ನಮ್ಮ ಜೀವನದಲ್ಲಿ ಗೆಳೆತನ ತುಂಬಾ ಮುಖ್ಯವಾಗಿರುತ್ತದೆ. ಯಾರು ಸ್ವಚ್ಛಂದ ಗೆಳೆತನವನ್ನು ಹೊಂದಿರುತ್ತಾರೊ ಅವರು ಯಶಸ್ಸನ್ನು ಪಡೆಯುತ್ತಾರೆ ಹಾಗೂ ಜೀವನದ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಕಷ್ಟದ ಸಮಯದಲ್ಲೂ ಪಾರಾಗುತ್ತಾರೆ. ಕೆಟ್ಟ ಗೆಳೆತನದಿಂದ ದಾರಿ ತಪ್ಪುವುದು ಎಷ್ಟು ಸತ್ಯವೊ, ಒಳ್ಳೆಯ ಗೆಳೆತನದಿಂದ ಸರಿದಾರಿಯನ್ನು ಆಯ್ಕೆ ಮಾಡಿಕೊಂಡು ಯಶಸ್ಸನ್ನು ಪಡೆಯುತ್ತೇವೆ ಎನ್ನುವುದು ಅಷ್ಟೆ ಸತ್ಯ. ಮಹಾಭಾರತದಲ್ಲಿ ಶ್ರೀಕೃಷ್ಣನು ಗೆಳೆತನದ ಮಹತ್ವದ ಬಗ್ಗೆ ಹೇಳಿದ ಸಂದೇಶವನ್ನು ಈ ಲೇಖನದಲ್ಲಿ ನೋಡೋಣ.
ಜೀವನದಲ್ಲಿ ಎಲ್ಲರೂ ಮುಂದೆ ಬರಬೇಕು ಎಂದು ಅಂದುಕೊಳ್ಳುತ್ತಾರೆ, ಯಶಸ್ಸನ್ನು ಪಡೆಯಬೇಕೆಂದು ಅಂದುಕೊಳ್ಳುತ್ತಾರೆ ಆದರೆ ಎಲ್ಲರಿಂದಲೂ ಯಶಸ್ಸನ್ನು ಪಡೆಯಲು ಆಗುವುದಿಲ್ಲ. ಕೆಲವರು ತಾವು ಯಾವ ಕಾರಣಕ್ಕಾಗಿ ಯಶಸ್ಸನ್ನು ಪಡೆಯಲಿಲ್ಲ ಎಂಬುದನ್ನು ಹುಡುಕುವುದರಲ್ಲಿ ಮುಳುಗುತ್ತಾರೆ. ಬುನಾದಿಯಲ್ಲಿ ದೋಷವಿದ್ದರೆ ಗೋಪುರವನ್ನು ಎಷ್ಟು ಚೆನ್ನಾಗಿ ಕಟ್ಟಿದರೂ ಪ್ರಯೋಜನವಿಲ್ಲ. ಹಾಗೆಯೆ ನಾವು ಉತ್ತಮ ಗೆಳೆತನವನ್ನು ಸಂಪಾದಿಸಿದರೆ ಯಶಸ್ಸನ್ನು ಪಡೆದೆ ಪಡೆಯುತ್ತೇವೆ. ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಕೆಲವರು ಶಸ್ತ್ರ ಎಂದು ಹೇಳುತ್ತಾರೆ, ಇನ್ನು ಕೆಲವರು ಶಾಸ್ತ್ರ ಎಂದು ಹೇಳಬಹುದು. ಕೆಲವರು ಬುದ್ಧಿ ಎಂದು, ಇನ್ನು ಕೆಲವರು ಬಲ ಹೀಗೆ ಒಬ್ಬೊಬ್ಬರ ಉತ್ತರ ಒಂದೊಂದು ರೀತಿ ಇರುತ್ತದೆ ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಇದ್ಯಾವುದು ಅಲ್ಲ. ಪ್ರಪಂಚದಲ್ಲಿ ಅತಿ ದೊಡ್ಡ ಶಕ್ತಿ ಎಂದರೆ ಅದು ಗೆಳೆತನ. ಯಾವ ವ್ಯಕ್ತಿಗೆ ಸ್ವಚ್ಛವಾದ ಗೆಳೆತನ ಸಿಗುತ್ತದೆಯೊ ಅವನೆ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಆಗುತ್ತಾನೆ. ಕಷ್ಟದ ಸಮಯದಲ್ಲಿ ಗೆಳೆತನ ಶಸ್ತ್ರವಾಗಿ, ಬಲವಾಗಿ ನಿಮ್ಮ ಸಹಾಯಕ್ಕೆ ಬರುತ್ತದೆ. ಜೀವನದಲ್ಲಿ ದಾರಿತಪ್ಪಿಸಿಕೊಂಡಾಗ ಗೆಳೆತನವೆ ಶಾಸ್ತ್ರವಾಗಿ ದಾರಿ ತೋರಿಸುತ್ತದೆ. ಷಡ್ಯಂತ್ರದಲ್ಲಿ ಸಿಕ್ಕಿಹಾಕಿಕೊಂಡಾಗ ಗೆಳೆತನವೆ ಬುದ್ಧಿಯಾಗಿ ನಮ್ಮನ್ನು ಕಾಪಾಡುತ್ತದೆ. ಒಂಟಿಯಾಗಿದ್ದಾಗ ಮಮತೆಯಾಗಿ ನಮ್ಮ ಜೊತೆ ಸದಾ ಗೆಳೆತನವಿರುತ್ತದೆ.
ಈ ಪ್ರಪಂಚದಲ್ಲಿ ಏನನ್ನಾದರೂ ಸಂಪಾದಿಸಬೇಕು ಎಂಬ ವಿಚಾರ ನಿಮ್ಮ ಮನಸ್ಸಿನಲ್ಲಿದ್ದರೆ, ದುಡ್ಡನ್ನು ಸಂಪಾದಿಸಬೇಡಿ ಬದಲಿಗೆ ಸ್ವಚ್ಛಂದ ಗೆಳೆತನವನ್ನು ಸಂಪಾದಿಸಿ. ಈ ಪ್ರಪಂಚದಲ್ಲಿ ಗೆಳತನ ಮಾಡಿಕೊಳ್ಳುವುದೆ ನಿಮ್ಮ ದೌರ್ಬಲ್ಯವಾದರೆ ಆಗ ನೀವೆ ಪ್ರಪಂಚದ ಅತ್ಯಂತ ಶಕ್ತಿಶಾಲಿ ಪ್ರಾಣಿ. ನಿಮ್ಮ ಗೆಳೆತನ ಎಂತದ್ದು ಎಂದರೆ ಗೆಳೆತನದಲ್ಲಿ ನಿರೀಕ್ಷಿಸುವಂತದ್ದು ಏನೂ ಇರುವುದಿಲ್ಲ ಕೇವಲ ಕೊಡುವುದಿರುತ್ತದೆ ಅಂದರೆ ನಿಮ್ಮ ಸಮಯ, ಸುಖ, ಭಾವನೆಗಳನ್ನು ಕೊಡುತ್ತೀರಾ. ಏನಾದರೂ ಒಂದು ಉದ್ದೇಶ ಇಟ್ಟುಕೊಂಡು ಮಾಡುವುದಾದರೆ ಅದೆಂಥ ಗೆಳತನ. ಗೆಳೆತನ ಬಹಳ ನಿಷ್ಕಲ್ಮಶವಾಗಿರುತ್ತದೆ ಇಂತಹ ಗೆಳೆತನದಿಂದ ನಾವು ಎಲ್ಲವನ್ನು ಪಡೆದುಕೊಳ್ಳುತ್ತೇವೆ ಮತ್ತು ನಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮೊಂದಿಗೆ ಗೆಳೆತನವಿರುತ್ತದೆ. ನಮ್ಮ ಜೀವನದಲ್ಲಿ ನಿಷ್ಕಲ್ಮಶ ಗೆಳೆತನದಿಂದ ನಾವು ಯಾರನ್ನು ಬೇಕಾದರೂ ಗೆಲ್ಲುತ್ತೇವೆ. ನಿಷ್ಕಲ್ಮಶ ಗೆಳೆತನವನ್ನು ಸಂಪಾದಿಸಿ ಕಲ್ಮಶ ಗೆಳೆತನವನ್ನು ಎಂದಿಗೂ ಸಂಪಾದಿಸದಿರಿ. ಗೆಳೆತನ ಹೊಂದಲು ಅಂತಸ್ತು, ಜಾತಿ ಇದ್ಯಾವುದು ಅಡ್ಡಿಯಾಗುವುದಿಲ್ಲ, ಇವುಗಳಿಗೆ ಮೀರಿದ್ದು ಗೆಳೆತನ.