ತಮ್ಮದೆ ಸ್ವಂತ ಮನೆ ನಿರ್ಮಿಸಬೇಕೆಂದು ಎಲ್ಲರಿಗೂ ಇರುವ ಸಾಮಾನ್ಯ ಕನಸಾಗಿದೆ. ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು ಎಂದು ಹೇಳುತ್ತಾರೆ. ಮನೆ ಕಟ್ಟುವುದು ಸುಲಭವಲ್ಲ ಅದರಲ್ಲೂ ಈಗಿನ ದುಬಾರಿ ಜೀವನದಲ್ಲಿ ಚಂದದ ಮನೆ ನಿರ್ಮಿಸಲು ಬಹಳ ಹಣ ಖರ್ಚು ಮಾಡಬೇಕಾಗುತ್ತದೆ ಆದರೂ ಮನೆ ಪರಿಸರ ಸ್ನೇಹಿಯಾಗಿರುವುದಿಲ್ಲ. ಮನೆ ಕಟ್ಟುವ ಸಮಸ್ಯೆಗೆ ಸುರಕ್ಷಾ ಇಂಟರ್ ಲಾಕ್ ಮಡ್ ಬ್ಲಾಕ್ ಪರಿಹಾರವಾಗಿದೆ. ಈ ಬ್ಲಾಕ್ ಬಳಸಿ ಮನೆ ಕಟ್ಟುವುದರಿಂದ ಮನೆ ನೋಡಲು ಆಕರ್ಷಕವಾಗಿ, ಪರಿಸರಸ್ನೇಹಿಯಾಗಿರುತ್ತದೆ. ಹಾಗಾದರೆ ಸುರಕ್ಷಾ ಮಡ್ ಬ್ಲಾಕ್ ನ ಪ್ರಯೋಜನಗಳು ಹಾಗೂ ಅವುಗಳನ್ನು ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಎಂಬ ಗ್ರಾಮದ ಸಾಲಡಕ ಎಂಬ ಪುಟ್ಟ ಗ್ರಾಮದಲ್ಲಿ ಸುರಕ್ಷಾ ಮಡ್ ಬ್ಲಾಕ್ ಕಾರ್ಖಾನೆ ಇದೆ. ಸಾತ್ವಿಕ್ ಖಂಡೇರಿ ಹಾಗೂ ಪ್ರದೀಪ್ ಖಂಡೇರಿ ಎಂಬ ಇಬ್ಬರು ಯುವಕರು ಸೇರಿ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ. ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಕಾರ್ಖಾನೆ ವತಿಯಿಂದ ಸುಮಾರು 500ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು ಕರ್ನಾಟಕದ ಮೂಲೆ ಮೂಲೆಯಲ್ಲಿ ನಡೆದಿದೆ. ಕೇವಲ ಕರ್ನಾಟಕ ಅಲ್ಲದೆ ಕಾಸರಗೋಡು ಗಡಿ ಭಾಗದಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು ನಡೆಯುತ್ತಿದೆ. ಕೇರಳ ಗಡಿಭಾಗ ಮತ್ತು ಕರ್ನಾಟಕ ರಾಜ್ಯದ ಮೂಲೆಮೂಲೆಯಿಂದ ಭಾರಿ ಬೇಡಿಕೆ ಬರುತ್ತಿರುವುದರಿಂದ 24 *7 ಮಡ್ ಬ್ಲಾಕ್ ತಯಾರಿಸುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದೆ. ಈ ಕಾರ್ಖಾನೆಯಲ್ಲಿ ಕೆಲಸ ಮಾಡುವವರು 20ರಿಂದ 30 ವಯಸ್ಸಿನೊಳಗಿನ ಯುವಕರಾಗಿದ್ದಾರೆ. ಯುವಕರು ಸ್ವಾವಲಂಬಿಗಳಾಗಬೇಕು ಅವರಿಗೆ ತಮ್ಮ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕು ಎನ್ನುವುದು ಸಾತ್ವಿಕ್ ಹಾಗೂ ಪ್ರದೀಪ್ ಅವರ ಕನಸಾಗಿತ್ತು. ಇಲ್ಲಿರುವ ಮಡ್ ಬ್ಲಾಕ್ ಗಳನ್ನು ಬೇಯಿಸಿ ಮಾಡಿರುವುದಿಲ್ಲ, ಇಲ್ಲಿನ ಮಡ್ ಬ್ಲಾಕ್ ಗಳನ್ನು ಕಂಪ್ರೆಸ್ಡ್ ಬ್ಲಾಕ್ ಗಳು ಎನ್ನುತ್ತಾರೆ ಮತ್ತು ಇದು ಇಂಟರ್ಲಾಕಿಂಗ್ ಸಿಸ್ಟಮ್ ಅನ್ನು ಹೊಂದಿದೆ.
ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಕಾರ್ಖಾನೆಯಲ್ಲಿ ಎರಡು ರೀತಿಯ ಸೈಜ್ ನಲ್ಲಿ ಮಡ್ ಬ್ಲಾಕ್ ಗಳು ತಯಾರಾಗುತ್ತವೆ. ಮಡ್ ಬ್ಲಾಕ್ ತಯಾರಿಸಲು 85% ಮಣ್ಣು ಮತ್ತು 15% ಸಿಮೆಂಟ್ ಬಳಸಲಾಗುತ್ತದೆ. ಈ ಕಾರ್ಖಾನೆಯನ್ನು ಪ್ರಾರಂಭಿಸುವ ಮೊದಲು ಇಲ್ಲಿಯ ಮಣ್ಣು ಮಡ್ ಬ್ಲಾಕ್ ತಯಾರಿಸಲು ಯೋಗ್ಯವಾಗಿದೆಯೆ ಎಂದು ಪರೀಕ್ಷಿಸಿದ ನಂತರ ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ಇಲ್ಲಿ ತಯಾರಾದ ಮಡ್ ಬ್ಲಾಕ್ ಗಳನ್ನು 15 ದಿವಸಗಳ ಕಾಲ ಕ್ಯೂರಿಂಗ್ ಮಾಡಲಾಗುತ್ತದೆ. ಇಲ್ಲಿ ತಯಾರಾಗುವ 8 ಬೈ 6 ಮಡ್ ಬ್ಲಾಕ್ ಗಳು 20 ಕೆಜಿ, 6 ಬೈ 6 ಬ್ಲಾಕ್ ಗಳು 14 ಕೆಜಿ ತೂಕವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ದಿನೆ ದಿನೆ ಏರುತ್ತಿರುವುದರಿಂದ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳು ಜನರಿಗೆ ವರದಾನವಾಗಿದೆ. ಸುರಕ್ಷಾ ಮಡ್ ಬ್ಲಾಕ್ ಗಳು 70% ತಾಪಮಾನವನ್ನು ತಡೆಯುತ್ತದೆ ಅಲ್ಲದೆ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳನ್ನು ಬಳಸಿ ಕಟ್ಟಿದ ಮನೆಗಳು ಸುಂದರವಾಗಿ ಕಾಣುತ್ತದೆ ಮತ್ತು ಮನೆಯ ಒಳಗೆ ತಂಪಾಗಿರುತ್ತದೆ. ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ನಿಂದ ಕಟ್ಟಿದ ಮನೆಯು ಬಾಳಿಕೆ ಬರುತ್ತದೆ ಹಾಗೂ ಚಳಿಗಾಲವಿರಲಿ, ಬೇಸಿಗೆಕಾಲವಿರಲಿ, ಮಳೆಗಾಲವಿರಲಿ ಎಲ್ಲಾ ರೀತಿಯ ವಾತಾವರಣಕ್ಕೆ ಸೂಕ್ತವಾಗಿರುತ್ತದೆ. ಸುರಕ್ಷಾ ಮಡ್ ಬ್ಲಾಕ್ ಗಳಿಗೆ ನೇರವಾಗಿ ಬಣ್ಣ ಬಳಿಯಬಹುದು ಜೊತೆಗೆ ಒಂದಕ್ಕೊಂದು ಜೋಡಿಸುವಾಗ ಮಧ್ಯದಲ್ಲಿ ಸಿಮೆಂಟ್, ಮರಳಿನ ಅವಶ್ಯಕತೆ ಇರುವುದಿಲ್ಲ, ಒಂದುಕ್ಕೊಂದು ಭದ್ರವಾಗಿ ಅಂಟಿಕೊಳ್ಳುತ್ತದೆ.
ಮೂಡಬಿದ್ರೆಯಲ್ಲಿ ಫಸ್ಟ್ ಫ್ಲೋರ್ ಅನ್ನು ಕೇವಲ ಒಂದು ತಿಂಗಳಿನಲ್ಲಿ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಕಾರ್ಖಾನೆಯ ಟೀಮ್ ಕಂಪ್ಲೀಟ್ ಮಾಡಿದ್ದಾರೆ. ವೆಚ್ಚದಾಯಕವಲ್ಲದ ಸರಳ ಮನೆಗಳಿಗೂ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳನ್ನು ಬಳಸಬಹುದು, ಐಷಾರಾಮಿ ಮನೆಗಳಿಗೂ ಬಳಸಬಹುದು. ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳನ್ನು ಖರೀದಿಸುವವರು ಅವುಗಳ ಬೆಲೆಯೊಂದಿಗೆ ಸಾಗಾಣಿಕೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಸಾಗಾಣಿಕೆ ವೆಚ್ಚವನ್ನು ಸೇರಿಸಿದರು ದುಬಾರಿಯಾಗುವುದಿಲ್ಲ. ಹೊಟೇಲ್, ಮನೆ, ಹೋಮ್ ಸ್ಟೆ, ರೆಸಾರ್ಟ್ ಹೀಗೆ ಯಾವುದೆ ರೀತಿಯ ಕಟ್ಟಡಗಳಿಗೂ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳು ಸೂಕ್ತವಾಗಿದೆ. ಮೊದಲಿನ ಕಾಲದಲ್ಲಿ ಮಣ್ಣಿನಿಂದಲೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು ಇದಕ್ಕೆ ಕಾರಣ ನಾವು ಪ್ರಕೃತಿಯ ನಡುವೆ ಜೀವಿಸುತ್ತಿರುವುದರಿಂದ ಪ್ರಕೃತಿಗೆ ನಮ್ಮಿಂದ ಯಾವುದೆ ರೀತಿಯಲ್ಲಿ ಹಾನಿಯಾಗಬಾರದು ಎಂಬುದಾಗಿತ್ತು. ಆದರೆ ಆಧುನಿಕ ಯುಗದಲ್ಲಿ ಸಿಮೆಂಟ್ ಇಟ್ಟಿಗೆ ಇತ್ಯಾದಿ ಸಾಮಗ್ರಿಗಳನ್ನು ಬಳಸಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳು ಪ್ರಕೃತಿಗೆ ಯಾವುದೆ ರೀತಿಯಲ್ಲಿ ಹಾನಿಯಾಗುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೆ ಆದ ಸೂರಿನ ಕನಸಿರುತ್ತದೆ ಅದು ದುಬಾರಿಯಾಗಬಾರದು, ಆಕರ್ಷಕವಾಗಿರಬೇಕು, ಪರಿಸರ ಸ್ನೇಹಿಯಾಗಿರಬೇಕು, ಮನೆಯೊಳಗೆ ತಂಪು ವಾತಾವರಣವಿರಬೇಕು ಎಂಬ ಕನಸಿದ್ದರೆ ಸುರಕ್ಷಾ ಇಂಟರ್ಲಾಕ್ ಬ್ಲಾಕ್ ಗಳು ನಿಮಗೆ ಸಹಾಯ ಮಾಡುತ್ತದೆ. ಕೃತಕ ಮರಳಿನ ಅಭಾವ, ದುಬಾರಿ ಸಿಮೆಂಟ್, ಕೆಲಸದಲ್ಲಿ ವಿಳಂಬ ಈ ಎಲ್ಲಾ ಸಮಸ್ಯೆಗಳಿಗೆ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್ ಗಳು ಉತ್ತರ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕಡಿಮೆ ಖರ್ಚಿನಲ್ಲಿ ಸುಂದರ, ಪರಿಸರಸ್ನೇಹಿ ಮನೆ ನಿಮ್ಮದಾಗಿಸಿಕೊಳ್ಳಿ.