ನಾವಿಂದು ನಿಮಗೆ ನೀವು ನಂಬಲಾರದ ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನಮ್ಮ ದೇಶದಲ್ಲಿ ವಿದ್ಯಾವಂತ ರಾಜಕಾರಣಿಗಳ ಸಂಖ್ಯೆ ಕೇವಲ ಹತ್ತು ಶೇಕಡಾ ಮಾತ್ರ ಇದೇ. ಈ ರೀತಿ ಪ್ರಪಂಚದ ತುಂಬಾ ದೇಶಗಳ ಪರಿಸ್ಥಿತಿ ಇದೆ ಆದರೆ ಪ್ರಪಂಚದಲ್ಲಿ ಹೆಚ್ಚು ಓದಿಕೊಂಡಿರುವ ರಾಜಕಾರಣಿಗಳು ಇರುವ ದೇಶ ಕೆನಡಾ. ಅಲ್ಲಿ ಶೇಕಡ ತೊಂಬತ್ಮುರಷ್ಟು ರಾಜಕಾರಣಿಗಳು ವಿದ್ಯಾವಂತರಾಗಿದ್ದಾರೆ.
ಆದರೆ ನಮ್ಮ ದೇಶದಲ್ಲಿರುವ ರಾಜಕಾರಣಿಗಳ ವಿದ್ಯಾರ್ಹತೆಯನ್ನು ನೋಡುವುದಕ್ಕಿಂತ ಅವರ ಕ್ರಿಮಿನಲ್ ಹಿನ್ನೆಲೆಗಳ ಬಗ್ಗೆ ತಿಳಿದುಕೊಳ್ಳಬೇಕು. ಎರಡು ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಯಲ್ಲಿ ಗೆದ್ದಂತಹ ಐದು ನೂರಾ ನಲವತ್ತೆರಡು ಎಂಪಿ ಗಳಲ್ಲಿ ಎರಡುನೂರಾ ಮೂವತ್ತೆರಡು ಜನ ಎಂಪಿಗಳ ಮೇಲೆ ಕ್ರಿಮಿನಲ್ ಕೇಸಿದೆ. ಅಂದರೆ ನಾಲವತ್ಮುರು ಶೇಕಡಾದಷ್ಟು ಕ್ರಿಮಿನಲ್ ಕೇಸುಗಳಿವೆ ಅದರಲ್ಲಿ ಶೇಕಡಾ ಹತ್ತೊಂಬತ್ತರಷ್ಟು ಜನರ ಮೇಲೆ ಸೀರಿಯಸ್ ಕ್ರಿಮಿನಲ್ ಕೇಸುಗಳಿವೆ. ಇದರ ಸಂಖ್ಯೆ ಪ್ರತಿವರ್ಷ ಬೆಳೆಯುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ ನಿಯತ್ತಿನಿಂದ ಓಟು ಗಳಿಸುವ ವರಿಗಿಂತ ಕ್ರಿಮಿನಲ್ ಹಿನ್ನೆಲೆ ಇರುವಂತಹ ಅಭ್ಯರ್ಥಿಗಳು ಗೆಲ್ಲುವ ಪ್ರಮಾಣ ಮೂರು ಪಟ್ಟು ಹೆಚ್ಚಿಗೆ ಇದೆಯಂತೆ. ಇದು ನಮ್ಮ ದೇಶದ ಪರಿಸ್ಥಿತಿ.
ಬೆಲ್ಜಿಯಂನ ಒಂದು ಮಹಿಳೆಗೆ ಜೂನಲ್ಲಿ ಇರುವಂತಹ ಚಿಂಪಾಂಜಿಯ ಮೇಲೆ ಪ್ರೀತಿ ಹುಟ್ಟುತ್ತದೆ ಇದರಿಂದ ಆ ಮಹಿಳೆ ಚಿಂಪಾಂಜಿಯನ್ನು ನೋಡುವುದಕ್ಕಾಗಿ ಆಗಾಗ ಜೂಗೆ ಹೋಗುತ್ತಿರುತ್ತಾಳೆ. ಅದರ ಜೊತೆ ಕಾಲ ಕಳೆಯುತ್ತಾಳೆ ಚಿಂಪಾಂಜಿ ಕೂಡ ಇವರನ್ನು ನೋಡಿ ತುಂಬಾ ಖುಷಿ ಪಡುತ್ತದಂತೆ. ಅದೇ ರೀತಿ ಅದು ಸ್ವಲ್ಪ ದಿನಗಳ ನಂತರ ಮನುಷ್ಯರ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸುತ್ತದೆ ಮನುಷ್ಯರ ರೀತಿಯಲ್ಲಿ ಮಹಿಳೆಯನ್ನು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತದೆ ಚಿಂಪಾಂಜಿಯಲ್ಲಿಯೂ ಬಹಳ ಬದಲಾವಣೆಗಳು ಉಂಟಾಗುತ್ತದೆ.
ಮಹಿಳೆ ಮತ್ತು ಚಿಂಪಾಂಜಿ ಒಂದೇ ಜಾಗದಲ್ಲಿ ಸೇರುತ್ತಾ ಸೇರುತ್ತಾ ಮುಂದಿನ ದಿನಗಳಲ್ಲಿ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಂದಿಗೆ ಸೇರುವುದನ್ನು ಬಿಡುತ್ತದೆ. ಅದೇ ರೀತಿ ಬೇರೆ ಚಿಂಪಾಂಜಿಗಳು ಕೂಡ ಇದನ್ನು ಹತ್ತಿರ ಸೇರಿಸುವುದಿಲ್ಲ. ಚಿಂಪಾಂಜಿ ಕೂಡ ಹುಚ್ಚುಚ್ಚಾಗಿ ಆಡಲು ಪ್ರಾರಂಭಿಸುತ್ತದೆ ಆಗ ಆ ಜೂನ ಸಿಬ್ಬಂದಿ ಈ ಮಹಿಳೆಗೆ ಜೂಗೆ ಬರದಂತೆ ತಡೆಯುತ್ತಾರೆ.
ಎಪ್ಪತ್ತೆಂಟು ವರ್ಷ ವಯಸ್ಸಾದ ನಾರ್ತ್ ಕ್ಯಾಲೋರಿಯಗೆ ಸೇರಿದ ಒಬ್ಬ ವ್ಯಕ್ತಿಯನ್ನು ಆಪಲ್ ವಾಚ್ ಕಾಪಾಡುತ್ತದೆ. ಅದು ಹೇಗೆಂದರೆ ಇವರಿಗೆ ಹೃದಯಾಘಾತ ಆಗುವುದಕ್ಕಿಂತ ಐದು ನಿಮಿಷ ಮೊದಲು ಇವರ ಹೃದಯ ಬಡಿತ ಏರುಪೇರಾಗಿರುವುದನ್ನು ಆಪಲ್ ವಾಚ್ ರೆಕಾರ್ಡ್ ಮಾಡಿ ಅದನ್ನು ಅವರ ಕುಟುಂಬದ ಸದಸ್ಯರಿಗೆ ಸಂದೇಶದ ರೀತಿಯಲ್ಲಿ ಕಳಿಸುತ್ತದೆ. ಅದೇ ರೀತಿ ಲೋಕೇಶನನ್ನು ಸಹ ಕಳಿಸುತ್ತದೆ. ಈ ರೀತಿಯ ಸಂದೇಶ ಬಂದ ಮೂರು ನಿಮಿಷಗಳಲ್ಲಿ ಅವರ ಕುಟುಂಬದ ಸದಸ್ಯರು ಅವರ ಬಳಿ ಬರುತ್ತಾರೆ ಅವರಿಗೆ ಹೃದಯಾಘಾತವಾಗುತ್ತದೆ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರನ್ನು ಕಾಪಾಡುತ್ತಾರೆ ಈ ರೀತಿಯಾಗಿ ಆಪಲ್ ವಾಚ್ ನಿಂದ ವ್ಯಕ್ತಿಯ ಜೀವ ಉಳಿಯುತ್ತದೆ.
ಕೆಲವು ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಆಸ್ಟ್ರಾಯ್ಡ್ ಗಳ ಕಾರಣದಿಂದ ಭೂಮಿಯ ಮೇಲೆ ಡೈನೋಸರ್ ಗಳು ನಾಶವಾದವು ಎನ್ನುವುದನ್ನು ನೀವು ಕೇಳಿರುತ್ತೀರಿ. ಇದನ್ನು ಆಧಾರವಾಗಿಟ್ಟುಕೊಂಡು ವಿಜ್ಞಾನಿಗಳು ಆಸ್ಟ್ರಾಯ್ಡ್ ಕಾರಣದಿಂದ ಅಮೆಜಾನ್ ಕಾಡು ಹುಟ್ಟಿಕೊಂಡಿದೆ ಎಂದು ಹೇಳುತ್ತಾರೆ ಆಕಾಶ ದಿಂದ ಬಂದ ಆಸ್ಟ್ರಾಯ್ಡ್ ಮತ್ತು ಅಮೆಜಾನ್ ಅರಣ್ಯದ ಗಾತ್ರ ಹೆಚ್ಚು-ಕಮ್ಮಿ ಒಂದೇ ರೀತಿ ಆಗಿದೆ ಎಂದು ಅವರು ಹೇಳುತ್ತಾರೆ. ಈ ರೀತಿ ಹೇಳುವುದಕ್ಕೆ ಕಾರಣ ಏನೆಂದರೆ ಈ ಭೂಮಿಯ ಮೇಲಿರುವ ಎಲ್ಲಾ ನೆಲ ಗಳಿಗಿಂತ ಅಮೆಜಾನ್ ನಲ್ಲಿರುವ ನೆಲ ತುಂಬಾ ವಿಭಿನ್ನವಾಗಿದೆ. ಅದೇ ರೀತಿ ಅಮೆಜಾನ್ ಅರಣ್ಯದಲ್ಲಿ ನಾವೆಂದೂ ನೋಡಿರದ ಪ್ರಾಣಿಗಳು ಕ್ರಿಮಿಕೀಟಗಳು ಹಾಗು ವಿಚಿತ್ರವಾದ ಅಂತಹ ಪ್ರಾಣಿಗಳು ಇವೆ.
ತುಂಬಾ ಜನ ಹೊಕ್ಕಳಲ್ಲಿ ಒಂದು ರೀತಿಯ ಹತ್ತಿ ಬರುವುದನ್ನು ಗಮನಿಸಿರುತ್ತೀರಿ. ಹಾಗಾದರೆ ಇದು ಹೊಕ್ಕಳಲ್ಲಿ ಬಂದು ಹೇಗೆ ಸೇರಿಕೊಂಡಿತು ಎಂದು ಯೋಚನೆ ಮಾಡುತ್ತೀರಿ. ಅದರ ಹಿಂದಿರುವ ಕಾರಣವನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಸಂಶೋಧನೆ ಮಾಡಿ ತಿಳಿಸಿದ್ದಾರೆ ಇರೀತಿ ಕಾಣಿಸಿಕೊಳ್ಳುವ ಹತ್ತಿ ಬಟ್ಟೆಯಿಂದ ಬರುವ ನಾರುಗಳಿಂದ ಹಾಗೂ ಸತ್ತ ಚರ್ಮ ಕೋಶಗಳಿಂದ ಕೂದಲಿನಿಂದ ತಯಾರಾಗಿರುತ್ತದೆ. ಬಟ್ಟೆಯಿಂದ ನಾರು ಬೇರೆಯಾಗುವುದು ಸರ್ವೇಸಾಮಾನ್ಯ ಆದರೆ ಅವು ಸತ್ತ ಚರ್ಮ ಕೋಶಗಳ ಜೊತೆ ಬೆರೆತು ಕೂದಲುಗಳ ಘರ್ಷಣೆಯಿಂದ ಹೊಕ್ಕಳು ಭಾಗದಲ್ಲಿ ಸೇರಿಕೊಳ್ಳುತ್ತದೆ.
ಸತ್ತ ದೇಹ ಒಂದು ವರ್ಷದವರೆಗೆ ಚಲನೆಯಲ್ಲಿರುತ್ತದೆ. ಆದರೆ ಇದು ಯಾವುದೇ ದೆವ್ವ-ಭೂತ ಮಾಟಮಂತ್ರದ ವಿಷಯವಲ್ಲ ಇದು ಒಂದು ವೈಜ್ಞಾನಿಕ ಸಂಶೋಧನೆಯಿಂದ ತಿಳಿದುಬಂದಿದ್ದು. ಆಸ್ಟ್ರೇಲಿಯಾಗೆ ಸೇರಿದ ಒಬ್ಬ ವಿಜ್ಞಾನಿ ಒಂದು ಸತ್ತ ದೇಹದ ಮೇಲೆ ಸಂಶೋಧನೆ ಮಾಡುತ್ತಾರೆ ಸಂಶೋಧನೆ ಕೇವಲ ಒಂದೆರಡು ದಿನಗಳು ಮಾತ್ರ ಅಲ್ಲ ಹದಿನೇಳು ತಿಂಗಳುಗಳ ಕಾಲ ನಡೆಯುತ್ತದೆ.
ಒಂದು ಸತ್ತ ದೇಹ ವಿಘಟನೆ ಆಗುವ ಕಾರ್ಯದಲ್ಲಿ ಆ ದೇಹದ ಅಂಗಗಳು ಅದರ ಪಕ್ಕದಲ್ಲಿ ಚಲನೆಯಲ್ಲಿರುತ್ತದೆ. ಆ ದೇಹದಲ್ಲಿ ಕೈ ಚಲನೆಯಲ್ಲಿರುತ್ತದೆ ಕಾಲಿನ ಸ್ಥಾನ ಕೂಡ ಬದಲಾಗುತ್ತದೆ ಅಷ್ಟೇ ಅಲ್ಲ ದೇಹದ ಒಳಗೆ ಇರುವ ಅಂಗಗಳು ಕೂಡ ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ. ಇದು ಕೇವಲ ಮಾನವನ ದೇಹದಲ್ಲಿ ಮಾತ್ರವಲ್ಲ ಈ ಭೂಮಿ ಮೇಲೆ ಯಾವ ಪ್ರಾಣಿ ಸತ್ತರೂ ಕೂಡ ಅದು ಕೊಳೆಯುವ ಸ್ಥಿತಿಯಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಇದು. ಇದು ನಾವು ನಿಮಗೆ ತಿಳಿಸುತ್ತಿರುವ ಕೆಲವು ಆಸಕ್ತಿಕರ ವಿಷಯಗಳಾಗಿವೆ.