ಜೀವನದ ಪ್ರತಿಯೊಂದು ದಿನವು ನಮ್ಮನ್ನ ಮೃತ್ಯುವಿನ ಹತ್ತಿರಕ್ಕೆ ಕೊಂಡೊಯ್ಯುತ್ತಿರುತ್ತದೆ ಎಂಬುದನ್ನು ನಾವು ಸದಾ ಅರಿತಿರಬೇಕು, ಗುರುವು ನಿನಗೆ ಮಾರ್ಗದರ್ಶನ ಮಾತ್ರ ಮಾಡುತ್ತಾನೆ. ಅದನ್ನು ಪಡೆಯುವುದಕ್ಕೆ ಸಾಧನೆಯನ್ನು ನೀನೇ ಮಾಡಬೇಕು.
ಕೆದಿಗೆಯ ಸಣ್ಣ ಎಸಳಿನಲ್ಲಿರುವ ಪರಿಮಳ ದೊಡ್ಡ ಎಸಳಿನಲ್ಲಿ ಇಲ್ಲಾ. ಅದರಂತೆಯೇ ಹಿರಿತನ ಎನ್ನುವುದು ವಯಸ್ಸಿನಲ್ಲಿ ಇಲ್ಲಾ ಗುಣದಲ್ಲಿದೆ. ಸದ್ಗುಣ ಎನ್ನುವುದು ಸುಗಂಧ ದ್ರವ್ಯದಂತೆ ಉರಿದಾಗ ಅರೆದಾಗ ಅದರ ಸುವಾಸನೆ ಹೆಚ್ಚುತ್ತದೆ. ಕಾರ್ಯಶೀಲನ ಮರಣ ಎಂದೆಂದಿಗೂ ಭೂಷಣ,ಸೋಮಾರಿಯ ಜೀವನ ಅದೊಂದು ಸ್ಮಶಾನ. ನೀನು ಅಳುತ್ತಿದ್ದರೆ ಲೋಕವೇ ನಿನ್ನನ್ನು ನೋಡಿ ನಗುವುದು. ಪ್ರತಿಯಾಗಿ ನೀನು ನಗುತ್ತಿದ್ದರೆ ಲೋಕವೇ ನಿನ್ನನ್ನು ನೋಡಿ ಅಳುವುದು.
ಮಹಾನ್ ವ್ಯಕ್ತಿ ಓರ್ವ ನಿಧನವಾದರು ಅವನು ಬಿಟ್ಟು ಹೋದ ಬೆಳಕು ಜಗತ್ತಿನ ಜನರಿಗೆ ದಾರಿ ತೋರುವುದು. ಒಂದು ನಗುವಿನ ಹಿಂದೆ ಸಾವಿರ ಅಳು ಮುಖಗಳಿರುತ್ತವೆ. ಬದುಕಿನ ಮೇಲೆ ಆಸೆ ಸಾವಿನ ಬಗ್ಗೆ ಭಯ ಯಾರಿಗಿಲ್ಲವೊ ಅವನು ಮಹಾತ್ಮನು. ಮಹಾ ಪುರುಷರ ಮುಖದ ತೇಜಸ್ಸು ಕಲಾಗಾರನ ಕುಂಚದ ಕಲೆಯಿಂದ ಮೂಡಿಲ್ಲಾ, ಅದು ದೈವತ್ವವಾದದ್ದು.
ಪ್ರಕೃತಿಯು ಸ್ವತಂತ್ರವಾದ ಒಂದು ವಸ್ತುವಲ್ಲ ಪರಮಾತ್ಮನ ಮಾಯೆಯೆ ಪ್ರಕೃತಿ. ಸ್ವ ಪ್ರಯತ್ನದಲ್ಲಿ ಹೆಚ್ಚಿನ ನಂಬಿಕೆಯುಳ್ಳವನೆ ಬುದ್ಧಿವಂತನು. ಯಶಸ್ಸಿಗೊಂದು ಕೀಲಿ ಕೈ ಇರುವುದನ್ನು ನಾನರಿಯೇ, ಆದರೆ ಎಲ್ಲರನ್ನು ಮುಚ್ಚಿಸಲು ಇಚ್ಛಿಸುವುದು ಮಾತ್ರ ಸೋಲಿನ ಕೀಲಿ ಕೈ.
ಬಾಹ್ಯ ಕಣ್ಣುಗಳಿಗೆ ಕಾಣದ್ದನ್ನು ಆಂತರಿಕವಾಗಿಯೇ ಅರಿಯಬೇಕು. ನಿರ್ದಿಷ್ಟ ಗುರುವಿಲ್ಲದ ಜೀವನ ಬಿರುಗಾಳಿಗೆ ಸಿಕ್ಕು ಎತ್ತೆತ್ತಲೋ ಸಾಗುವ ಹಡಗಿನಂತಾಗುತ್ತದೆ. ಹೋರಾಟವಿಲ್ಲದೆ, ಪ್ರಯತ್ನವಿಲ್ಲದೆ ಯಶಸ್ಸಿನ ಮೆಟ್ಟಿಲೆರಲು ಸಾದ್ಯವಿಲ್ಲ. ಸುಖ ದುಃಖಗಳು ಎಲ್ಲರ ಬಾಳಿನ ಒಡನಾಡಿ ಅವುಗಳಿಂದ ಪಾರಾಗಲು ಎಲ್ಲಿಗೆ ಓಡಿ ಹೋಗುವೆ! ನಾವು ಯಾವ ಕಾರ್ಯ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ,
ಅದನ್ನು ಯಾವ ಮನೋಭಾವದಿಂದ ಹೇಗೆ ಮಾಡುತ್ತಿದ್ದೇವೆ ಎನ್ನುವುದು ತುಂಬಾ ಮುಖ್ಯ. ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ನಿಜವಾದ ಪಾಠಶಾಲೆ. ಧ್ಯಾನದಲ್ಲಿ ಮೊದಲು ಶರೀರವನ್ನು ನಂತರ ಮನಸ್ಸನ್ನು ಸ್ಥಿರಗೊಳಿಸು. ಸದ್ಗುಣದ ವಿಜಯದಲ್ಲಿಯೇ ದುರ್ಗುಣದ ಸೋಲು ಇದೆ. ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಮಾಡಿದ್ದೇವೆ ಎನ್ನುವುದು ತುಂಬಾ ಮುಖ್ಯ.