ಮನೆಯಲ್ಲಿ ಹಣ ನಿಲ್ಲುತ್ತಿಲ್ಲ ಬೇಗನೆ ಖರ್ಚಾಗುತ್ತದೆ ಇಂತಹ ಸಮಸ್ಯೆಗಳನ್ನು ನಾವು ಕೇಳಿರುತ್ತೇವೆ. ಈ ಸಮಸ್ಯೆಗೆ ಪರಿಹಾರವೆಂದರೆ ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸುವುದು. ಮನಿ ಪ್ಲಾಂಟ್ ಬೆಳೆಸುವಾಗ ಕೆಲವು ಅಂಶಗಳನ್ನು ಪಾಲಿಸಬೇಕು. ಹಾಗಾದರೆ ಮನಿ ಪ್ಲಾಂಟ್ ಹೇಗೆ ಬೆಳೆಸಬೇಕು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ಬಹಳಷ್ಟು ಜನರು ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಸಾಕಷ್ಟು ಪ್ರಮಾಣದಲ್ಲಿ ಹಣ ಬರುತ್ತದೆ ಹಾಗೂ ಮಾಡುವ ಕೆಲಸದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಈ ಮಾತು ನಿಜ ಆದರೆ ಮನಿ ಪ್ಲಾಂಟ್ ಮನೆಯಲ್ಲಿ ಇಡುವುದಾದರೆ ಕೆಲವು ನಿಯಮಗಳನ್ನು ತಿಳಿದುಕೊಳ್ಳಬೇಕು. ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಇಡುವುದಾದರೆ ಹಣ ಕೊಟ್ಟು ಕೊಂಡುಕೊಳ್ಳಬಾರದು ಸುಖ ಸಮೃದ್ಧಿ ಇರುವ ಮನೆಯಲ್ಲಿ ಇರುವ ಮನಿ ಪ್ಲಾಂಟ್ ಅನ್ನು ನಮ್ಮ ಮನೆಗೆ ತರಬೇಕಾಗುತ್ತದೆ. ಅವರ ಮನೆಯಲ್ಲಿ ಕೇಳಿ ಮನಿ ಪ್ಲಾಂಟ್ ಅನ್ನು ತರಬಾರದು ಕೇಳದೆ ತರಬೇಕು ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಕಂಡುಬರುತ್ತದೆ.
ಮನೆಯಲ್ಲಿ ಇರುವ ಮನಿ ಪ್ಲಾಂಟ್ ನಲ್ಲಿ ಒಂದು ಎಲೆ ಹಾಳಾಗಿದ್ದರೆ ಅಥವಾ ಸುಟ್ಟು ಹೋಗಿದ್ದರೆ ಆ ಎಲೆಯನ್ನು ಕೈಯಿಂದ ಕೀಳಬಾರದು ಕತ್ತರಿಯಲ್ಲಿ ಕತ್ತರಿಸಬೇಕು. ಇಂತಹ ಚಿಕ್ಕ ಚಿಕ್ಕ ತಪ್ಪುಗಳನ್ನು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಡುತ್ತದೆ ಆದ್ದರಿಂದ ಇಂತಹ ತಪ್ಪುಗಳನ್ನು ಜೀವನದಲ್ಲಿ ಮಾಡಬಾರದು. ಮನಿ ಪ್ಲಾಂಟ್ ನ ಬೇರು ಯಾರಿಗೂ ಕಾಣಿಸುವಂತೆ ಇಡಬಾರದು. ಪೋಟ್ ನಲ್ಲಿ ಮನಿ ಪ್ಲಾಂಟ್ ಅನ್ನು ಬೆಳೆಸುತ್ತಾರೆ ಆದರೆ ಹೀಗೆ ಬೆಳೆಸಬಾರದು ಒಂದು ವೇಳೆ ಪೋಟ್ ನಲ್ಲಿ ಬೆಳೆಸಿದರೆ ಅದರ ಬೇರುಗಳನ್ನು ಕಾಣಿಸದೆ ಇರುವ ಹಾಗೆ ಮಣ್ಣಿನಲ್ಲಿ ಮುಚ್ಚಿ ಇಡಬೇಕು, ಇಲ್ಲದಿದ್ದರೆ ಈ ಗಿಡದಿಂದ ಆಗುವ ಲಾಭ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಈ ಗಿಡವನ್ನು ಮನೆಯ ಮುಖ್ಯ ದ್ವಾರದ ಒಳಗೆ ಇಡುವುದು ಒಳ್ಳೆಯದು. ಮನೆಯ ಒಳಗೆ ಈ ಗಿಡವನ್ನು ಇಡುವುದರಿಂದ ಮನೆಯವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
ಎಲ್ಲ ಗಿಡಗಳಿಗೆ ನೀರನ್ನು ಹಾಕುವಂತೆ ಮನಿಪ್ಲಾಂಟ್ ಗೂ ನೀರನ್ನು ಹಾಕಬೇಕು ನೀರನ್ನು ಹಾಕುವಾಗ ಎರಡು ಚಮಚ ಹಾಲನ್ನು ಹಾಕಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗಿಡದ ಪಾಲನೆ ಪೋಷಣೆ ಸರಿಯಾಗಿ ಆಗುತ್ತದೆ ಗಿಡ ಬೇಗನೆ ಬೆಳೆಯುತ್ತದೆ. ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಮನಿ ಪ್ಲಾಂಟ್ ನಲ್ಲಿ ವಿವಿಧ ತಳಿಗಳಿರುತ್ತದೆ ಅದರಲ್ಲಿ ಎಲೆಗಳು ರೌಂಡ್ ಆಗಿರುವ ಹಾಗೂ ಎಲೆಗಳು ಹೆಚ್ಚು ಹಸಿರಾಗಿರುವ ಗಿಡಗಳನ್ನು ತರಬೇಕು. ಈ ಕೆಲವು ಅಂಶಗಳನ್ನು ನೆನಪಿಟ್ಟುಕೊಂಡು ಮನಿ ಪ್ಲಾಂಟ್ ಬೆಳೆಸಬೇಕು. ಮನಿ ಪ್ಲಾಂಟ್ ಬೆಳೆಸುವುದರಿಂದ ಅನೇಕ ರೀತಿಯಲ್ಲಿ ಮನೆಯವರಿಗೆ ಒಳ್ಳೆಯದಾಗುತ್ತದೆ ಅಲ್ಲದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕಂಡುಬರುತ್ತದೆ. ಈ ಮಾಹಿತಿ ಉಪಯುಕ್ತವಾಗಿದೆ ನೀವು ಮನಿ ಪ್ಲಾಂಟ್ ತಂದು ಬೆಳೆಸಿ ಹಾಗೆಯೆ ಎಲ್ಲರಿಗೂ ತಿಳಿಸಿ.