WhatsApp Group Join Now
Telegram Group Join Now

ಜಮೀನಿಗೆ ಸಂಬಂಧಿಸಿ ಪಹಣಿ ಪತ್ರ ಎನ್ನುವುದಿರುತ್ತದೆ. ಪಹಣಿ ಪತ್ರದಲ್ಲಿ ಸುತ್ತ ಮುತ್ತ ಜಮೀನಿನಲ್ಲಿ ಇರುವವರ ಹೆಸರು ಜಾಯಿಂಟ್ ಆಗಿ ಇರುತ್ತದೆ ಆದರೆ ಹಿಸ್ಸಾ ಸಂಖ್ಯೆಯ ಮೂಲಕ ಒಬ್ಬರ ಹೆಸರಿನ ಪಹಣಿ ಪತ್ರಕ್ಕಾಗಿ ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ನೋಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅನೇಕ ರೈತರು ತಮ್ಮ ಜಮೀನಿನ ಪಹಣಿ ಪತ್ರವನ್ನು ಫಾರ್ಮ್ ನಂಬರ್ 10 ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುತ್ತಾರೆ. ಒಂದೆ ಪಹಣಿ ಪತ್ರದಲ್ಲಿ ಜಮೀನಿನ ಸುತ್ತ ಮುತ್ತಲು ಇರುವವರ ಹೆಸರುಗಳು ಅಂದರೆ ಒಂದೆ ಸರ್ವೆ ನಂಬರ್ ನಲ್ಲಿ ಎಲ್ಲರ ಹೆಸರುಗಳು ಜಾಯಿಂಟ್ ಆಗಿ ಪಹಣಿ ಪತ್ರ ಇರುತ್ತದೆ. ಅವುಗಳನ್ನು ಹಿಸ್ಸಾ ಪ್ರಕಾರ ಬೇರೆ ಬೇರೆ ಮಾಡಲು ಹಲವು ರೈತರು ನಾಡಕಛೇರಿ, ಭೂ ಮಾಪನ ಮತ್ತು ಭೂ ಕಂದಾಯ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಲು ಹಲವು ಕಾರಣಗಳಿರುತ್ತವೆ.

ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ತಮ್ಮ ಪಹಣಿಯನ್ನು ಫಾರ್ಮ್ ನಂಬರ್ 10 ಮಾಡಿಕೊಂಡು ಮಾರಾಟ ಮಾಡುತ್ತಾರೆ. ಜಮೀನನ್ನು ಮಾರಾಟ ಮಾಡುವಾಗ ಪಹಣಿಯಲ್ಲಿ ಜಾಯಿಂಟ್ ಆಗಿ ಎಲ್ಲರ ಹೆಸರಿರುತ್ತದೆ ಆದರೆ ಜಮೀನು ಕೊಂಡುಕೊಳ್ಳುವವರು ಹಿಸ್ಸಾ ಸಂಖ್ಯೆಯ ಮೇಲೆ ಒಬ್ಬರ ಹೆಸರು ಇರುವ ಪಹಣಿ ಬೇಕೆಂದು ಬಯಸುತ್ತಾರೆ.

ಒಂದೆ ಸರ್ವೆ ನಂಬರ್ ನಲ್ಲಿ ಬಹಳಷ್ಟು ಪಹಣಿಗಳು ಜಾಯಿಂಟ್ ಆಗಿ ಇರುವುದರಿಂದ ರೈತರು ವ್ಯವಹಾರದಲ್ಲಿ ಬಹಳ ತೊಂದರೆ ಎದುರಿಸಬೇಕಾಗುತ್ತದೆ. ಒಂದೆ ಸರ್ವೆ ನಂಬರ್ ನಲ್ಲಿ ಬೇರೆ ಬೇರೆ ಭಾಗಗಳಾಗಿ ಹಿಸ್ಸಾ ಅಥವಾ ಬಾಟಗಳಾಗಿ ಮಾಡಿಕೊಳ್ಳಲು ರೈತರು ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಿದ ಮೇಲೆ ಅವರಿಗೆ ಒಂದು ರಶೀದಿ ನೀಡುತ್ತಾರೆ. ಆ ರಶೀದಿಯ ಮೂಲಕ ನಮ್ಮ ಜಮೀನಿನ ಫೈಲ್ ಯಾವ ಅಧಿಕಾರಿಯ ಬಳಿ ಇದೆ ಎಂದು ತಿಳಿದುಕೊಳ್ಳಬಹುದು.

ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ನ ಸರ್ಚ ಬಾರ್ ನಲ್ಲಿ SSLR ಎಂದು ಟೈಪ್ ಮಾಡಿ ಸರ್ಚ್ ಮಾಡಿದಾಗ ಒಂದು ಅಫೀಷಿಯಲ್ ವೆಬ್ ಸೈಟ್ ಓಪನ್ ಆಗುತ್ತದೆ ಅಲ್ಲಿ ಕೆಳಗೆ ಎಡಗಡೆಗೆ ಅರ್ಜಿ ಸಂಖ್ಯೆ ದಾಖಲಿಸಿ ಮತ್ತು ನಿಮ್ಮ ಅರ್ಜಿ ಯಾವ ಹಂತದಲ್ಲಿ ಇದೆ ಎನ್ನುವುದನ್ನು ನೋಡಲು ಬಟನ್ ಅನ್ನು ಕ್ಲಿಕ್ ಮಾಡಿ ಎಂದು ಇದೆ ಮತ್ತು ಅದರ ಕೆಳಗೆ ಒಂದು ಕಾಲಂ ಇದೆ ಅದರಲ್ಲಿ ರಶೀದಿಯ ಸಂಖ್ಯೆಯನ್ನು ಹಾಕಬೇಕು ನಂತರ ಇಂಗ್ಲೀಷ್ ನಲ್ಲಿ ನೋಡಬೇಕಾದರೆ ಇಂಗ್ಲೀಷ್ ಎಂದು ಕನ್ನಡದಲ್ಲಿ ನೋಡಬೇಕಾದರೆ ಕನ್ನಡ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.

ಆಗ ನಿಮ್ಮ ಅರ್ಜಿ ಯಾವ ಅಧಿಕಾರಿಯ ಬಳಿ ಇದೆ ಎನ್ನುವುದನ್ನು ನೋಡಬಹುದು. ಹೀಗೆ ಸುಲಭವಾಗಿ ರೈತರು ಹಾಕಿದ ಅರ್ಜಿ ಯಾವ ಹಂತದಲ್ಲಿದೆ ಎನ್ನುವುದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನೋಡಬಹುದು ಇದಕ್ಕೆ ಯಾವುದೆ ರೀತಿಯ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅದರಲ್ಲೂ ರೈತರಿಗೆ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: