ಕರ್ನಾಟಕ ಅರಣ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಬಿಡುಗಡೆಯಾಗಿದೆ. ಕರ್ನಾಟಕ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಮುನ್ನೂರ ಮೂವತ್ತೊಂಬತ್ತು ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ ಐದು ಎರಡು ಸಾವಿರದ ಇಪ್ಪತ್ತೊಂದರಂದು ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹನ್ನೊಂದು ವೃತ್ತಗಳಲ್ಲಿ ಯಶಸ್ವಿಯಾಗಿ ನಡೆಸಿದ್ದು ಸದರಿ ಈ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರಗಳನ್ನು ವೆಬ್ಸೈಟ್ನಲ್ಲಿ ನೀಡಲಾಗಿದೆ. ಆ ಮೂಲಕವಾಗಿ ಯಾರು ಈಗಾಗಲೇ ಪರೀಕ್ಷೆಯನ್ನು ಬರೆದಿರುತ್ತಾರೆ ಅವರು ಉತ್ತರಗಳನ್ನು ನೋಡಬಹುದಾಗಿದೆ.
ಆ ಕುರಿತಾಗಿ ಅರಣ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯನ್ನು ನೋಡುವುದಾದರೆ ಲಿಖಿತ ಪರೀಕ್ಷೆಯ ಕುರಿತಂತೆ ಕೀ ಉತ್ತರಗಳನ್ನು ಪ್ರಕಟಣೆಯಲ್ಲಿ ಲಗತ್ತಿಸಿರುವ ಅನುಬಂಧಗಳಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಕೀ ಉತ್ತರಗಳ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮಾತ್ರ ನಿಗದಿತ ನಮೂನೆಯಲ್ಲಿ ನಮೂದಿಸಿ ಕಚೇರಿಯ ಇಮೇಲ್ ವಿಳಾಸಕ್ಕೆ ಡಿಸೆಂಬರ್ 13 ಎರಡು ಸಾವಿರದ ಇಪ್ಪತ್ತೊಂದರ ಸಂಜೆ ಐದು. ಮೂವತ್ತರೊಳಗೆ ಸಲ್ಲಿಸತಕ್ಕದ್ದು.
ನಿಗದಿತ ನಮೂನೆಯಲ್ಲಿಯೇ ಕೀ ಉತ್ತರ ಗಳ ಕುರಿತು ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ನಮೂನೆಯಲ್ಲಿ ಸಲ್ಲಿಸುವ ಆಕ್ಷೇಪಣೆ ಹಾಗೂ ನಿಗದಿತ ದಿನಾಂಕ ಹಾಗೂ ಸಮಯದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕೀ ಉತ್ತರಗಳ ಕುರಿತು ಆಕ್ಷೇಪಣೆ ಸಲ್ಲಿಸುವ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಅಭ್ಯರ್ಥಿಗಳ ಹೆಸರು ನಂತರ ನೊಂದಣಿ ಸಂಖ್ಯೆ ನಂತರ ಪ್ರಶ್ನೆಪತ್ರಿಕೆಯ ವರ್ಷನ್ ಕೋಡ್ ಗಳನ್ನ ತುಂಬಬೇಕು ನಂತರ ಕ್ರಮ ಸಂಖ್ಯೆ, ಪ್ರಶ್ನೆ ಸಂಖ್ಯೆ, ಪ್ರಶ್ನೆ ನಂತರ ಇಲಾಖೆ ನೀಡಿರುವ ಕೀ ಉತ್ತರ ನಂತರ ಅಭ್ಯರ್ಥಿ ತಿಳಿಸುವ ಉತ್ತರ ನಂತರ ಷರಾ ನಂತರ ಅಡಕಗೊಳಿಸಿರುವ ದಾಖಲೆಗಳು.
ಇವುಗಳನ್ನು ಭರ್ತಿಮಾಡಿ ಅದನ್ನು ಅರಣ್ಯ ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ ರವರ ಕಚೇರಿ ಅರಣ್ಯ ಭವನ, ಮಲ್ಲೇಶ್ವರಂ ಬೆಂಗಳೂರು 560003. ಈ ವಿಳಾಸಕ್ಕೆ ತಮ್ಮ ಆಕ್ಷೇಪಣಾ ನಮೂನೆಯನ್ನು ಕಳಿಸತಕ್ಕದ್ದು. ನೀವು ಕೂಡ ಅರಣ್ಯ ಇಲಾಖೆಯ ನೇಮಕಾತಿಯ ಪ್ರವೇಶ ಪರೀಕ್ಷೆಯನ್ನು ಬರೆದಿದ್ದರೆ ಈ ಕೂಡಲೇ ಇಲಾಖೆಯ ವೆಬ್ಸೈಟ್ನಲ್ಲಿ ಬಿಡಲಾಗಿರುವ ಕೀ ಉತ್ತರಗಳನ್ನು ನೋಡಿಕೊಳ್ಳಿ ನಿಮಗೇನಾದರೂ ಆಕ್ಷೇಪಣೆ ಇದ್ದರೆ ಆಕ್ಷೇಪಣಾ ನಮೂನೆಯನ್ನು ಸಲ್ಲಿಸಬಹುದಾಗಿದೆ. ನಿಮ್ಮ ಸ್ನೇಹಿತರು ಅಥವಾ ಪರಿಚಯದವರು ಅರಣ್ಯ ಇಲಾಖೆಯ ನೇಮಕಾತಿಯ ಪ್ರವೇಶ ಪರೀಕ್ಷೆಯನ್ನು ಬರೆದಿದ್ದರೆ ಅವರಿಗೂ ಈ ಮಾಹಿತಿಯನ್ನು ತಿಳಿಸಿ.