ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ನೇಮಕಾತಿ ಪ್ರಕಟಣೆ ಹೊರಡಿಸಿದೆ. 2980 ಬ್ರಹತ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ವಿವರಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟೂ ಹುದ್ದೆಗಳ ಸಂಖ್ಯೆ 2980 ಆಗಿರುತ್ತದೆ. ಇದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ. ಸಂಸ್ಥೆಯ ಹೆಸರು ನ್ಯಾಷನಲ್ ಹೆಲ್ತ್ ಮಿಷನ್ ಎಂದಾಗಿದ್ದು ಇದು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ.
ಹುದ್ದೆಗಳ ಹೆಸರು ಲ್ಯಾಬ್ ಟೆಕ್ನಿಷಿಯನ್ , ಸೀನಿಯರ್ ಟ್ರೀಟ್ಮೆಂಟ್ ಸೂಪರ್ವೈಸರ್ ಮತ್ತು ಸೀನಿಯರ್ ಲ್ಯಾಬೋರೇಟರಿ ಟೆಕ್ನಿಷಿಯನ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ ನೋಡುವುದಾದರೆ ಹತ್ತನೇ ತರಗತಿ, ಪಿಯುಸಿ ಅಥವಾ ಯಾವುದೇ ಡಿಗ್ರೀ ಆಗಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಆಗಿರಬೇಕು. ಇನ್ನೂ ವೇತನದ ಬಗ್ಗೆ ನೀಡುವುದಾದರೆ, 11,000 ರೂಪಾಯಿಯಿಂದ 28,015 ರೂಪಾಯಿ ಪ್ರತೀ ತಿಂಗಳು ವೇತನ ನೀಡಲಾಗುವುದು. ಉದ್ಯೋಗ ಸ್ಥಳ ಕರ್ನಾಟಕ.
ಇನ್ನೂ ಆಯ್ಕೆಯ ಪ್ರಕ್ರಿಯೆ ನೋಡುವುದಾದರೆ, ಶಾರ್ಟ್ ಲಿಸ್ಟ್ ಮತ್ತು ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುವುದು. ಅಭ್ಯತಿಗಳು ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನೂ ಭರಿಸ ಬೇಕಾಗುವುದಿಲ್ಲ.
ಪ್ರಮುಖ ದಿನಾಂಕಗಳನ್ನು ನೋಡುವುದಾದರೆ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 18/12/2021 ಆಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07/01/2022 ಆಗಿರುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.
https://cdn.digialm.com//EForms/confi…
ಈ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.