ಆಧಾರ್ ಕಾರ್ಡ್ ಈಗ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನ ಬಳಿ ಇರಬೇಕಾದ ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಇರುವ ಮಾಹಿತಿಗಳು ಸರಿಯಾಗಿರಬೇಕು ಒಂದುವೇಳೆ ಬದಲಾವಣೆ ಮಾಡಬೇಕಾದಲ್ಲಿ ಕೆಲವು ಹಂತಗಳನ್ನು ಒಳಗೊಂಡಿದೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಭಾರತ ಸರ್ಕಾರದ ಯುನಿಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ ಎಂಬ ವೆಬ್ ಸೈಟಿನ ಮೂಲಕ ಹೊಸದಾಗಿ ಆದಾರ್ ಕಾರ್ಡ ಪಡೆಯುವವರು ಹಾಗೂ ಹೆಸರು, ವಿಳಾಸ, ಲಿಂಗ ಮೊಬೈಲ್ ನಂಬರ್, ಇಮೇಲ್ ಐಡಿ, ಹುಟ್ಟಿದ ದಿನಾಂಕ, ಭಾವಚಿತ್ರ, ಬೆರಳಚ್ಚು ಹಾಗೂ ಕಣ್ಣಿನ ಚಿತ್ರದಲ್ಲಿ ಏನೇ ಬದಲಾವಣೆ ಮಾಡುವುದಾದರೆ ಈ ವೆಬ್ ಸೈಟಿನ ಮೂಲಕವೇ ಮಾಡಬೇಕು. ವೆಬ್ ಸೈಟ್ ನಲ್ಲಿ ಸೆಲೆಕ್ಟ್ ಸಿಟಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಅದರಲ್ಲಿ ನಗರದ ಹೆಸರನ್ನು ಆಯ್ಕೆ ಮಾಡಿಕೊಂಡು ಪ್ರೋಸಿಡ್ ಟು ಬುಕ್ ಅಪಾಯಿಂಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಕಾರ್ಡನಲ್ಲಿ ಇರುವ ಮೊಬೈಲ್ ಸಂಖ್ಯೆಯನ್ನು ಹಾಕಬೇಕು ಇಲ್ಲದಿದ್ದರೆ ಈಗ ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ ನಂತರ ಒಂದು ಕ್ಯಾಪ್ಚರ್ ಕೋಡ್ ನೀಡಲಾಗುತ್ತದೆ ಅದನ್ನು ಹಾಗೆಯೇ ಬರೆದು ಗೆಟ್ ಒಟಿಪಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಕೆಲ ನಿಮಿಷಗಳಲ್ಲಿ ಮೊಬೈಲ್ ಗೆ ಒಟಿಪಿ ಸಂಖ್ಯೆ ಬರುತ್ತದೆ ಅದನ್ನು ಎಂಟರ್ ಒಟಿಪಿ ಎಂಬಲ್ಲಿ ಹಾಕಿ ವೆರಿಫೈ ಒಟಿಪಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಪರ್ಸ್ನಲ್ ಡೀಟೇಲ್ಸ್ , ಅಪಾಯಿಂಟ್ಮೆಂಟ್ ಡೀಟೇಲ್ಸ್, ಎಕ್ನೊಲೆಗ್ಮೆಂಟ್ ಎಂಬ ಮೂರು ಹಂತಗಳು ಕಾಣುತ್ತವೆ. ಇದರಲ್ಲಿ ಸೆಲೆಕ್ಟ್ ಎನ್ರೊಲ್ಮೆಂಟ್ ಎಂಬ ಆಯ್ಕೆಯಲ್ಲಿ ಅಪ್ಡೇಟ್ ಎಕ್ಸಿಸ್ಟಿಂಗ್ ಆಧಾರ್ ಡೀಟೇಲ್ಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನೇಮ್ ಆನ್ ಆಧಾರ್ ಎಂಬ ಆಯ್ಕೆಯಲ್ಲಿ ಆಧಾರ್ ಕಾರ್ಡ ನಲ್ಲಿರುವ ಹೆಸರನ್ನು ಹಾಕಬೇಕು. ಕೆಳಗಡೆ ಹೆಸರು ವಿಳಾಸ ಮೊಬೈಲ್ ನಂಬರ್ ಇಮೇಲ್ ಐಡಿ ಹುಟ್ಟಿದ ದಿನಾಂಕ ಲಿಂಗ ಬಯೋಮೆಟ್ರಿಕ್ ಎಂಬ ಆಯ್ಕೆಗಳು ಸಿಗುತ್ತವೆ ಅದರಲ್ಲಿ ನೀವು ಬದಲಾವಣೆ ಮಾಡಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹೆಸರು, ಹುಟ್ಟಿದ ದಿನಾಂಕ , ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡುವುದಾದರೆ ನೇಮ್, ಡೇಟ್ ಆಫ್ ಬರ್ತ್ ಮತ್ತು ಮೋಬೈಲ್ ನಂಬರ್ ಎನ್ನುವ ಆಯ್ಕೆಗೆ ಕ್ಲಿಕ್ ಮಾಡಿ ಹಾಗೂ ಬದಲಾವಣೆ ಮಾಡಬೇಕಾದ ಮಾಹಿತಿಯನ್ನು ತುಂಬಬೇಕು ಮತ್ತು ಪ್ರೂಫ್ ಆಫ್ ಐಡೆಂಟಿಟಿ ಹಾಗೂ ಡೇಟ್ ಆಫ್ ಬರ್ತ್ ಪ್ರೂಫ್ ಎನ್ನುವ ಆಯ್ಕೆಯಲ್ಲಿ ನಿಮ್ಮ ಬಳಿ ಇರುವ ದಾಖಲೆಯನ್ನು ಆಯ್ಕೆ ಮಾಡಿ ಪ್ರಿವ್ಯೂ ಎಂಬುದರ ಮೇಲೆ ಕ್ಲಿಕ್ ಮಾಡದ ನಂತರ ಬದಲಾವಣೆ ಮಾಡಿದ ಮಾಹಿತಿಯನ್ನು ತೋರಿಸುತ್ತದೆ. ಸರಿಯಾಗಿದ್ದರೆ ಕನ್ಫರ್ಮ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ಅಪಾಯಿಂಟ್ಮೆಂಟ್ ಡೀಟೇಲ್ಸ್ ನಲ್ಲಿ ರಾಜ್ಯ,ನಗರ, ಶಾಖೆ ಹಾಗೂ ದಿನ ಹಾಗೂ ಸಮಯವನ್ನು ಆಯ್ಕೆ ಮಾಡಿದ ನಂತರ ಕೆಳಗಡೆ ಇರುವ ನೆಕ್ಸ್ಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು .ನಂತರ ರೆಸಿಡೆಂಟ್ ಅಪಾಯಿಂಟ್ಮೆಂಟ್ ಡೀಟೇಲ್ಸ್ ನ್ನು ಪ್ರಿಂಟ್ ಪಡೆಯಬಹುದು. ಅಪಾಯಿಂಟ್ಮೆಂಟ್ ನೀಡಿದ ದಿನದಂದು ಆಧಾರ್ ಸೆಂಟರ್ ಹೋಗಿ ಬದಲಾವಣೆ ಮಾಡಿಕೊಳ್ಳಬೇಕು. ಅಪಾಯಿಂಟ್ಮೆಂಟನ್ನು ರದ್ದು ಮಾಡುವುದಾದರೆ ಮೇನೇಜ್ ಅಪಾಯಿಂಟ್ಮೆಂಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಕ್ಯಾನ್ಸಲ್ ಅಪಾಯಿಂಟ್ಮೆಂಟ್ ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾದುವುದರಿಂದ ನಾವು ಪಡೆದ ಅಪಾಯಿಂಟ್ಮೆಂಟ್ ರದ್ದಾಗುತ್ತದೆ. ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿಯಾಗಿದ್ದು ಬೇರೆಯವರಿಗೂ ಇದನ್ನು ತಿಳಿಸಿ.