WhatsApp Group Join Now
Telegram Group Join Now

ಹನ್ನೆರಡು ರಾಶಿಗಳಲ್ಲಿ ಕನ್ಯಾರಾಶಿಯ 2023ರ ವರ್ಷಭವಿಷ್ಯವು ಬಹಳ ಉತ್ತಮವಾಗಿದೆ. ಈ ಕನ್ಯಾರಾಶಿಯವರಿಗೆ ಅತೀ ಶೀಘ್ರದಲ್ಲೇ ರಾಜಯೋಗ ಪ್ರಾಪ್ತಿಯಾಗಲಿದೆ‌‌‌. ಕನ್ಯಾರಾಶಿಯು ಸ್ತ್ರೀ ಲಿಂಗಕ್ಕೆ ಸೇರಿದ ರಾಶಿಯಾಗಿದ್ದು, ಈ ರಾಶಿಯಲ್ಲಿ ಜನಿಸಿದಂತವರು ಬಹಳ ಭಾಗ್ಯಶಾಲಿಗಳಾಗುತ್ತಾರೆ‌. ಕನ್ಯಾರಾಶಿಯ ವಾರ್ಷಿಕ ಗೋಚಾರಫಲಗಳನ್ನು ಅರಿಯೋಣ ಬನ್ನಿ.

ಕನ್ಯಾರಾಶಿಗೆ ಬುಧನು ಅಧಿಪತಿಯಾಗಿದ್ದಾನೆ ಹಾಗೂ ಬ್ರಹಸ್ಪತಿ ಗ್ರಹವು ಯೋಗವನ್ನು ತರುವಂತದ್ದಾಗಿದೆ. ಈ ರಾಶಿಯವರು ಬಹಳ ರೂಪವಂತರು ಹಾಗೂ ಗುಣವಂತರಾಗಿರುತ್ತಾರೆ. ಸಿಂಹರಾಶಿ, ಮಿಥುನರಾಶಿ ಹಾಗೂ ಮೇಷ ರಾಶಿಯು ಕನ್ಯಾರಾಶಿಗೆ ಮಿತ್ರರಾಶಿಗಳಾಗಿವೆ. ಜಲಚರರಾಶಿಯಾದ ಕಟಕವು ಶತೃರಾಶಿಯಾಗಿ ಪರಿಣಮಿಸಿದೆ. ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳು ಬಹಳ ಅದೃಷ್ಟದ ದಿಕ್ಕುಗಳಾಗಿವೆ. ಬುಧವಾರ ಸೋಮವಾರ ಹಾಗೂ ಗುರುವಾರಗಳು ಕನ್ಯಾರಾಶಿಯವರಿಗೆ ಒಳ್ಳೆಯ ವಾರಗಳಾಗಿದ್ದು,, ಈ ದಿನಗಳಲ್ಲಿ ಯಾವುದೇ ಕಾರ್ಯಗಳನ್ನು ಮಾಡಿದರೂ ಸಹ ಯಶವನ್ನು ಹೊಂದುತ್ತಾರೆ.

ಈ ರಾಶಿಯವರು ಬಹಳವೇ ಸೂಕ್ಷ್ಮ, ಅತಿ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿದ್ದು ಸೌಮ್ಯ ಸ್ವಭಾವದ ಸ್ನೇಹ ಜೀವಿಗಳಾಗಿರುತ್ತಾರೆ‌. ಇವರು ಯಾವುದೇ ರೀತಿಯ ಗಲಾಟೆ ಗದ್ದಲಗಳಿಗೆ ಒಳಗಾದೆ, ತಂಟೆ ತಕರಾರುಗಳಿಂದ ದೂರವಿದ್ದು ಶಾಂತ ಚಿತ್ತತೆಯಿಂದ ಜೀವನ ನಡೆಸುತ್ತಾರೆ. ಎಂದಿಗೂ ಸಹ ಇನ್ನೊಬ್ಬರಿಗೆ ಕೇಡು ಬಗೆಯುವ ಮನಸ್ಥಿತಿ ಇವರದಲ್ಲ.

ಕನ್ಯಾರಾಶಿಯ ಮೇಲೆ ಗುರು ಗ್ರಹದ ಗೋಚಾರಫಲಗಳು ಈ ಕೆಳಕಂಡಂತಿವೆ :- ಕನ್ಯಾರಾಶಿಯ ಗುರುವು ಈ ವರ್ಷದಲ್ಲಿ ಮೀನಾರಾಶಿಯಲ್ಲಿ ಸಂಚರಿಸುತ್ತಾನೆ. ಏಳನೇ ಮನೆಯಲ್ಲಿ ಗುರುವಿನ ಸಂಚಾರವು ಶುಭಫಲಗಳನ್ನು ತರುತ್ತದೆಯಾದ್ದರಿಂದ, 2023ರ ಈ ವರ್ಷವಿಡಿ ಕನ್ಯಾರಾಶಿಯವರು ಶುಭವಾರ್ತೆಗಳನ್ನು ಕೇಳಬಹುದಾಗಿದೆ. ವರ್ಷದ ಆರಂಭದಲ್ಲಿ ಕಠಿಣ ಸಮಸ್ಯೆಗಳು ಎದುರಾದರೂ ಸಹ ಕೈ ಹಾಕಿದ ಕಾರ್ಯಗಳು ಸಫಲಗೊಳ್ಳುತ್ತವೆ.

ಗುರುವಿನ ಅನುಗ್ರಹದಿಂದ ಹಣಕಾಸಿನ ಸಮಸ್ಯೆಯು ಶೀಘ್ರದಲ್ಲೇ ನಿವಾರಣೆಯಾಗಿ ಉನ್ನತಿಯನ್ನು ಕಾಣುವಿರಿ. ಅರೋಗ್ಯ ಸಮಸ್ಯೆ, ಸಾಲಬಾಧೆಗಳು ಕನ್ಯಾರಾಶಿಯವರನ್ನು ಬಾಧಿಸುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿರಿ. ಕನ್ಯಾರಾಶಿಯ ರೈತಾಪಿ ವರ್ಗದವರಿಗೆ ಈ 2023ನೇ ವರ್ಷದಲ್ಲಿ ಒಳ್ಳೆಯ ಇಳುವರಿ ಸಿಕ್ಕಿ, ಅದರಿಂದ ಅತ್ಯಧಿಕ ಲಾಭವನ್ನು ಪಡೆಯುತ್ತಾರೆ.

ಗುರುವಿನ ಅನುಗ್ರಹದಿಂದ ವ್ಯಾಪಾರ, ಉದ್ಯೋಗಗಳಲ್ಲಿ ಉತ್ತಮ ಸ್ಥಾನಕ್ಕೆ ಏರುತ್ತಾರೆ. ಅತೀ ಶೀಘ್ರದಲ್ಲಿ ಅರೆಕಾಲಿಕ ಸರ್ಕಾರಿ ಉದ್ಯೋಗಗಳಲ್ಲಿ ಭಡ್ತಿ ಹೊಂದುವಿರಿ‌. ಈ ವರ್ಷವು ನಿಮಗೆ ಶುಭದಾಯಕವಾಗಿದ್ದು, ಬಹಳ ದಿನಗಳಿಂದ ವಿವಾಹ ತೊಂದರೆಯನ್ನು ಅನುಭವಿಸುತ್ತಿದ್ದರೆ, ಗುರುಬಲದಿಂದಾಗಿ ಆ ತೊಂದರೆಯು ಸಹ ಇಲ್ಲವಾಗಿ ಕಂಕಣ ಭಾಗ್ಯ ಒದಗಿ ಬರಲಿದೆ. ಸಂತಾನ ಯೋಗವಿದೆ.

ಕನ್ಯಾರಾಶಿಯವರ ಶನಿ ಗೋಚಾರಫಲ:- 2023ರ ಈ ಅವಧಿಯಲ್ಲಿ ಕನ್ಯಾರಾಶಿಯ ಶನಿಯು ಮಕರರಾಶಿಯಲ್ಲಿ ಸಂಚರಿಸುವುದರಿಂದ ಸ್ವಲ್ಪ ಮಟ್ಟಿಗಿನ ಮಾನಸಿಕ ಸಮಸ್ಯೆಗಳು ಎದುರಾಗಲಿವೆ. ನಂಬಿಕಸ್ಥ ವ್ಯಕ್ತಿಗಳ ಜೊತೆ ಒಡಕು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಆದಷ್ಟು ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ.

ಕುಟುಂಬ ಕಲಹಗಳು ಹೆಚ್ಚಾಗಲಿದ್ದು, ಅದರಿಂದಾಗಿ ಒಂದಷ್ಟು ಮನಸ್ಥಾಪ, ಅವಮಾನಗಳನ್ನು ಎದುರಿಸುವ ಸಂದರ್ಭಗಳು ಬರಬಹುದು ಎಚ್ಚರಿಕೆಯಿಂದ ಇರಿ. ಕೆಟ್ಟಜನರ ಸಹವಾಸದಿಂದ ಕೆಟ್ಟ ಚಟಗಳಿಗೆ ಒಳಗಾಗುವ ಭಯವಿದೆ ಹಾಗಾಗಿ ನಿಮ್ಮ ಮನಸ್ಸಿನ ನಿಯಂತ್ರಣ ಅತ್ಯಗತ್ಯವಾಗಿದೆ‌. ಕನ್ಯಾರಾಶಿಯವರಿಗೆ ಶನಿಯಕಾಟ ಹೆಚ್ಚಾಗಿದ್ದು ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗಲಿದೆ.

ಕನ್ಯಾರಾಶಿಯ ಮೇಲೆ ರಾಹು ಹಾಗೂ ಕೇತು ಪ್ರಭಾವವು ಹೀಗಿದೆ:- ಈ ವರ್ಷದಲ್ಲಿ ಮೇಷ ಮತ್ತು ತುಲಾ ರಾಶಿಯಲ್ಲಿ ರಾಹುಕೇತು ಗ್ರಹಗಳು ಸಂಚರಿಸುತ್ತವೆ. ಎಂಟನೆಯ ಮನೆಯಲ್ಲಿ ರಾಹು ಹಾಗೂ ಎರಡನೇ ಮನೆಯಲ್ಲಿ ಕೇತು ತಮ್ಮ ಪ್ರಭಾವವನ್ನು ತೋರಿಸುವುದರಿಂದ ದಾಂಪತ್ಯ ಸಮಸ್ಯೆಗಳು ಹೆಚ್ಚಾಗಿ ಬಾಧಿಸಲಿವೆ. ಆರೋಗ್ಯ ಸಮಸ್ಯೆಗಳು ಕಾಡುವುದರಿಂದ ಅಪಘಾತ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆ ನಿಟ್ಟಿನ ಕಾಳಜಿ ವಹಿಸಿ. ಜಾಮೀನು, ಶ್ಯೂರಿಟಿಗಳಂತಹ ಕಾನೂನಾತ್ಮಕ ವಿಚಾರಗಳಲ್ಲಿ ಜಾಗೃತಿಯಿಂದ ವ್ಯವಹರಿಸುವುದಲ್ಲಿ ಸಮಸ್ಯೆಗಳಿಂದ ದೂರವಿರುವಿರಿ.

ಮೇಲ್ಕಂಡ ಎಲ್ಲ ಸಮಸ್ಯೆಗಳಿಗೂ, ನಿಮ್ಮ ರಾಶಿ ತಾರಾನುಕೂಲಕ್ಕೆ ಅನುಗುಣವಾಗಿ ಭಗವಂತನ ಮೊರೆ ಹೋಗುವುದೊಂದೆ ಪರಿಹಾರವಾಗಿದೆ. ರಾಹುಕೇತು ಗ್ರಹಗಳ ತೊಂದರೆಗೆ ರಾಹುಕೇತು ಶಾಂತಿಯನ್ನು ಮಾಡಿಸಿ. ಶನಿಯ ಪ್ರಭಾವಕ್ಕೆ ಶನಿ ಶಾಂತಿಯನ್ನು ಮಾಡಿಸಿ ಅಥವಾ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಹಾಗೂ ಮಂಗಳವಾರ ತಪ್ಪದೆ ಎಳ್ಳಣ್ಣೆಯ ದೀಪವನ್ನು ಬೆಳಗಿ.

ಗಣಪತಿಯ ಆರಾಧಾನೆಯನ್ನು ಕನ್ಯಾರಾಶಿಯವರು ಮಾಡಲೇಬೇಕು. ಇವುಗಳ ಜೊತೆಯಲ್ಲಿ ಪವಮಾನ ಹೋಮವನ್ನು ಆಂಜನೇಯ ಸ್ವಾಮಿಯ ಅನುಗ್ರಹಕ್ಕಾಗಿ ಮಾಡಿಕೊಂಡರಡ ಉತ್ತಮ. ಒಟ್ಟಾರೆ ಕನ್ಯಾರಾಶಿಯವರಿಗೆ 2023ನೆ ವರ್ಷವು ಮಿಶ್ರಫಲಗಳನ್ನು ತಂದಿದ್ದು, ಸದಾಕಾಲ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಶುಭವಾಗಲಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: