ಸಾಮಾನ್ಯವಾಗಿ 99% ಜನಗಳಿಗೆ ಈ ರೀತಿಯ ವಿಷಯಗಳು ಗೊತ್ತೇ ಇರುವುದಿಲ್ಲ. ಇವತ್ತು ನಾವು ನಿಮಗೆ ಗೊತ್ತಿಲ್ಲದೇ ಇರುವ ಕೆಲವೊಂದು ರೋಚಕವಾದ ಮತ್ತು ವಿಶೇಷವಾದ ಅತ್ಯದ್ಭುತವಾದ ಸಂಗತಿಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಇವತ್ತಿನ ನಮ್ಮ ಈ ಲೇಖನವನ್ನು ನೀವು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಈ ರೋಚಕವಾದ ಮತ್ತು ವಿಚಿತ್ರವೆನಿಸುವ ಈ ಪ್ರಪಂಚದ ಕೆಲವು ಸಂಗತಿಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ.
ದೇವರಿಗೆ ಪೂಜೆ ಸಲ್ಲಿಸುವರು ತೆಂಗಿನಕಾಯಿಯನ್ನು ಒಡೆಯುವುದು ಯಾಕೆ? ತೆಂಗಿನ ಕಾಯಿ ಒಂದು ಸಾತ್ವಿಕ ಒಣ ಹಣ್ಣು. ಪವಿತ್ರವಾದ ಈ ಹಣ್ಣು ಶುದ್ಧ, ಪವಿತ್ರ ಹಾಗೂ ಉತ್ತಮ ಆರೋಗ್ಯದ ಗುಣಗಳನ್ನು ಒಳಗೊಂಡಿದೆ. ವಿವಾಹ, ಮನೆ ನಿರ್ಮಾಣ, ಶುಭ ಕೆಲಸಗಳಿಗೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಇದನ್ನು ವಿಶೇಷ ವಸ್ತುವನ್ನಾಗಿ ಬಳಸಲಾಗುವುದು. ಹೋಮ ಹವನಗಳಿಗೆ ಇದನ್ನು ಅರ್ಪಿಸುವುದರ ಮೂಲಕ ದೇವರನ್ನು ಪೂಜಿಸಲಾಗುವುದು. ದೇವರಿಗೆ ಅರ್ಪಣೆಯಲ್ಲಿ ತೆಂಗಿನ ಕಾಯನ್ನು ಪ್ರಮುಖ ವಸ್ತುವನ್ನಾಗಿ ಬಳಸಲಾಗುತ್ತದೆ.
ಗಟ್ಟಿಯಾದ ಸಿಪ್ಪೆಯ ಹೊದಿಕೆಯನ್ನು ಹೊಂದಿರುವ ತೆಂಗಿನಕಾಯಿಯು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಪವಿತ್ರವಾದ ವಸ್ತುವನ್ನಾಗಿ ಬಳಸಲಾಗುವುದು. ತೆಂಗಿನಕಾಯಿಯು ಪ್ರಸ್ತುತಪಡಿಸುವುದಕ್ಕಿಂತ ಹೆಚ್ಚಿನ ಅರ್ಥವನ್ನು ಪ್ರತಿಬಿಂಬಿಸುವುದು. ಕೋಮಲವಾದ ತೆಂಗಿನ ಕಾಯಿಯ ಹೊರಗಿನ ಪದರವು ನಾರುಗಳಿಂದ ಕೂಡಿದೆ. ಈ ಸಂಗತಿಯು ಮನುಷ್ಯನು ಅತಿಯಾದ ಆಸೆಯಿಂದ ದೂರ ಇರಬೇಕು ಎನ್ನುವುದನ್ನು ಪ್ರತಿನಿಧಿಸುತ್ತದೆ.
ತೆಂಗಿನ ಕಾಯನ್ನು ಒಡೆದಾಗ ನಮಗೆ ಆರೋಗ್ಯಕರವಾದ ನೀರು ಮತ್ತು ಬಿಳಿಯ ಪದರಗಳು ದೊರೆಯುತ್ತವೆ. ಹಾಗೆಯೇ ಮನುಷ್ಯನು ನಿಷ್ಕಲ್ಮಷವಾದ ಮನಸ್ಸನ್ನು ಹೊಂದಬೇಕು. ಅಹಂ ಮತ್ತು ಅಹಂಕಾರವನ್ನು ಮುರಿಯಬೇಕು ಎನ್ನುವುದನ್ನು ಪ್ರತಿನಿಧಿಸುತ್ತದೆ. ದೇವರು ತನ್ನ ಭಕ್ತರು ನಿಷ್ಕಲ್ಮಶ ಮನಸ್ಸು ಹಾಗೂ ಅಹಂಕಾರಗಳಿಂದ ಮುಕ್ತರಾಗಿರಬೇಕು ಎನ್ನುವುದನ್ನು ಬಯಸುತ್ತಾನೆ. ಮನುಷ್ಯನ ತಲೆ ಬುರುಡೆಯನ್ನು ಪ್ರತಿಬಿಂಬಿಸುವ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಭಕ್ತನು ತಾನು ನಿರ್ಮಲ ಮನಸ್ಸನ್ನು ಹೊಂದಿದ್ದೇನೆ ಎನ್ನುವುದನ್ನು ತಿಳಿಸಿದಂತೆ ಆಗುವುದು.
ತೆಂಗಿನ ಕಾಯನ್ನು ಒಡೆದು ಅದರಲ್ಲಿರುವ ನೀರನ್ನು ಬೇರ್ಪಡಿಸಿ, ದೇವರಿಗೆ ನೈವೇದ್ಯಕ್ಕೆ ಇಡುತ್ತೇವೆ. ಇದರ ಅರ್ಥ ಮನುಷ್ಯನು ತನ್ನಲ್ಲಿರುವ ಅಹಂಕಾರ, ಸ್ವಾರ್ಥ, ಅಸೂಯೆಯ ಗುಣಗಳಿಂದ ಮುಕ್ತನಾಗಿ ನಿರ್ಮಲ ಭಕ್ತಿಯಿಂದ ದೇವರ ಚರಣಕ್ಕೆ ಶರಣಾಗಿದ್ದೇನೆ, ದೇವರಲ್ಲಿ ಅತ್ಯಂತ ಭಕ್ತಿ ಹಾಗೂ ಪ್ರೀತಿಯನ್ನು ಹೊಂದಿಯೇ ಶರಣಾಗಿದ್ದೇನೆ ಎನ್ನುವುದನ್ನು ತಿಳಿಸುವುದು. ಹಾಗಾಗಿ ಹಿಂದಿನ ಕಾಲದಿಂದಲೂ ಇದು ರೂಢಿಗತವಾಗಿ ಬಂದಿದೆ. ಈ ವಿಷಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ