ಹಠಾತ್ತನೆ ಪುನೀತ್ ಅವರು ಹೃದಯಾಘಾತದಿಂದ ಮರಣ ಹೊಂದಿದರು ಅವರ ಮಗಳು ಧೃತಿ ಅಮೆರಿಕಾದಲ್ಲಿ ಓದುತ್ತಿದ್ದು ಅಪ್ಪನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೆ ಮನೆಗೆ ಬಂದರು. ಪುನೀತ್ ಅವರ ಅಂತ್ಯಸಂಸ್ಕಾರ ವಿಧಿ ವಿಧಾನಗಳು ಮುಗಿದ ನಂತರ ಧೃತಿ ಓದಲು ಮತ್ತೆ ಅಮೆರಿಕಕ್ಕೆ ಹೋಗುವ ನಿರ್ಧಾರ ಮಾಡಿದರು ಅಂತೆಯೆ ಹೋಗುವಾಗ ದೊಡ್ಡಪ್ಪ ಶಿವಣ್ಣ ಅವರ ಬಳಿ ಭಾಷೆಯನ್ನು ತೆಗೆದುಕೊಂಡು ಹೋದರು. ಹಾಗಾದರೆ ಧೃತಿ ಶಿವಣ್ಣ ಅವರ ಬಳಿ ಏನು ಹೇಳಿದಳು ಎಂದು ಈ ಲೇಖನದ ಮೂಲಕ ತಿಳಿಯೋಣ.
ಪವರ್ ಸ್ಟಾರ್ ಪುನೀತ್ ರಾಜಕುಮರ್ ಅವರನ್ನು ಕಳೆದುಕೊಂಡ ಅವರ ಮಕ್ಕಳು ಕಂಗಾಲಾಗಿದ್ದಾರೆ. ಸಾವು, ನೋವಿನ ವ್ಯಥೆಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ, ವಂದನಾ ಅವರು ಅನುಭವಿಸುತ್ತಿದ್ದಾರೆ. ಮನಸನ್ನು ಗಟ್ಟಿ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಬೇಕು ಎಂದು ನಿರ್ಧರಿಸಿ ಧೃತಿ ಅಮೆರಿಕಾಕ್ಕೆ ಮತ್ತೆ ವಾಪಸ್ ಹೋಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಧೃತಿ ಮನೆಯಿಂದ ಹೊರಡುವಾಗ ಪುನೀತ್ ಅವರ ಭಾವಚಿತ್ರದ ಎದುರು ನಿಂತು ಕಣ್ಣೀರು ಹಾಕಿದರು ಇದೆ ವೇಳೆ ಧೃತಿ ದೊಡ್ಡಪ್ಪ ಶಿವಣ್ಣ ಅವರ ಬಳಿ ಭಾಷೆಯನ್ನು ತೆಗೆದುಕೊಂಡು ಅಮೆರಿಕಕ್ಕೆ ಹೊರಟರು.
ಧೃತಿ ಅವರು ಎಂತಹ ಪರಿಸ್ಥಿತಿ ಬಂದರೂ ಓದುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಾ ಪುನೀತ್ ಅವರ ಒಂದು ಫೋಟೋವನ್ನು ತೆಗೆದುಕೊಂಡು ದೊಡ್ಡಪ್ಪ ಶಿವಣ್ಣ ಅವರನ್ನು ತಬ್ಬಿಕೊಂಡು ಅಮ್ಮ ಹಾಗೂ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬ ಭಾಷೆಯನ್ನು ಧೃತಿ ತೆಗೆದುಕೊಂಡಿದ್ದಾರೆ. ಆಗ ಶಿವಣ್ಣ ಧೃತಿಯನ್ನು ಸಮಾಧಾನ ಪಡಿಸಿ ನೀನು ನಿನ್ನ ಬಗ್ಗೆ ಕಾಳಜಿ ಮಾಡಿಕೊ ವಿದೇಶದಲ್ಲಿ ಒಬ್ಬಂಟಿಯಾಗಿ ಇರುತ್ತೀಯ, ಪ್ರತಿದಿನ ಫೋನ್ ಮಾಡಿ ಮಾತನಾಡು, ಚೆನ್ನಾಗಿ ಓದಿಕೊ ಎಂದು ಧೃತಿಯನ್ನು ತಬ್ಬಿಕೊಂಡು ಅವಳನ್ನು ಬೀಳ್ಕೊಟ್ಟರು.
ಧೃತಿ ಭಾರವಾದ ಮನಸ್ಸಿನಿಂದ ಅಮೆರಿಕಕ್ಕೆ ಹೋದರು ಅವಳನ್ನು ಬೀಳ್ಕೊಡುವಾಗ ಅಮ್ಮ ಅಶ್ವಿನಿ ಹಾಗೂ ತಂಗಿ ವಂದಿತಾ ಅವರು ದುಃಖದಿಂದ ಬೀಳ್ಕೊಟ್ಟರು. ನಮ್ಮೊಂದಿಗಿರಬೇಕಾದ ಪುನೀತ್ ಅವರು ಮರಣ ಹೊಂದಿದ್ದು ಅತೀವ ದುಃಖವನ್ನು ತರುತ್ತದೆ. ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಆಶಿಸೋಣ.