ಮನೆಯಲ್ಲಿ ಆನೆಯ ಗೊಂಬೆ ಇದ್ರೆ ನಿಜಕ್ಕೂ ಅದೃಷ್ಟನಾ ತಿಳಿದುಕೊಳ್ಳಿ

0

ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಮನೆಗೆ ಶುಭ ತರುತ್ತದೆ ಅಲ್ಲದೆ ಅದೃಷ್ಟ ನಿಮ್ಮದಾಗುತ್ತದೆ. ಮನೆಯಲ್ಲಿ ಆನೆ ಗೊಂಬೆಗಳನ್ನು ಇಡುವುದರಿಂದ ಅದೃಷ್ಟ ಮನೆಗೆ ಬರುತ್ತದೆ. ಹಾಗಾದರೆ ಯಾವ ಯಾವ ರೀತಿಯ ಆನೆ ಗೊಂಬೆಗಳನ್ನು ಮನೆಯಲ್ಲಿ ಇಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮನೆಯಲ್ಲಿ ಆನೆ ಗೊಂಬೆಗಳು ಇದ್ದರೆ ಅದೃಷ್ಟ ತಂದುಕೊಡುತ್ತದೆ ಎಂದು ಹೇಳುತ್ತಾರೆ. ಆನೆ ಗೊಂಬೆಗೂ ಅದೃಷ್ಟಕ್ಕೂ ಏನು ಸಂಬಂಧ ಎಂದು ಅನಿಸುವುದು ಸಹಜ ಕೆಲವು ವಿಷಯ ಆಶ್ಚರ್ಯ ಎನಿಸಿದರೂ ಅದು ನಿಜವಾಗಿರುತ್ತದೆ. ಇಂತಹ ನಂಬಿಕೆಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟಿದೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಕೆಲವು ಆಚರಣೆಗಳನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ನಮ್ಮ ಪೂರ್ವಜರು ಕೆಲವು ವಿಷಯಗಳನ್ನು ಪರಿಶೀಲಿಸಿ ಸುಲಭ ಉಪಾಯಗಳನ್ನು ಹೇಳಿದ್ದಾರೆ.

ಅವರು ಹಾಕಿಕೊಟ್ಟ ನಿಯಮಗಳನ್ನು ಪಾಲನೆ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ. ಪೂರ್ವಜರು ಹೇಳಿಕೊಟ್ಟ ಕೆಲವು ಸಂಪ್ರದಾಯಗಳಲ್ಲಿ ಮನೆಯಲ್ಲಿ ಆನೆ ಗೊಂಬೆಯನ್ನು ಇಟ್ಟುಕೊಳ್ಳುವ ಆಚರಣೆಯು ಒಂದು. ಆನೆಗಳು ಹೋರಾಟಕ್ಕೆ, ಸಂತಾನೋತ್ಪತ್ತಿಗೆ ಶುಭ ಸೂಚಕಕ್ಕೆ ಸಂಕೇತವಾಗಿದೆ. ಸೊಂಡಿಲನ್ನು ಮೇಲಕ್ಕೆತ್ತಿದ ಆನೆಯ ಗೊಂಬೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಗೆ ಅದೃಷ್ಟ ತಂದುಕೊಡುತ್ತದೆ ಎಂದು ಹೇಳುತ್ತಾರೆ. ಆನೆ ಗೊಂಬೆಗಳನ್ನು ಮುಖ್ಯವಾಗಿ ಮನೆಯ ಗೇಟಿನ ಮುಂದೆ ಇಡಬೇಕು ಎಂದು ಹೇಳುತ್ತಾರೆ ಇದರಿಂದ ದುಷ್ಟ ಶಕ್ತಿಗಳು ಮನೆಯ ಒಳಗೆ ಬರದಂತೆ ತಡೆಯುತ್ತದೆ. ಹಿಂದಿನ ಕಾಲದಲ್ಲಿ ದೇವಾಲಯಗಳಲ್ಲಿ, ಮನೆಗಳಲ್ಲಿ ಆನೆ ಗೊಂಬೆಗಳನ್ನು ಇಟ್ಟಿರುವುದನ್ನು ನಾವು ನೋಡುತ್ತೇವೆ ಇದರಿಂದ ದುಷ್ಟ ಶಕ್ತಿ ಮನೆಯ ಒಳಗೆ ಬರುತ್ತಿರಲಿಲ್ಲ.

ಮಲಗುವ ಕೋಣೆಯಲ್ಲಿ ಜೋಡಿ ಆನೆ ಗೊಂಬೆಗಳನ್ನು ಅಥವಾ ಆನೆಯ ಫೋಟೋಗಳನ್ನು ಇಟ್ಟುಕೊಂಡರೆ ದಾಂಪತ್ಯ ಜೀವನದಲ್ಲಿ ಸುಖ, ನೆಮ್ಮದಿ ಇರುತ್ತದೆ ಅಲ್ಲದೆ ಒಳ್ಳೆಯ ಸಂತಾನ ಭಾಗ್ಯ ಲಭಿಸುತ್ತದೆ. ಮಕ್ಕಳ ಕೋಣೆಯಲ್ಲಿ ಸ್ಟಡಿ ಟೇಬಲ್ ಮೇಲೆ ಆನೆ ಗೊಂಬೆಗಳನ್ನು ಇಟ್ಟರೆ ಅವರ ಬುದ್ದಿವಂತಿಕೆ ಹಾಗೂ ಜ್ಞಾನ ವೃದ್ಧಿಸುತ್ತದೆ. ಕೆಲವು ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಮನಸ್ತಾಪ, ವೈಮನಸ್ಸು ಕಾಡುತ್ತದೆ ಮಕ್ಕಳ ಮಾತನ್ನು ಹಿರಿಯರು ಕೇಳುವುದಿಲ್ಲ ಹಿರಿಯರ ಮಾತನ್ನು ಮಕ್ಕಳು ಕೇಳುವುದಿಲ್ಲ ಇಂತಹ ಮನೆಗಳಲ್ಲಿ ಒಂದು ದೊಡ್ಡ ಆನೆ ಹಾಗೂ ಮರಿ ಆನೆಯ ಗೊಂಬೆಗಳನ್ನು ಅಥವಾ ಫೋಟೋಗಳನ್ನು ಇಟ್ಟುಕೊಂಡರೆ ಸಂಬಂಧ ಸರಿಯಾಗಿ ಬಾಂಧವ್ಯ ಬೆಳೆಯುತ್ತದೆ ವೈಮನಸ್ಸು, ಮನಸ್ತಾಪ ದೂರ ಆಗುತ್ತದೆ.

ವೃತ್ತಿ ಜೀವನದಲ್ಲಿ ಯಶಸ್ಸು ಪಡೆದು ಉತ್ತಮ ಸ್ಥಾನ ಪಡೆಯಬೇಕು ಎಂದಾದರೆ ಮನೆಯಲ್ಲಿ ಆನೆಯ ಮೇಲೆ ಮಂಗ ಕುಳಿತಿರುವ ಫೋಟೊ ಅಥವಾ ಗೊಂಬೆಗಳನ್ನು ಇಟ್ಟರೆ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ. ವ್ಯಾಪಾರದ ಅಂಗಡಿಗಳಲ್ಲಿ ಆನೆ ಗೊಂಬೆಯನ್ನು ಇಟ್ಟರೆ ಕಸ್ಟಮರ್ಸ್ ಗಳನ್ನು ಆಕರ್ಷಿಸಿ ಒಳ್ಳೆಯ ಲಾಭದ ವ್ಯಾಪಾರಗಳನ್ನು ಮಾಡಬಹುದು. ಸೊಂಡಿಲನ್ನು ಮೇಲೆ ಮಾಡಿರುವ ಆನೆ ಫೋಟೊ ಅಥವಾ ಆನೆ ಗೊಂಬೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಶುಭವಾಗುತ್ತದೆ. ಆನೆ ಗೊಂಬೆಗಳನ್ನು ಮನೆಯಲ್ಲಿ ಇಡುವಾಗ ಆನೆ ಮನೆಯ ಒಳಗೆ ಪ್ರವೇಶಿಸುವಂತೆ ಇರಬೇಕು ಮನೆಯಿಂದ ಹೊರ ಹೋಗುವಂತೆ ಇರಬಾರದು. ಈ ರೀತಿಯಾಗಿ ಮನೆಯಲ್ಲಿ ಆನೆ ಗೊಂಬೆಗಳನ್ನು ಇಡುವ ಮೂಲಕ ಅದೃಷ್ಟವನ್ನು ನಿಮ್ಮ ಮನೆಗೆ ಬರುವಂತೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ತಿಳಿಸಿ.

Leave A Reply

Your email address will not be published.

error: Content is protected !!