WhatsApp Group Join Now
Telegram Group Join Now

ಈ ಯಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆಗಳಿಗೂ ಯಂತ್ರಗಳ ಅಗತ್ಯವಿದೆ, ಕೃಷಿಯನ್ನೇ ನಂಬಿ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಲಕ್ಷಾಂತರ ಮೌಲ್ಯದ ಯಂತ್ರಗಳನ್ನು ಕೊಂಡು ಕೊಳ್ಳುವುದು ಬಹು ಕಷ್ಟ. ಅಂತಹವರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲೆಂದು ‘ಕೃಷಿ ಯಾಂತ್ರೀಕರಣ ‘ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ.

ಈ ಯೋಜನೆ 2006-07 ನೇ ಸಾಲಿನಲ್ಲಿ ಜಾರಿಗೆ ಬಂದಿತ್ತು, ರೈತರು ಹತ್ತಿರದ ತಾಲೂಕ್ ವ್ಯಾಪ್ತಿಯಲ್ಲಿರುವ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಯಾವ ಯಂತ್ರೋಪಕರಣಗಳು ಲಭ್ಯವಿದೆ ಎಂಬುದು ವಿಚಾರಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅಥವಾಭೇಟಿ ನೀಡಿ.ಈ ಯೋಜನೆಯಡಿಯಲ್ಲಿ ಸಾಮಾನ್ಯ ರೈತರಿಗೆ ಸಣ್ಣ ಟ್ರಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣಗಳು, ಕುಯ್ಲು ಮತ್ತು ಒಕ್ಕ್ಕಣೆ ಉಪಕರಣಗಳು, ಡೀಸೆಲ್ ಪಂಪ್ ಸೆಟ್, ಅಂತರ ಬೇಸಾಯ ಉಪಕರಣಗಳು, ಸಸ್ಯ ಸಂಸ್ಕರಣ ಉಪಕರಣಗಳನ್ನು ಸಹಾಯ ಧನದಡಿ ವಿತರಿಸಲಾಗುತ್ತದೆ.

2 ಲಕ್ಷ ರೂ ವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು  ಪ್ರತಿ ರೈತ ಫಲನುಭವಿಗಳಿಗೆ ನೀಡಲಾಗುತ್ತಿದೆ, ಸಾಮಾನ್ಯ ವರ್ಗದ ರೈತರಿಗೆ ಶೇ 50 ಸಹಾಯ ಧನವನ್ನು ಗರಿಷ್ಠ ಮಿತಿ 1 ಲಕ್ಷ ರೂ ವರೆಗೆ ನೀಡಲಾಗುತ್ತದೆ. ಸಣ್ಣ ಟ್ರಾಕ್ಟರ್ ಗಳಿಗೆ 75000 ಸಹಾಯ ಧನ ನೀಡಲಾಗುತ್ತದೆ.ಸಾಮಾನ್ಯವಾಗಿ ಕೃಷಿ ಪರಿಕರಿಗಳು ಸಾಮಾನ್ಯ ವರ್ಗದ ರೈತರಿಗೆ 50% ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ 90 %ರಷ್ಟು ಸಹಾಯ ಧನ ನೀಡುವುದರ ಮೂಲಕ ರೈತರಿಗೆ ಹೆಚ್ಚು ಕೃಷಿ ಯಂತ್ರೋಪಕರಣಗಳ ಸೌಲಭ್ಯ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ.

ಇವುಗಳನ್ನು ಪಡೆಯಲು ಸಾಮಾನ್ಯ ದಾಖಲೆಗಳಾದ ಆಧಾರ್ ಕಾರ್ಡ್, ಪಹಣಿ, ಭಾವಚಿತ್ರ, ಹಾಗೂ ಅರ್ಜಿ ನಮೂನೆಯನ್ನು ತುಂಬಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಬೇಕಾಗುತ್ತದೆ ನಂತರ ಅವುಗಳನ್ನು  ಪರಿಗಣಿಸಿ ನಿಮಗೆ ಸಹಾಯಧನದ ಜೊತೆಗೆ ಯಂತ್ರೋಪಕರಣಗಳನ್ನು ನೀಡಲಾಗುತ್ತದೆ. ಮೊದಲು ಅರ್ಜಿಯನ್ನು ಸಲ್ಲಿಸಿದ ರೈತರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.ಕಾರಣ ರೈತ ಸಂಪರ್ಕ ಕೇಂದ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಯಂತ್ರೋಪಕರಣಗಳು ಲಭ್ಯವಿದ್ದು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: