ಈಗೊಂದು ವಾರದಿಂದ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಸಾಕಷ್ಟು ಹಾವಳಿ ನೀಡುತ್ತಿರುವ ಹೆಸರು ಎಂದರೆ ಅದು ಚಕ್ರವರ್ತಿ ಚಂದ್ರಚೂಡ್. ಇಷ್ಟಕ್ಕೂ ಈ ಚಕ್ರವರ್ತಿ ಚಂದ್ರಚೂಡ್ ಯಾರೂ? ಇವರು ನಟಿ ಶೃತಿ ಅವರನ್ನು ವಿವಾಹ ಆಗಿದ್ದರಾ? ಇವರಿಬ್ಬರ ದಾಂಪತ್ಯ ಜೀವನ ಮುರಿದು ಬೀಳಲು ಕಾರಣ ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕನ್ನಡದ ಖ್ಯಾತ ನಟಿ ಶೃತಿ ಹಾಗೂ ನಿರ್ದೇಶಕ ಎಸ್ ಮಹೇಂದರ್ ಅವರ ಇಬ್ಬರ ನಡುವೆ ಬಿರುಕು ಮೂಡಿದ ಕಾಲ ಅದು. ಇದರ ನಡುವೆ ಎಲ್ಲೆಂದರಲ್ಲಿ ಇವರಿಬ್ಬರ ಬಗ್ಗೆ ಸಾಕಷ್ಟು ಗುಸು ಗುಸು ಮಾತು ಆರಂಭ ಆಗಿತ್ತು. ಅದೇನೆಂದರೆ , ನಟಿ ಶೃತಿ ಇನ್ನೊಂದು ಮದುವೆ ಆಗುತ್ತಾ ಇದ್ದಾರಂತೆ. ಆದರೆ ಶೃತಿ ಯಾರನ್ನ ಮದುವೆ ಆಗುತ್ತಾ ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮಾತ್ರ ಆಗ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಚಕ್ರವರ್ತಿ ಚಂದ್ರಚೂಡ ಅವರು. ಇಲ್ಲಿ ಒಂದು ವಿಶೇಷ ಎಂದರೆ ಚಕ್ರವರ್ತಿ ಚಂದ್ರಚೂಡ್ ಅವರಿಗೂ ಕೂಡಾ ಶೃತಿ ಅವರೊಂದಿಗಿನ ವಿವಾಹ ಎರಡನೇ ಮದುವೆಯೇ ಆಗಿತ್ತು. ಮಂಜುಳಾ ಎನ್ನುವ ಯುವತಿಯ ಜೊತೆಗೆ ಮೊದಲೇ ಚಂದ್ರಚೂಡ್ ಅವರ ವಿವಾಹ ಆಗಿತ್ತು.
ಇದಕ್ಕೂ ಮೊದಲು ಚಕ್ರವರ್ತಿ ಚಂದ್ರಚೂಡ್ ಹಾಗೂ ಮಂಜುಳಾ ಇವರಿಬ್ಬರ ಸಂಸಾರದಲ್ಲಿ ವಿರಸ ಮೂಡಿ ಇಬ್ಬರೂ ಬೇರೆಯಾಗಿ ಜೀವನ ನಡೆಸತೊಡಗಿದರು. ನಂತರದ ದಿನಗಳಲ್ಲಿ ಚಂದ್ರಚೂಡ್ ಶೃತಿ ಅವರನ್ನು ವಿವಾಹ ಆಗುತ್ತಾರೆ. ಆದರೆ ಬರು ಬರುತ್ತಾ ಶೃತಿ ಅವರಿಗೆ ಚಂದ್ರಚೂಡ್ ಯಾಕೋ ತನ್ನೆಲ್ಲ ವ್ಯವಹಾರದಲ್ಲಿ ಮಧ್ಯೆ ಬರುತ್ತಾ ಇದ್ದಾರೆ ಎನ್ನಿಸತೊಡಗಿತು. ಸಂಸಾರದಲ್ಲಿ ಕಿರಿಕಿರಿ ಆಗತೊಡಗಿತು. ಒಬ್ಬ ಸಿನಿಮಾ ನಟಿ ಎಂದಮೇಲೆ ಅವರಿವರ ಫೋನ್ ಕಾಲ್ ಗಳು ಬರುತ್ತಾ ಇರುವುದು ಸಹಜವೇ. ಇದಕ್ಕೂ ಕೂಡಾ ಚಂದ್ರಚೂಡ್ ತಲೇ ಹಾಕುತ್ತಾರೆ ಎನ್ನಿಸಿತು ಶೃತಿ ಅವರಿಗೆ. ಇದರಿಂದ ಸಣ್ಣಪುಟ್ಟ ಜಗಳ ಆರಂಭವಾಗಿ ಇದರಿಂದ ಆರಂಭವಾದ ಜಗಳ ಇಬ್ಬರಿಗೂ ಸಂಸಾರದಲ್ಲಿ ಈ ರೀತಿಯಾಗಿ ಇದ್ದು ರೋಸಿಹೋಗಿತ್ತು.
ಹೇಳಿಕೇಳಿ ಚಂದ್ರಚೂಡ್ ಒಬ್ಬ ವೈಚಾರಿಕ ಪ್ರಜ್ಞೆ ಹೊಂದಿರುವ ಮನುಷ್ಯ. ಸಾಹಿತ್ಯ ಸಂಸ್ಕೃತಿ ಇದರ ಬಗ್ಗೆ ಓದಿಕೊಂಡಿರುವರು. ಹೀಗಾಗಿ ಶೃತಿ ಅವರಿಂದ ಬೇರೆ ಆದಮೇಲೆ ಕೂಡಾ ಮಗುವಿನ ಬರ್ತಡೇ ಗೆ ಹೋಗಿ ಶುಭ ಕೋರಿ ಬಂದಿದ್ದರು. ಇದೆಲ್ಲದರ ನಡುವೆ ಚಂದ್ರಚೂಡ್ ಅವರ ಮೊದಲ ಪತ್ನಿ ಮಂಜುಳಾ ಒಂದು ಕೇಸ್ ದಾಖಲು ಮಾಡುತ್ತಾರೆ. ತನಗೆ ವಿಚ್ಛೇದನ ನೀಡದೆ ಎರಡನೇ ಮದುವೆ ಆಗಿದ್ದಾರೆ ಎಂದು ಕಂಪ್ಲೇಂಟ್ ಕೊಡುತ್ತಾರೆ. ಇದರ ನಂತರ ಶೃತಿ ಅವರು ಚಂದ್ರಚೂಡ್ ತನ್ನ ಮೊದಲ ಪತ್ನಿ ಮಂಜುಳಾ ಅವರ ಜೊತೆಗೇ ಇರಲಿ ಎಂದು ತಮ್ಮ ಒಪ್ಪಿಗೆ ಸೂಚಿಸಿದರು. ನಂತರ ಈ ವಿವಾಹದ ವಿಷಯ ಕೋರ್ಟ್ , ಟಿವಿ ಚಾನೆಲ್ ಎಂದು ಸುದ್ಧಿ ಹಬ್ಬಿತ್ತು. ಮೊದಲಿನಿಂದಲೂ ಚಂದ್ರಚೂಡ್ ತಾನಾಯಿತು ತನ್ನ ಬರವಣಿಗೆ ಆಯಿತು ಎಂದುಕೊಂಡು ಇದ್ದವರು ಆದರೆ ಯಾವಾಗ ಗೌರಿ ಲಂಕೇಶ್ ಅವರ ಹತ್ಯೆ ಆಯಿತೋ ಆಗ ಪೊಲೀಸರು ಬಂದು ಚಂದ್ರಚೂಡ್ ಅವರ ವಿಚಾರಣೆ ಮಾಡಲು ಆರಂಭಿಸಿ ಅವರ ಬೆನ್ನು ತತ್ತಿದರು.
ಏಕೆಂದರೆ ಚಂದ್ರಚೂಡ್ ಇಂದ್ರಜಿತ್ ಲಂಕೇಶ್ ಅವರ ಆಪ್ತ ಸ್ನೇಹಿತರು ಆಗಿದ್ದರು. ಅದೊಂದು ಬಾರಿ ಗೌರಿ ಲಂಕೇಶ್ ಅವರಿಗೆ ಚಂದ್ರಚೂಡ್ ಆವಾಜ್ ಹಾಕಿದ್ದರಂತೆ ಅದನ್ನೇ ಪೊಲೀಸರು ಜೀವ ಬೆದರಿಕೆ ಎಂದು ತಿಳಿದು ವಿಚಾರಣೆಗೆ ಕರೆದೊಯ್ದರು. ಆದರೆ ಆ ಕೊಲೆಯಲ್ಲಿ ಇವರ ಕೈವಾಡ ಇರಲಿಲ್ಲ. ಇದಾದ ನಂತರ ಚಂದ್ರಚೂಡ್ ತಮ್ಮದೇ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡರು. ಪುಸ್ತಕ ಬರೆದರು ಜೈಲಿಗೆ ಹೋಗಿ ಬಂದರು. ನೆರೆ ಸಂತ್ರಸ್ತರಿಗೆ ಹಣ ಸಂಗ್ರಹಿಸಿ ನೆರವಾದರು. ತನಗೆ ತಿಳಿದ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಭಯವಿಲ್ಲದೇ ಹೇಳುತ್ತಿದ್ದ ಚಂದ್ರಚೂಡ್ ಇತ್ತೀಚೆಗೆ ಸಿನಿಮಾ ನಿರ್ದೇಶನ ಕೂಡಾ ಮಾಡುತ್ತಿದ್ದರು. ಯಾವಾಗ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಉಪಟಳ ಹೆಚ್ಚಾಯಿತೋ ಆಗ ಕಲರ್ಸ್ ಕನ್ನಡ ವಾಹಿನಿ ಸಂಬರ್ಗಿ ಗೆ ಟಕ್ಕರ್ ಕೊಡಲೆಂದೆ ಸೈದ್ಧಾಂತಿಕವಾಗಿ ಸಂಬರಗಿಯ ವಿರೋಧಿ ಆದ ಚಕ್ರವರ್ತಿ ಚಂದ್ರಚೂಡ್ ಅವರನ್ನು ಬಿಗ್ ಬಾಸ್ ಸೀಸನ್ ಎಂಟಕ್ಕೆ ಕಳುಹಿಸಲಾಯಿತು. ಈಗ ಮನೆಯವರು ಇವರ ಉಪಟಳವನ್ನು ಸಹಿಸಿಕೊಳ್ಳಲೇ ಬೇಕಾಗಿದೆ. ಇವರಿಬ್ಬರ ಕಿಲಾಡಿ ಜೋಡಿ ಇನ್ನೂ ಏನೇನು ಮಾಡುತ್ತದೆ ಎಂದು ಕಾದು ನೋಡಬೇಕಿದೆ.