ನಮ್ಮ ಸುತ್ತಮುತ್ತ ನಿಸರ್ಗದಲ್ಲಿ ಅನೇಕ ಔಷಧೀಯ ಗಿಡಗಳು ಇರುತ್ತವೆ ಅವುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ತಿಳಿದಿರುವುದಿಲ್ಲ.ಈ ದಿನ ನಾವು ನಿಮಗೆ ನಮ್ಮ ಸುತ್ತಮುತ್ತಲಿರುವಂತಹ ಔಷಧೀಯ ಗಿಡಗಳಲ್ಲಿ ಒಂದಾದ ಕಾಡು ಬಸಳೆ ಸೊಪ್ಪಿನ ಆರೋಗ್ಯದ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕಾಡು ಬಸಳೆ ಅದ್ಭುತವಾದಂತಹ ಔಷಧೀಯ ಗುಣಗಳನ್ನು ಹೊಂದಿದೆ.
ಇದನ್ನು ಸೇವನೆ ಮಾಡುವುದರಿಂದ ಯಾವೆಲ್ಲ ರೀತಿಯ ಲಾಭಗಳು ಆರೋಗ್ಯಕ್ಕೆ ಸಿಗುತ್ತವೆ ಎಂಬುದನ್ನು ನೋಡೋಣ. ಮೊದಲನೆಯದಾಗಿ ಈ ಗಿಡದ ಎಲೆಯನ್ನು ತೆಗೆದುಕೊಂಡು ಅದನ್ನು ಜಜ್ಜಿ ರಸವನ್ನು ಮಾಡಬೇಕು ಆ ರಸವನ್ನು ತೆಗೆದುಕೊಂಡು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಖಾಲಿಹೊಟ್ಟೆಯಲ್ಲಿ ನಾಲ್ಕರಿಂದ ಆರು ಚಮಚ ಸೇವನೆ ಮಾಡಬೇಕು ಇದನ್ನು ಹೀಗೆ ಸೇವನೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಅಕಸ್ಮಾತಾಗಿ ಈಗಾಗಲೇ ಕಿಡ್ನಿಯಲ್ಲಿ ಕಲ್ಲು ಆಗಿದೆ ಅದರಿಂದ ಜಾಂಡಿಸ್ ಆಗುತ್ತಿವೆ ಎಂದರೆ ಇಂಗಳಾರ ಕಾಯಿ ಸಿಗುತ್ತದೆ ಅದರ ತಿರುಳನ್ನು ತೆಗೆದುಕೊಂಡು ಅದನ್ನು ಕಡಲೆಕಾಳಿನ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಬೇಕು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ಉಂಡೆಗಳನ್ನು ಈ ಬಸಳೆ ಸೊಪ್ಪಿನ ರಸದ ಜೊತೆಗೆ ಸೇವನೆ ಮಾಡಬೇಕು.
ಇದನ್ನು ಬೆಳಿಗ್ಗೆ ಮಧ್ಯಾಹ್ನ ಸಾಯಂಕಾಲ ಈ ರೀತಿಯಾಗಿ ಮೂರು ಬಾರಿ ಸೇವನೆ ಮಾಡಬೇಕು. ಇನ್ನು ಮನೆಯಲ್ಲಿ ಸಾಂಬಾರ್ ಚಟ್ನಿ ಪಲ್ಯ ಮಾಡುತ್ತಿರುತ್ತಾರೆ ಅದಕ್ಕೆ ಕಾಡು ಬಸಳೆಎಲೆಯನ್ನು ಹಾಕಿ ಮಾಡಿಕೊಳ್ಳುವುದರಿಂದ ನಮ್ಮ ರಕ್ತ ಶುದ್ಧೀಕರಣ ಆಗುತ್ತದೆ. ಈ ಬಸಳೆಸೊಪ್ಪು ಪಿತ್ತ ಶಮನ ಮಾಡುವಂತಹ ನೈಸರ್ಗಿಕ ಔಷಧೀಯ ಗುಣವನ್ನು ಹೊಂದಿದೆ.
ಕಣ್ಣುಉರಿ ಕಾಲುಉರಿ ಉರಿಮೂತ್ರ ಈ ರೀತಿಯ ಸಮಸ್ಯೆ ಇರುವವರು ಈ ಬಸಳೆ ಸೊಪ್ಪಿನ ರಸವನ್ನು ಎಳೆನೀರಿನೊಂದಿಗೆ ಸೇವನೆ ಮಾಡುವುದರಿಂದ ನಿಮ್ಮ ಉರಿ ಮೂತ್ರದ ಸಮಸ್ಯೆ ಕಣ್ಣುರಿ ಸಮಸ್ಯೆ ಪಾದದ ಉರಿ ಸಮಸ್ಯೆ ದುರಹೋಗುತ್ತದೆ. ಒಂದು ಲೋಟ ಎಳೆನೀರಿಗೆ ನಾಲ್ಕರಿಂದ ಆರು ಚಮಚ ಇದರ ರಸವನ್ನು ಹಾಕಿ ಕುಡಿಯಬೇಕು.
ಇನ್ನು ಕೆಲವು ಜನರಿಗೆ ಬಾಯಲ್ಲಿ ಹುಣ್ಣುಗಳಾಗಿರುತ್ತವೆ ಅಂತವರು ಈ ರಸವನ್ನು ಎಳೆಯ ನೀರಿನೊಂದಿಗೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಬೆರೆಸಿ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಬಾಯಿಹುಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ. ಈ ಕಾಡು ಬಸಳೆ ಸೊಪ್ಪನ್ನು ರುಬ್ಬಿಕೊಂಡು ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಮುಖದಲ್ಲಿರುವ ಕಲೆಗಳು ಮುಖದ ಮೇಲೆ ಆಗುವಂತಹ ಮೊಡವೆಗಳು ನಿವಾರಣೆಯಾಗುತ್ತದೆ.
ಇನ್ನು ಕೆಲವು ಜನರಿಗೆ ಬೆವರು ತುಂಬಾ ಕೆಟ್ಟ ವಾಸನೆ ಬರುತ್ತಿರುತ್ತದೆ ಅಂಥವರು ಕಾಡು ಬಸಳೆ ಸೊಪ್ಪನ್ನು ರುಬ್ಬಿ ಅದನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು ನಂತರ ಅದನ್ನು ಮೈಯಿಗೆ ಹಚ್ಚಿಕೊಂಡು ಉಜ್ಜಬೇಕು. ಉಜ್ಜಿಕೊಂದ ನಂತರ ಸ್ವಲ್ಪ ಬಿಸಿಲಿನಲ್ಲಿ ನಿಂತುಕೊಳ್ಳಬೇಕು ನಂತರ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮೈಯಲ್ಲಿರುವ ದುರ್ಗಂಧ ಸಂಪೂರ್ಣವಾಗಿ ದೂರವಾಗುತ್ತದೆ.
ಕಾಡು ಬಸಳೆ ಜೀರ್ಣಾಂಗದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡುತ್ತದೆ ಇದನ್ನು ನೀವು ಪ್ರತಿನಿತ್ಯ ಚಟ್ನಿ ಅಥವಾ ಪಲ್ಯಗಳಲ್ಲಿ ಬಳಸಬಹುದು. ಇದರ ನಿತ್ಯ ಸೇವನೆಯಿಂದ ಪಿತ್ತವಿಕಾರದ ವ್ಯಾಧಿಗಳು ದೂರವಾಗುತ್ತದೆ. ನೀವು ಕೂಡ ಈ ಕಾಡುಬಸಳೆಯನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.