ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ ಪುನೀತ್ ರಾಜ್ಕಕುಮಾರ್ ಹಾಗಾಗಿ ಅಪ್ಪು ಎಂದರೆ ಅವರ ಇಡೀ ಕುಟುಂಬದಲ್ಲಿ ಹಾಗೂ ಎಲ್ಲರಿಗೂ ಅಚ್ಚುಮೆಚ್ಚು. ರಾಜಕುಮಾರ್ ಅವರು ಮೂವತ್ತು ವರ್ಷ ಬಾಳಿ ಬದುಕಿದ ಸದಾಶಿವ ನಗರದ ಮನೆಯಲ್ಲಿ ನಾಲ್ಕು ಅಂತಸ್ತಿನ ಎರಡು ಮನೆಯನ್ನು ನಿರ್ಮಿಸಲಾಗಿದೆ ಒಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರು ವಾಸವಾಗಿದ್ದಾರೆ ಹಾಗೆಯೇ ಇನ್ನೊಂದು ಮನೆಯಲ್ಲಿ ಪುನೀತ್ ರಾಜಕುಮಾರ್ ಅವರು ವಾಸವಾಗಿದ್ದರು
ಮೊದಲು ಇದ್ದ ಸದಾಶಿವ ನಗರದ ಮನೆಯನ್ನು ಡೇಮಾಲಿಶ್ ಮಾಡುವ ವೇಳೆ ಪುನೀತ್ ಮತ್ತು ರಾಘಣ್ಣ ನ ಫ್ಯಾಮಿಲಿ ಅಶೋಕ್ ಹೋಟೆಲ್ ಅಲ್ಲಿ ಬಾಡಿಗೆಗೆ ಇರುತ್ತಾರೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಯಷ್ಟು ಬಾಡಿಗೆಯನ್ನು ಕಟ್ಟುತ್ತಾ ಇರುತ್ತಾರೆ .ಒಂದು ಮನೆ ಇದ್ದ ಜಾಗದಲ್ಲಿ ಎರಡು ಮನೆ ನಿರ್ಮಾಣ ಆಗುತ್ತದೆ ನಾವು ಈ ಲೇಖನದ ಮೂಲಕ ಪುನೀತ ಅವರ ಮನೆಯ ಬಗ್ಗೆ ತಿಳಿದುಕೊಳ್ಳೋಣ.
ಕರುನಾಡಿನಲ್ಲಿ ಅಪ್ಪು ನೆನಪು ಮಾತ್ರ ಅಪ್ಪು ಅವರಿಗೆ ಅಭಿಮಾನಿಗಳೇ ದೊಡ್ಡ ಆಸ್ತಿ ಕರುನಾಡಿನ ನಟ ಡಾಕ್ಟರ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಕೂಡ ಅಭಿಮಾನಿಗಳನ್ನು ದೇವರೆಂದೇ ಕರೆಯುತ್ತಾರೆ ಡಾಕ್ಟರ ರಾಜಕುಮಾರ್ ಅವರ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರಾದ ಎ ವಿ ಮೇಯಪ್ಪ ಅವರಿಂದ ಬೆಂಗಳೂರಿನ ಸದಾಶಿವ ನಗರದಲ್ಲಿ ತಮ್ಮ ಕೂಡು ಕುಟುಂಬಕ್ಕೆ ಸರಿ ಯಾಗುವಂತಹ ಬಂಗಲೆಯನ್ನು ಕೊಂಡುಕೊಂಡರು ರಾಜಕುಮಾರ್ ಅವರುಹನ್ನೆರಡು ಲಕ್ಷಕ್ಕೆ ಖರೀದಿ ಮಾಡಿದರು ರಾಜಕುಮಾರ್ ಅವರು ಮೂವತ್ತು ವರ್ಷಕ್ಕೂ ಹೆಚ್ಚು ಸಮಯವನ್ನು ಕಳೆದಿದ್ದಾರೆ ಕಾಲ ಬದಲಾದಂತೆ ಹಾಗೂ ಮನೆಯ ಸದಸ್ಯರು ಹೆಚ್ಚಾದಂತೆ ದೊಡ್ಡ ಮನೆಯನ್ನು ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ ಅವರು ನವೀಕರಣಗೊಳಿಸಿದರು.
ಬಹಳ ಅದ್ಬುತವಾಗಿ ಮನೆಯನ್ನು ನವೀಕರಣಗೊಳಿಸಿದ್ದರು ರಾಜಕುಮಾರ ಅವರು ಇದ್ದಾಗಲೇ ಮನೆಯನ್ನು ನವಿಕರಿಸಬೇಕು ಎಂದು ಕೊಂಡಿದ್ದರು ಆದರೆ ಅದು ಸಾಧ್ಯವೇ ಆಗಲಿಲ್ಲ ಹಳೆ ಮನೆ ಇದ್ದ ಜಾಗದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿದ್ದಾರೆ ಒಂದು ಮನೆಯಲ್ಲಿ ಅಪ್ಪು ಅವರ ಕುಟುಂಬ ಹಾಗೆಯೇ ಇನ್ನೊಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕುಟುಂಬ ನೆಲೆಸಿದೆ ತುಂಬಾ ಆಧುನಿಕ ಡಿಸೈನ್ ಬಳಸಿ ಮನೆಯನ್ನು ನವೀಕರಣ ಮಾಡಲಾಗಿದೆ.
ಪುನೀತ ಅವರ ಮನೆಯನ್ನು ನೋಡಲು ತುಂಬಾ ಸುಂದರವಾಗಿದೆ ರಾಜ ಕುಟುಂಬದ ಬಂಗಲೆಯಲ್ಲಿ ವಿಶಾಲವಾದ ಕೊಠಡಿಗಳು ಇದೆ ಮನೆಯಲ್ಲಿ ಯಾರಾದರೂ ಅತಿಥಿ ಅಂದರೆ ಅಲ್ಲಿಯೇ ಕೂತು ಮಾತನಾಡುತ್ತಾರೆ ಪುನೀತ್ ಅವರ ಮನೆ ಐವತ್ತು ಕೋಟಿ ಮೌಲ್ಯದ ಮನೆಯಾಗಿದೆ ಅಪ್ಪು ಪತ್ನಿ ಅಶ್ವಿನಿಯವರ ಅಭಿರುಚಿಗೆ ತಕ್ಕಂತೆ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ. ಇವರ ಮನೆಯ ಒಳಾಂಗಣ ಅಚ್ಚ ಹಸುರಿಂದ ಕೂಡಿದೆ ಹಬ್ಬದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಸೇರುವ ಕಾರಣ ಎಲ್ಲರೂ ಕೂಡಿ ಇರಲು ಸರಿಹೊಂದುವಂತಹ ವಿಶಾಲವಾದ ಒಳಂಗಣವನ್ನು ಮಾಡಿದ್ದಾರೆ ಹೀಗೆ ಪುನೀತ್ ರಾಜ ಕುಮಾರ್ ಅವರ ಮನೆ ಇಷ್ಟು ವಿಶಾಲವಾಗಿದೆ .