ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದ ಅವರ ಅಭಿಮಾನಿಗಳು ಮೊನ್ನೆ ತಾನೆ ಅಪ್ಪು ಅವರ ಒಂದು ವರ್ಷದ ಪುಣ್ಯತಿಥಿಯನ್ನು ಬಹಳ ದುಃಖದಿಂದ ನೆರವೇರಿಸಿದರು. ಇನ್ನು ಅದೆಷ್ಟು ಅಭಿಮಾನಿಗಳು ಅಪ್ಪು ಸ-ಮಾಧಿಯ ಬಳಿಬಂದು ಕಣ್ಣೀರು ಹಾಕಿದ್ದರು. ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಅಪ್ಪುವರ ಕನಸಿನ ಹಾಗೂ ಕೊನೆಯ ಸಿನಿಮಾ ಗಂಧದಗುಡಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತದೆ. ಇದು ಅಪ್ಪವರ ಕೊನೆಯ ಸಿನಿಮಾ ಅವರನ್ನು ಕೊನೆಯ ಬಾರಿ ಕಣ್ತುಂಬ ಕೊಳ್ಳಬೇಕೆಂದು ಎಲ್ಲರೂ ಭಾವಿಸಿದ್ದಾರೆ.
ಇಂದು ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಅಪ್ಪು ಅವರನ್ನ ಸಿನೆಮಾಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ಎಷ್ಟೋ ಜನರಿಗೆ ಬೇಸರವನ್ನು ಉಂಟುಮಾಡಿತ್ತು. ಆದರೆ ಬೆಂಗಳೂರಿನ 3D VFX ಕಂಪನಿ ಯೊಂದು ತಾವು ಯಶಸ್ವಿಯಾಗಿ ಪುನೀತ್ ರಾಜ್ ಕುಮಾರ್ ಅವರನ್ನ ಯಶಸ್ವಿಯಾಗಿ ಮರುಸೃಷ್ಟಿ ಮಾಡಿ ತೋರಿಸಿದ್ದೇವೆ ಎಂದು ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ಇನ್ನು ಮುಂದೆ ಅಪ್ಪು ಅವರ ಗ್ರಾಫಿಕ್ ಸಿನಿಮಾಗಳು ತೆರೆಕಾಣಲಿದೆ. ಇದಕ್ಕೆ ಬೇಕಾದ ಸಕಲ ತಯಾರಿಗಳನ್ನು ಸಹ ಈಗಾಗಲೇ ಶುರು ಮಾಡಿದ್ದಾರೆ. ಅಪ್ಪು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ. ಇದೀಗ ಬೆಂಗಳೂರಿನ 3D VFX ಕಂಪನಿಯೊಂದು ಪುನೀತ್ ರಾಜಕುಮಾರ್ ಅವರನ್ನ ಯಶಸ್ವಿಯಾಗಿ ಮರುಸೃಷ್ಟಿ ಮಾಡಿದೆ.
ಈ ಒಂದು VFX ಎಷ್ಟರ ಮಟ್ಟಿಗೆ ರಿಯಲ್ ಆಗಿ ಇರುತ್ತೆ ಅಂದರೆ ಸಾಕ್ಷಾತ್ ಪುನೀತ್ ರಾಜಕುಮಾರ್ ಅವರೇ ನಟಿಸಿರುವಂತೆ ಕಾಣುತ್ತೆ. ಏಷ್ಯಾದಲ್ಲೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿ ಈ ಕಾರ್ಯ ಮಾಡಲಾಗಿದೆ. ಈ ಹಿಂದೆ ಈ ರೀತಿ ತಂತ್ರಜ್ಞಾನವನ್ನ ಸೂಪರ್ ಮ್ಯಾನ್ ಮತ್ತು ಬ್ಲಾಕ್ ಪ್ಯಾಂಥರ್ ಸಿನೆಮಾಗಳಲ್ಲಿ ಬಳಕೆ ಮಾಡಲಾಗಿತ್ತು. ಅಪ್ಪು ನಿಧನರಾದ 1 ವರ್ಷದ ನಂತರ ನವೆಂಬರ್ 30 ರಂದು ದಿನಗಳಲ್ಲಿ ರಿಯಲ್ ವಿಡಿಯೋವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ. video credit for Kannada tv