WhatsApp Group Join Now
Telegram Group Join Now

ಮನುಷ್ಯನ ಸಾಧಿಸುವ ಛಲ ಮತ್ತು ಯೋಚನೆಯ ಮುಂದೆ ಯಾವ ಬಡತನವು ಅಡ್ಡಿಯಾಗುವುದಿಲ್ಲ. ಕಷ್ಟಗಳನ್ನು ಮನುಷ್ಯ ತನ್ನ ಜೀವನದಲ್ಲಿ ತನ್ನ ಸಾಧನೆಯ ಮೆಟ್ಟಿಲಾಗಿಸಿಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನ ಯಶಸ್ಸಿನ ಹಿಂದೆ ಅನೇಕ ತೊಂದರೆಗಳನ್ನು ಎದುರಿಸುತ್ತಾನೆ. ಇದೇ ರೀತಿಯಲ್ಲಿ ಆಫ್ರಿಕಾದ ಮೇಲ್ಕಂ ಎನ್ನುವ ವ್ಯಕ್ತಿಯು ಅತ್ಯಂತ ಬಡತನದಲ್ಲಿದ್ದು ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಮನೋಭಾವದಿಂದ ವ್ಯಾಪಾರ ಮಾಡುವ ಗುರಿಯನ್ನು ಹಿಡಿದು ಯಶಸ್ಸನ್ನು ಕಾಣುತ್ತಾನೆ. ಆದ್ದರಿಂದ ನಾವಿಲ್ಲಿ ಇವರ ಯಶಸ್ಸಿನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಆಫ್ರಿಕಾದ ಜನಜೀವನ ಸಹಜವಾಗಿಯೇ ತುಂಬ ಕಷ್ಟಕರವಾಗಿರುತ್ತದೆ. ಮೇಲ್ಕಂ ತುಂಬಾ ಬಡ ಕುಟುಂಬದಲ್ಲಿ ಜನಿಸುತ್ತಾರೆ. ಅವರಿಗೆ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಇರುತ್ತಿತ್ತು. ಶಿಕ್ಷಣ ಎನ್ನುವುದು ಈ ಕುಟುಂಬಕ್ಕೆ ತುಂಬಾ ದೂರದ ಮಾತಾಗಿತ್ತು. ಕರೆಂಟ್ ಸಂಪರ್ಕವು ಕೂಡ ಈತನ ಮನೆಗೆ ಇರಲಿಲ್ಲ. ಅವರ ತಂದೆಗೆ ಇಸ್ಪೀಟ್ ಆಡುವ ಚಟ ಇತ್ತು. ಅವರು ದುಡಿದ ದುಡ್ಡನ್ನೆಲ್ಲ ಇಸ್ಪೀಟಿನಲ್ಲಿ ಕಳೆಯುತ್ತಿದ್ದರು. ಮೇಲ್ಕಂ ಹೇಗಾದರೂ ಮಾಡಿ ತನ್ನ ಕುಟುಂಬವನ್ನು ಕಷ್ಟದಿಂದ ಪಾರು ಮಾಡಬೇಕು ಎಂದು ಯೋಚಿಸುತ್ತಾನೆ. ಹೇಗಾದರೂ ಮಾಡಿ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ.

ಸಣ್ಣ ಪುಟ್ಟ ಕೆಲಸಗಳಿಂದ ಜೀವನ ಮಾಡಲು ಸಾಧ್ಯವಿಲ್ಲ ಏನಾದರೂ ದೊಡ್ಡ ವ್ಯವಹಾರವನ್ನು ಮಾಡಬೇಕು ಎಂದು ಆತನಿಗೆ ಸರಿಯಾಗಿ ತಿಳಿದಿರುತ್ತದೆ. ಹೀಗಾಗಿ ಆತನು ಒಂದು ನಿರ್ಧಾರವನ್ನು ಮಾಡುತ್ತಾನೆ. ತಾನು ಕೂಡಿಟ್ಟ ಹಣದಲ್ಲಿ ಹಳೆಯ ಟೈಯರ್ ಗಳನ್ನು ಖರೀದಿ ಮಾಡುತ್ತಾನೆ. ಇದನ್ನು ನೋಡಿದ ಜನ ಅವನನ್ನು ಹೀಯಾಳಿಸುತ್ತಾರೆ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆತ ತಾನು ಖರೀದಿ ಮಾಡಿದ ಟೈಯರ್ ನಿಂದ ಚಪ್ಪಲಿಗಳನ್ನು ತಯಾರು ಮಾಡುತ್ತಾನೆ. ಬಡಜನರಿಗೆ ದುಬಾರಿ ಬೆಲೆಯ ಚಪ್ಪಲಿಗಳನ್ನು ಖರೀದಿ ಮಾಡಲು ಆಗುವುದಿಲ್ಲ ಎಂಬುದನ್ನು ಈತ ಸರಿಯಾಗಿ ಅರಿತಿದ್ದ. ಈತ ತಯಾರಿಸಿದ ಚಪ್ಪಲಿ ಮೊದಲ ದಿನವೇ ಅಷ್ಟು ವ್ಯಾಪಾರವಾಗಿ ಬಿಡುತ್ತದೆ.

ಕಡಿಮೆ ಹಣದಲ್ಲಿ ಅತ್ಯುತ್ತಮ ಒಳ್ಳೆಯ ಗುಣಮಟ್ಟದ ಚಪ್ಪಲಿಯನ್ನು ಯಾರೊಬ್ಬರೂ ಖರೀದಿ ಮಾಡದೇ ಇರಲು ಸಾಧ್ಯವಿಲ್ಲ. ಇದರ ದೊಡ್ಡ ಕಂಪನಿಗಳನ್ನು ತಯಾರಿಸಲು ಆಫ್ರಿಕಾದಲ್ಲಿ ಹಣದ ಸಮಸ್ಯೆ ಇತ್ತು. ತುಂಬಾ ವೆಚ್ಚ ಬೀಳುತ್ತಿತ್ತು. ಹೀಗಾಗಿ ಮೇಲ್ಕಂನ ಚಪ್ಪಲಿಗೆ ತುಂಬಾ ಬೇಡಿಕೆ ಉಂಟಾಯಿತು. ಇದನ್ನರಿತ ಅವನು ವಿವಿಧ ಬಗೆಯ ಡಿಸೈನ್ ನಲ್ಲಿ ಚಪ್ಪಲ್ ಅನ್ನು ತಯಾರಿಸುತ್ತಾನೆ. ನಂತರ ಸಣ್ಣದೊಂದು ಚಪ್ಪಲಿ ತಯಾರಿಸುವ ಫ್ಯಾಕ್ಟರಿಯನ್ನು ರೆಡಿ ಮಾಡುತ್ತಾನೆ. ನಂತರ ಅನೇಕ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ಅವನ ಫ್ಯಾಕ್ಟರಿಗೆ ಕೆಲಸಕ್ಕಾಗಿ ಅರಸಿ ಹೋಗುತ್ತಾರೆ. ಮೇಲ್ಕಂಮ್ ನ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತದೆ. ಸಾಲವನ್ನೆಲ್ಲ ತೀರಿಸಿ ಅತ್ಯಂತ ದೊಡ್ಡ ವ್ಯಾಪಾರಸ್ಥನಾಗಿದ್ದಾನೆ. ಹೀಗೆ ಸಾಧಿಸುವ ಮನಸ್ಸು ಪ್ರತಿಯೊಬ್ಬನನ್ನು ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: