ಕನ್ನಡ ಚಿತ್ರರಂಗದ ಧ್ರುವ ತಾರೆ ಪುನೀತ್ ರಾಜ್‌ಕುಮಾರ್ ಇಂದು ನಮ್ಮ ನಡುವೆ ಇಲ್ಲಾ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಸಾವು ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತ ಉಂಟು ಮಾಡಿದೆ. 46 ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ, ರಾಜ್ ಕುಟುಂಬಕ್ಕೆ ಹಾಗೂ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟವಾಗಿದೆ. ಅಪ್ಪುವನ್ನ ಕಳೆದುಕೊಂಡ ಈ ನೋವು ತುಂಬಾ ಕಾಡುತ್ತಿರುತ್ತದೆ. ಚಿಕ್ಕ ವಯಸ್ಸಿನಿಂದಲೂ ನಾವು ಅವನನ್ನು ಆರಾಧಿಸಿದ್ದೇವೆ ಅವನ ಬೆಳವಣಿಗೆ ನೋಡಿ ಖುಷಿ ಪಟ್ಟಿದ್ದೆವೆ, ನಮಗೆ ಇಷ್ಟು ನೋವು ಆಗಿದೆ ಎಂದ ಮೇಲೆ ಅಭಿಮಾನಿಗಳಿಗೆ ಹೇಗಾಗಿರಬಹುದು ಅನ್ನೋ ಅಂದಾಜು ಕೂಡ ಕಷ್ಟವೇ. ಪುನೀತ್ ಗೆ ಜನರು ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲಾ.
ಇಡೀ ದೇಶದ ಜನರು ಅವನನ್ನು ಕೊಂಡಾಡುತ್ತಿದ್ದಾರೆ ಎಂದರೆ ಅದಕ್ಕೆ ಅವನ ವ್ಯಕ್ತಿತ್ವವೇ ಕಾರಣ, ನಾವು ಮೂವರು ಸಹೋದರರು ಒಟ್ಟಾಗಿ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು ಹಾಗೆ ನನ್ನ ಸಿನಿಮಾಗೆ ನಿರ್ದೇಶನ ಮಾಡಬೇಕು ಅಂತ ಅವನೆ(ಅಪ್ಪು)ಹೇಳಿ ಕೊಂಡಿದ್ದ ಆದರೆ ಅದು ಕೂಡ ಈಡೇರಿಲಿಲ್ಲ ಎಂಬುದನ್ನು ನೆನಪಿಸಿ ಕೊಂಡಾಗಲೆಲ್ಲಾ ತುಂಬಾ ನೋವಾಗುತ್ತದೆ ಎಂದು ಶಿವಣ್ಣ ಹೇಳಿದ್ದರು. ಅಪ್ಪು ಯಾವಾಗಲೂ ಮಕ್ಕಳ ಜೊತೆ ಮಕ್ಕಳಾಗಿಯೇ ಇರುತ್ತಿದ್ದ, ಅಪ್ಪು ಮತ್ತು ನನ್ನ ಹಿರಿಯ ಮಗಳಿಗೂ ವಯಸ್ಸಿನ ಅಂತರ ಕೇವಲ 11 ವರ್ಷ ಮಾತ್ರ.. ಮಕ್ಕಳೆಂದ್ರೆ ಅಪ್ಪುಗೆ ತುಂಬಾ ಪ್ರೀತಿ. ನನಗೂ ಅಪ್ಪುಗೂ 13 ವರ್ಷ ವಯಸ್ಸಿನ ಅಂತರವಷ್ಟೇ. ನಾನು ಹೀರೋ ಆಗಿ ನಟನೆ ಮಾಡುವಾಗ ಅಪ್ಪು ಗೆ 11 ವರ್ಷ. ಗೀತಾ ಮತ್ತು ನನ್ನ ಮದುವೆ ಆದಾಗ ಅಪ್ಪು ಇನ್ನೂ ಚಿಕ್ಕವನಿದ್ದ.
ಅಪ್ಪು ನಮಗೆ ಮಗನಿದ್ದಂತೆ, ಅಪ್ಪುವಿನಲ್ಲಿ ಒಳ್ಳೆತನ, ಪ್ರೀತಿ, ನಿಷ್ಠೆ, ಎಲ್ಲವೂ ಇತ್ತು,. ಸಿನಿಮಾದಲ್ಲಿ ಯಾರಾದರೂ ಅಪ್ಪುನ ಬೈದ್ರೆ ಕೋಪ ಬರ್ತಿತ್ತು, ಅವನಿಗೆ ಹಳ್ಳಿಯ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ನಾವಿಬ್ಬರೂ ಸೇರಿ ಸಿನಿಮಾ ಮಾಡೋಣ ಎಂದು ಅಪ್ಪು ಹೇಳುತ್ತಿದ್ದ ಆದರೆ ಆ ವಿಧಿ ಅವಕಾಶ ಕೊಡಲಿಲ್ಲ ಎಂದು ಕಣ್ಣೀರು ಹಾಕಿದರು. ಅಪ್ಪು ಸಾವಿನ ನಂತರ ಶಿವರಾಜ್ ಕುಮಾರ್ ತುಂಬಾ ಸೈಲೆಂಟ್ ಆಗಿದ್ದಾರೆ, ಈ ಸಾವು ಅವರಿಗೆ ತೀವ್ರ ನೋವನ್ನು ತಂದಿದೆ. ಇದನ್ನು ಅರಗಿಸಿ ಕೊಳ್ಳಲು ಯಾರಿಂದಲೂ ಇನ್ನೂ ಸಾಧ್ಯವಾಗುತ್ತಿಲ್ಲ..
ಒಬ್ಬ ಮಗನನ್ನು ಕಳೆದು ಕೊಂಡಂತೆ ಆಗಿದೆ, ಬಲಗೈ ಹೋಗಿಬಿಟ್ಟಿದೆ ಎನಿಸುತ್ತಿದೆ. ಅಳಬಹುದು , ದುಃಖ ತೋಡಿಕೊಳ್ಳಬಹುದು ಆದರೆ ನಾನು ಜೀವಂತ ಇರುವವರೆಗೂ, ಜೀವ ಹೋದ ಮೇಲೂ ಈ ನೋವು ಹೋಗುತ್ತೊ ಇಲ್ಲವೋ ಗೊತ್ತಿಲ್ಲ ಎಂದಿದ್ದರು ಭಾವುಕರಾಗಿ. ಆದರೆ ಇತ್ತೀಚೆಗೆ ಶಿವಣ್ಣ ತುಂಬಾ ಒಂಟಿತನ ಅನುಭವಿಸುತ್ತಿದ್ದಾರೆ, ಸದಾ ಅಪ್ಪುವಿನ ಫೋಟೋ ಮತ್ತು ವೀಡಿಯೋಸ್ ನೋಡುತ್ತಾ ಯಾವಾಗಲೂ ಮೌನವಾಗಿ ಕುಳಿತಿರುತ್ತಾರೆ.