ಅಕ್ಟೋಬರ್ ಇಪ್ಪತ್ತೊಂಬತ್ತು ಇಡೀ ಕರುನಾಡ ಪಾಲಿಗೆ ಕರಾಳ ದಿನ ಎಂದು ಹೇಳಬಹುದು. ಕರ್ನಾಟಕದ ಬೆಟ್ಟದ ಹೂವು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಬಹುದೂರ ಸಾಗಿದ ದಿನವದು. ಪುನೀತ್ ರಾಜಕುಮಾರ್ ಅವರು ಇಹಲೋಕವನ್ನು ತ್ಯಜಿಸುವ ಮೂಲಕ ಹೇಳಿಕೊಳ್ಳಲಾಗದಷ್ಟು ದುಃಖವನ್ನು ಎಲ್ಲರಿಗೂ ಕೊಟ್ಟಿದ್ದಾರೆ. ಆ ನೋವಿನಿಂದ ಹೊರಬರುವುದಕ್ಕೆ ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ.
ಅಭಿಮಾನಿಗಳು ಹಾಗೂ ಕುಟುಂಬಸ್ಥರು ಇನ್ನು ಕೂಡ ದುಃಖದಲ್ಲಿದ್ದಾರೆ. ಇಂದಿಗೂ ಕೂಡ ಅವರು ನಮ್ಮ ನಡುವೆ ಇಲ್ಲ ಎನ್ನುವುದನ್ನು ಯಾರಿಂದಲೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರಿಗೆ ಸ್ಮರಣಾಂಜಲಿಯನ್ನು ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರ ಬಾಲ್ಯದಿಂದಲೇ ಅವರೊಟ್ಟಿಗೆ ಬೆಳೆದಂತಹ ವಿಜಯ ರಾಘವೇಂದ್ರ ಹಾಗೂ ಶ್ರೀ ಮುರುಳಿ ಅವರು ಬಹಳ ದುಃಖ ದಿಂದಲೇ ಅಪ್ಪು ಅವರ ಕುರಿತಾಗಿ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡರು.
ಎಲ್ಲರ ಜೀವನವನ್ನು ಎಲ್ಲರ ಬದುಕನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಹಳ ಪ್ರೀತಿಯಿಂದ ಸ್ಪರ್ಶ ಮಾಡಿದಂತಹ ಜೀವ ಆತ್ಮ ಎಂದರೆ ಅದು ಪುನೀತ್ ರಾಜಕುಮಾರ್ ಅವರು. ಅವರು ಜೀವನದಲ್ಲಿ ಮಾಡಿರುವಂತಹ ಒಳ್ಳೆಯ ಕೆಲಸಗಳನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕು.
ಶ್ರೀಮುರಳಿಯವರು ಅಪ್ಪುವನ್ನು ನೆನೆಸಿಕೊಂಡು ದುಃಖದಿಂದಲೇ ನಾವು ಅವರಿಗೆ ಇಷ್ಟು ಬೇಗ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ ಇಂತಹ ಕಾರ್ಯಕ್ರಮವನ್ನು ನೋಡುತ್ತೇವೆ ಎಂಬ ಊಹೆಯನ್ನು ಕೂಡ ಮಾಡಿರಲಿಲ್ಲ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದಂತಹ ಕೆಲಸಗಳು ಅವರ ನಗುವನ್ನು ಈಗಲೂ ಸಹ ಮರೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ನಂತರ ವಿಜಯ ರಾಘವೇಂದ್ರ ಅವರು ಹಾಗೂ ಶ್ರೀಮುರುಳಿ ಅವರು ಇಬ್ಬರು ಸೇರಿ ಪುನೀತ್ ರಾಜಕುಮಾರ್ ಅವರಿಗಾಗಿ ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು.
ಬೊಂಬೆ ಹೇಳುತೈತೆ ಹಾಡನ್ನು ಪುನೀತ್ ರಾಜಕುಮಾರ್ ಅವರಿಗಾಗಿಯೇ ಬರೆದಂತಿದೆ. ಪುನೀತ್ ರಾಜಕುಮಾರ ಅವರು ನಮ್ಮ ನಡುವೆ ಇಲ್ಲ ಎನ್ನುವುದನ್ನು ಉಹಿಸಿಕೊಳ್ಳುವುದಕ್ಕೆ ತುಂಬಾ ನೋವಾಗುತ್ತದೆ. ಆದರೆ ಅವರು ಮಾಡಿದಂತಹ ಸಿನಿಮಾಗಳು ಸಮಾಜಮುಖೀ ಕಾರ್ಯಗಳು ಸೇವೆಗಳು ಅವರು ಸದಾ ನಮ್ಮ ನೆನಪಿನಲ್ಲಿ ಇರುವಂತೆ ಮಾಡುತ್ತವೆ.