ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ 2008ರಲ್ಲಿ ಮಲೇಶಿಯಾದಲ್ಲಿ ನಡೆದ 19ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತಂಡದ ಪರವಾಗಿ ಆಡುತ್ತಾರೆ. ಆದ್ದರಿಂದ ನಾವು ಇಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಕ್ರಿಕೆಟ್ ಆಡಿದ ಬಗೆಗಿನ ವಿವರವನ್ನು ತಿಳಿದುಕೊಳ್ಳೋಣ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ಲಾಕ್‌ಡೌನ್ ಕಾರಣ ಮನೆಯೊಳಗೆ ಇದ್ದ ಕೊಹ್ಲಿ ಇದೀಗ ಹೊರಬಂದು ಅಭ್ಯಾಸ ಆರಂಭಿಸಿದ್ದಾರೆ. ಇತ್ತ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬ್ಯಾಟಿಂಗ್ ಟಿಪ್ಸ್ ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಬೌನ್ಸರ್ ಎಸೆತ ಎಸೆದು ಕೊಹ್ಲಿಗೆ ಸಂಪೂರ್ಣ ಅಭ್ಯಾಸ ಮಾಡಿಸುತ್ತಿದ್ದಾರೆ. ಮುಂಬೈನಲ್ಲಿರುವ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ಮೊದಲು ಅನುಷ್ಕಾ ಶರ್ಮಾ ಬ್ಯಾಟಿಂಗ್ ಮಾಡಿದ್ದಾರೆ.
ಪ್ರತಿ ಎಸೆತ ಎದುರಿಸದ ಮೇಲೆ ಕೊಹ್ಲಿಗೆ ಈ ರೀತಿ ಬ್ಯಾಟಿಂಗ್ ಮಾಡಬೇಕು ಎಂದು ಅನುಷ್ಕಾ ಶರ್ಮಾ ಪತಿ ಕೊಹ್ಲಿಗೆ ಹೇಳಿದ್ದಾರೆ. ಅನುಷ್ಕಾ ಬ್ಯಾಟಿಂಗ್ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ಅನುಷ್ಕಾ ಬೌನ್ಸರ್ ಎಸೆತ ಹಾಕಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ರಿಕೆಟ್ ಆಡುವುದನ್ನು ಸನಿಹದ ಅಪಾರ್ಟ್‌ಮೆಂಟ್‌ನಿಂದ ವಿಡಿಯೋ ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವು ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುವ ಅವಕಾಶ ಸಿಕ್ಕಿತು ಎಂದು ಸಂತಸ ಹಂಚಿಕೊಂಡಿದ್ದಾರೆ.
ಕೊರೋನ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಮನೆಯಲ್ಲಿಯೇ ಹೆಚ್ಚಿನ ಎಕ್ಸಸೈಸ್ ಅನ್ನು ಮಾಡಿದ್ದಾರೆ. ಅವರದೇ ಜಿಮ್ ನಲ್ಲಿ ವರ್ಕೌಟ್, ಸೈಕ್ಲಿಂಗ್, ವೇಟ್ ಲಿಫ್ಟಿಂಗ್ ಮಾಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಅವರ ಜೊತೆಗೂಡಿ ಜಿಮ್ ನಲ್ಲಿ ವರ್ಕೌಟ್ ಅನ್ನು ಕೂಡ ಅತ್ಯುತ್ತಮವಾಗಿ ಮಾಡಿ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದಾರೆ. ಇಂಡಿಯಾ ಕ್ರಿಕೆಟ್ ಟೀಮ್ ನಲ್ಲಿ ನಾಯಕರಾಗಿ ಇನ್ನು ಹೆಚ್ಚಿನ ಪಂದ್ಯಗಳನ್ನು ಆಡಿ ಹೆಚ್ಚಿನ ಗೆಲುವನ್ನು ಭಾರತ ತಂಡಕ್ಕೆ ತಂದುಕೊಡಲಿ ಎಂದು ಎಲ್ಲರೂ ಆಶಿಸುತ್ತಾರೆ.