WhatsApp Group Join Now
Telegram Group Join Now

ವಿಷ್ಣುವರ್ಧನ್ ಎಂಬ ಹೆಸರಿನಲ್ಲೇ ಒಂದು ಶಕ್ತಿ ಇದೆ ಆ ಹೆಸರನ್ನು ಕೇಳುವಾಗಲೇ ರೋಮಾಂಚನವೆನ್ನಿಸುವುದು. ಆ ಪರಿಯಾಗಿ ಕನ್ನಡಿಗರ ಮನ ಗೆದ್ದವರು ಸಾಹಸಸಿಂಹ ವಿಷ್ಣುವರ್ಧನ್.

ನಟ ವಿಷ್ಣುವರ್ಧನ್ ಅವರಿಗೆ ಇರುವ ದೊಡ್ಡ ಕನಸೆಂದರೆ ಮನೆಯನ್ನು ಕಟ್ಟುವುದಾಗಿತ್ತು. ಇವರು ಮೂಲತಃ ಮೈಸೂರಿನವರಾಗಿದ್ದು ಬೆಂಗಳೂರಿಗೆ ಬಂದಾಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ನಾಗರಹಾವು ಚಿತ್ರ ಯಶಸ್ಸು ಖಂಡ ನಂತರ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಲು ಜಾಗವನ್ನು ಖರೀದಿಸಿದರು ಅಲ್ಲಿಯೇ ಮನೆ ನಿರ್ಮಾಣವನ್ನು ಸಹ ಮಾಡಿದರು ಆದರೆ ಅಲ್ಲಿ ವಾಸಿಸಲು ಪ್ರಾರಂಭಿಸಿದಾಗ ವಿಷ್ಣುವರ್ಧನ್ ಅವರಿಗೆ ತಿಳಿದದ್ದು ಏನೆಂದರೆ, ಅವರು ಪಕ್ಕದ ಮನೆಯವರ ಜಾಗವನ್ನು ಸ್ವಲ್ಪ ಸೇರಿಸಿ ಮನೆಯನ್ನು ಕಟ್ಟಿದ್ದರು

ಇದು ಅವರು ಮಾಡಿದ ಸರ್ವೆಯಲ್ಲೂ ತಿಳಿಯಲಿಲ್ಲ ಒಂದು ವೇಳೆ ಪಕ್ಕದ ಮನೆಯವರು ಆಕ್ಷೇಪ ಮಾಡಿದ್ದಲ್ಲಿ ಅವರು ತಮ್ಮ ಕನಸಿನ ಮನೆಯನ್ನು ಒಡೆಯ ಬೇಕಾದ ಸಂದರ್ಭ ಬರುತ್ತಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಆ ಜಾಗವನ್ನು ಪೂರ್ತಿಯಾಗಿ ವಿಷ್ಣುವರ್ಧನ್ ಅವರಿಗೆ ಬಿಟ್ಟುಕೊಟ್ಟು ಅಲ್ಲಿಂದ ಹೊರಟು ಹೋಗುತ್ತಾರೆ. ಇದು ವಿಷ್ಣುವರ್ಧನ್ ಅವರ ಸರಳತೆ ಮತ್ತು ವ್ಯಕ್ತಿತ್ವ ಹಾಗೂ ಜನಪ್ರಿಯತೆಯನ್ನು ತಿಳಿಸುತ್ತದೆ ಈಗ ಅದೇ ಜಾಗದಲ್ಲಿ ಹಳೆಯ ಮನೆಯನ್ನ ಕೆಡವಿ ಹೊಸ ರೀತಿಯಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ ಈ ಮನೆಯ ನಿರ್ಮಾಣಕ್ಕೆ ಬರೋಬ್ಬರಿ 30 ಕೋಟಿ ವೆಚ್ಚ ಮಾಡಲಾಗಿದೆ.

ಡಾಕ್ಟರ್ ವಿಷ್ಣುವರ್ಧನ್ ಅವರು ಮನೆಯೊಂದನ್ನು ಬಿಟ್ಟು ಹೆಚ್ಚಿನ ಆಸ್ತಿಯನ್ನೇನೂ ಮಾಡಿರಲಿಲ್ಲ ಇವರ ಜೀವನ ಶೈಲಿ ಸರಳವಾಗಿತ್ತು ಆದ್ದರಿಂದ ಅವರ ನೆಚ್ಚಿನ ಮನೆಯನ್ನ ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅತಿ ಹೆಚ್ಚು ಹೂಡಿಕೆ ಮಾಡಿ ಪರಿಪೂರ್ಣವಾಗಿ ಅದನ್ನು ನವೀಕರಣ ಮಾಡಲಾಗಿದೆ

ಈ ಮನೆಯಲ್ಲಿ ಭಾರತಿ ವಿಷ್ಣುವರ್ಧನ್ ಮಗಳು ಮತ್ತು ಅಳಿಯ ಅನಿರುದ್ಧ ಮತ್ತು ಅವರ ಮಕ್ಕಳು ವಾಸವಾಗಿದ್ದಾರೆ ವಿಷ್ಣುವರ್ಧನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಕೀರ್ತಿ ವಿಷ್ಣುವರ್ಧನ್ ಮತ್ತು ಚಂದನ ವಿಷ್ಣುವರ್ಧನ್ ಇಬ್ಬರು ಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು ವಿಷ್ಣುವರ್ಧನ್.

ಇನ್ನು ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ಹಲವು ಚರ್ಚೆ ನಡೆಯುತ್ತಿದೆ ಅಂತಿಮವಾಗಿ ಕುಟುಂಬದ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಯಿತು ಇದು ಕೇವಲ ಸ್ಮಾರಕವಾಗಿ ಉಳಿಯದೆ ಬದಲಾಗಿ ಒಂದು ಸಾಂಸ್ಕೃತಿಕ ಚಟುವಟಿಕೆಯ ತಾಣವಾಗಿ ಮಾರ್ಪಡಿಸಲಾಗಿದೆ ಆದರೆ ಅಭಿಮಾನಿಗಳಿಗೆ ಮೈಸೂರಿನಲ್ಲಿರುವ ಸ್ಮಾರಕ ಅಷ್ಟೊಂದು ತಪ್ತಿದಾಯಕವಾಗಿಲ್ಲ ಏಕೆಂದರೆ ಡಾಕ್ಟರ್ ವಿಷ್ಣುವರ್ಧನ್ ಅವರ ಅಂತಿಮ ವಿಧಿ ವಿಧಾನಗಳು ನಡೆದದ್ದು ಅಭಿಮಾನಿ ಸ್ಟುಡಿಯೋದಲ್ಲಿ ಆದುದರಿಂದ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಬೇಸರವಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: