಲಾ ರಾಶಿಯವರು ಮಾರ್ಚ ತಿಂಗಳಲ್ಲಿ ಯಾವುದೇ ಕೆಲಸವನ್ನು ಶುರು ಮಾಡಿದರೂ, ಅದನ್ನು ಪೂರ್ತಿಯಾಗಿಸುವವರೆಗು ಬಿಡದೆ ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗ ಮಾತ್ರ ಅದರ ಫಲ ನಿಮಗೆ ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಅಲಕ್ಷ್ಯ ಮಾಡಬೇಡಿ. ನಿಮ್ಮ ತಾಯಿ ಅಥವಾ ಅಜ್ಜಿಯ ಕಡೆಯಿಂದ ಹಣಕಾಸಿನ ಸಹಾಯ ದೊರೆಯುವ ಲಕ್ಷಣಗಳು ಕಾಣುತ್ತಿದ್ದು, ಯಾವುದೇ ಕಾರಣಕ್ಕೂ ದುಡುಕುತನ ಪ್ರದರ್ಶಿಸಿ ಹಾಳು ಮಾಡಿಕೊಳ್ಳಬೇಡಿ. ತಾಳ್ಮೆ ಬಹಳಷ್ಟು ಬೇಕು. ಮಧುಮೇಹಿಗಳು ಈ ಸಮಯದಲ್ಲಿ ಆದಷ್ಟು ಜಾಗರೂಕತೆಯಿಂದ ಇರಬೇಕು. ತಾಯಿಯ ಆರೋಗ್ಯದ ಕಡೆ ಲಕ್ಷ್ಯವಿರಲಿ.

ವ್ಯಾಪಾರ ವ್ಯವಹಾರ ಮಾಡುವಂತವರಿಗೆ ಒಳ್ಳೆಯ ಲಾಭಗಳು ಸಿಗುವ ಸಾಧ್ಯತೆಯಿದ್ದು, ಆದಷ್ಟು ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ತಂದುಕೊಳ್ಳಿ. ಇಲ್ಲವಾದರೆ ವ್ಯವಹಾರದಲ್ಲಿ ಹಿಂದೆ ಬೀಳಬಹುದು. ಪಾಲುದಾರಿಕೆಯ ವ್ಯವಹಾರ ಮಾಡುವವರಿಗೆ ಈ ತಿಂಗಳು ಅಷ್ಟೇನು ಲಾಭದಾಯಕವಾಗಿಲ್ಲ. ಕಾರ್ಮಿಕ ವರ್ಗದವರಿಗೆ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಈ ಸಮಯ ಶುಭವಾಗಿದ್ದು, ಕೆಲಸದಲ್ಲಿ ಭಡ್ತಿ ದೊರೆಯುವ ಸಾಧ್ಯತೆಯಿದೆ. ಮಹಿಳಾ ಉದ್ಯೋಗಿಗಳು ಹಣಕಾಸಿನ ಎಚ್ಚರಿಕೆಯ ಅಗತ್ಯವಿದೆ.

ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಯೋಗವಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲವಾಗಿದ್ದು, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳ ನಿರೀಕ್ಷೆ ಮಾಡಬಹುದು. ಕಾಂಪಿಟೇಟಿವ್ ಎಗ್ಸಾಮ್’ಗಳಿಗೆ ಪ್ರಯತ್ನಿಸಬಹುದು. ಸ್ನೇಹಿತರಿಂದ ಸಹಾಯವಾಗುತ್ತದೆ. ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಮನಸ್ಸಿನ ಹಿಂಜರಿಕೆಯನ್ನು ಬಿಟ್ಟು ಮುನ್ನುಗ್ಗಿದರೆ ಎಲ್ಲವು ಶುಭವಾಗುತ್ತದೆ. ನಾಗಾರಾಧನೆಯು ನಿಮಗೆ ಅನುಕೂಲತೆಗಳನ್ನು ತಂದು ಕೊಡುತ್ತದೆ.

ಗುರುಬಲ ಇರುವುದರಿಂದ ವಿವಾಹ ಯೋಗ್ಯ ಸಮಯವಾಗಿದೆ. ಈ ಮಾರ್ಚ್ ತಿಂಗಳಕಾಲ ಮದುವೆಗೆ ಪ್ರಯತ್ನಿಸಬಹುದು. ಮದುವೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಅಡ್ಡಿಯಿಲ್ಲ. ಸಂತಾನದ ಯೋಗವಿದ್ದು, ಆರೋಗ್ಯದ ಸಣ್ಣಪುಟ್ಟ ವ್ಯತ್ಯಾಸಗಳು ಬಾಧಿಸುವ ಸಾಧ್ಯತೆಯಿದೆ. ಸಂತಾನದ ನಿರೀಕ್ಷೆಯಲ್ಲಿ ಇರುವವರು ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ನಿತ್ಯಕಾರ್ಯಗಳು ಎಂದಿನಂತೆ ಮುಂದುವರಿಯುತ್ತದೆ. ಸ್ವಲ್ಪ ಖರ್ಚುನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಮಾರ್ಚ ತಿಂಗಳು ಅದ್ಭುತವಾಗಿ ಕಳೆದು ಹೋಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: