ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಇರಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಎರಡು ಇದೆ. ಕೆಲವು ಅಧ್ಯಯನಗಳ ಪ್ರಕಾರ ಹೃದಯಾಘಾತಕ್ಕೆ ಮೊದಲು ಕೆಲವು ಸೂಚನೆಗಳು ಸಿಗುತ್ತವೆ. ಹಾಗಾದರೆ ಹೃದಯಾಘಾತ ಇದ್ದಕ್ಕಿದ್ದಂತೆ ಏಕೆ ಆಗುತ್ತೆ.
ಯಾವ ಯಾವ ಸಮಸ್ಯೆ ಇರುವವರು ಇದಕ್ಕೆ ತುತ್ತಾಗುತ್ತಾರೆ. ಇದಕ್ಕೆ ಇರುವ ರಿಸ್ಕ್ ಫ್ಯಾಕ್ಟರ್ ಗಳು ಯಾವುವು ಹೃದಯಾಘಾತ ಎಂದರೆ ಎಲ್ಲರಲ್ಲೂ ಭಯ ಮೂಡುವುದು ಸಹಜ. ಏಕೆಂದರೆ ಈ ಸಮಸ್ಯೆಯಿಂದ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವರಿಗಂತೂ ಹಿಂದೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ಇದ್ದಕ್ಕಿದ್ದಂತೆ ಇದು ಸಂಭವಿಸುವುದರಿಂದ ಇದರ ಬಗ್ಗೆ ಹೆಚ್ಚು ಭಯ ಇರುತ್ತದೆ.
ಮನುಷ್ಯನ ದೇಹದ ಕೆಲವು ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತಾ ಹೋಗುತ್ತದೆ. ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗುತ್ತದೆ. ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಚಲನೆ ನಿಂತುಹೋಗುತ್ತದೆ.
ಈ ಸಮಸ್ಯೆಯನ್ನು ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ. ಹೃದಯಾಘಾತ ಕೆಲವರಲ್ಲಿ ಇದ್ದಕ್ಕಿದ್ದಂತೆ ಉಂಟಾಗುವುದುನ್ನು ನೀವು ನೋಡಿರುತ್ತೀರಿ. ಆದರೆ ಹೃದಯ ತಜ್ಞರು ಹೇಳುವ ಹಾಗೆ ಶೇಕಡಾ ೯೦ ರಷ್ಟು ಜನರಿಗೆ ಹೃದಯಾಘಾತ ಆಗಲು ಏನಾದರು ಒಂದು ಕಾರಣ ಇದ್ದೆ ಇರುತ್ತಂತೆ. ಇದನ್ನು ರಿಸ್ಕ್ ಫ್ಯಾಕ್ಟರ್ಸ್ ಅಂತ ಕರೆಯುತ್ತಾರೆ. ಆದರೆ ಈ ತೊಂದರೆಗಳಿಂದ ಹೃದಯಾಘಾತ ಸಂಭವಿಸುತ್ತೆ ಎಂದು ಅಲ್ಲ. ಅಂದರೆ ಈ ತೊಂದರೆಗಳು ಇದ್ದರೆ ಅವರಿಗೆ ಹೃದಯಾಘಾತ ಆಗುವ ಸಂಭವ ಜಾಸ್ತಿ.
ನಮ್ಮ ದೇಶದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿ ಇದೆ. ಮುಖ್ಯವಾಗಿ ಸುಮಾರು 5 ವರ್ಷಕ್ಕಿಂತ ಹೆಚ್ಚಿನಿಂದ ಮಧುಮೇಹದ ಸಮಸ್ಯೆ ಇರುವವರಿಗೆ ಹೃದಯಾಘಾತ ಆಗುವ ಸಂಭವ ಜಾಸ್ತಿ ಇರುತ್ತೆ. ಸಾಮಾನ್ಯವಾಗಿ ರಕ್ತನಾಳಗಳು ಕುಗ್ಗಿ ರಕ್ತ ಅಡಚಣೆ ಆದಾಗ ಹೃದಯಾಘಾತ ಆಗುತ್ತೆ ಎಂಬುದು ನಿಮಗೆ ಗೊತ್ತಿದೆ. ಸಕ್ಕರೆ ಖಾಯಿಲೆಯಿಂದ ಈ ಸಮಸ್ಯೆ ಹೆಚ್ಚಾಗಿ ಆಗುತ್ತೆ. ಆದರೆ ಇದು ಸಾಮಾನ್ಯವಾಗಿ ಸುಮಾರು 70-75 ವರ್ಷ ಮೇಲ್ಪಟ್ಟ ವೃದ್ಧರಿಗೆ ಸಂಭವಿಸುವುದು ಸಹಜ. ಆದರೆ ಸಕ್ಕರೆ ಖಾಯಿಲೆ ಇಂದ ಬಳಲುತ್ತಿರುವವರು ಈದಕ್ಕೆ ಬೇಗನೆ ತುತ್ತಾಗುತ್ತಾರೆ.
ಧೂಮಪಾನ ಮಾಡುವರವರಿಗೆ ಕೂಡ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿ ಇರುತ್ತೆ. ಅದರಲ್ಲೂ 40 ವರ್ಷ ಕ್ಕಿಂತ ಕಡಿಮೆ ವಯಸ್ಕರು ಧೂಮಪಾನ ಮಾಡುವುದು ಕೂಡ ರಿಸ್ಕ್ ಫ್ಯಾಕ್ಟರ್ ಎನ್ನುತ್ತಾರೆ ಹೃದಯ ತಜ್ಞರು. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ೪೦ ವರ್ಷ ಕ್ಕಿಂತ ಕಡಿಮೆ ವಯಸ್ಸಾದವರಲ್ಲಿ ಹೃದಯಾಘಾತದ ಸಂಭವ ಅತಿ ಕಡಿಮೆ ಇದೆ. ಆದರೆ ನಮ್ಮ ದೇಶದಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತಿದೆ.
ಪ್ರತಿ ವಾರದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯಾದರು ಹೃದಯಾಘಾತ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಬಹುತೇಕ ಸಮಯಗಳಲ್ಲಿ ಧೂಮಪಾನ ಸೇವನೆಯೇ ಇದಕ್ಕೆ ಮುಖ್ಯವಾದ ಕಾರಣವಾಗಿರುತ್ತೆ. ಬೀಡಿ, ಸಿಗರೇಟ್ ಅಥವಾ ಯಾವುದೇ ರೂಪದ ತಂಬಾಕು ಸೇವನೆಯಿಂದ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತೆ.