WhatsApp Group Join Now
Telegram Group Join Now

ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ಕರ್ನಾಟಕ ರಾಜ್ಯವು ೧,೯೧,೭೯೧ ಚ.ಕಿ.ಮೀ, ವಿಸ್ತಾರವನ್ನು ಹೊಂದಿದ್ದು, ದೇಶದಲ್ಲಿ ೬ನೇ ಅತಿ ದೊಡ್ಡ ರಾಜ್ಯವಾಗಿದೆ.

ಕುರಿ ಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ರಾಜ್ಯದಲ್ಲಿ ೨೦೦೬-೦೭ನೇ ಸಾಲಿನಲ್ಲಿ ಒಟ್ಟು ಅಂದಾಜು ೩೦.೮೩ ಟನ್ ಕುರಿ ಮಾಂಸದ ಉತ್ಪಾದನೆಯಾಗಿದ್ದು, ಇದರ ಮೌಲ್ಯ ರೂ. ೪೮.೦೪ ಲಕ್ಷಗಳಾಗಿರುತ್ತದೆ. ಕುರಿಗಳ ಮಾಂಸವು ಉತ್ತಮ ಗುಣಮಟ್ಟದಾಗಿದ್ದು, ದೇಶದ ಬಹು ದೊಡ್ಡ ಮಾಂಸಹಾರಿ ವರ್ಗದ ಆಹಾರದ ಮುಖ್ಯ ಅಂಶವಾಗಿದ್ದು, ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಇದೇ ಅವಧಿಯಲ್ಲಿ ಒಟ್ಟು ೫೫೮೫ ಟನ್ ಉಣ್ಣೆ ಉತ್ಪಾದಿಸಲಾಗಿದ್ದು, ಇದರ ಮೌಲ್ಯ ಪ್ರಸ್ತುತ ಮಾರುಕಟ್ಟೆ ದರದಲ್ಲಿ ೫.೫೮ ಕೋಟಿ ರೂಪಾಯಿಗಳಾಗಿರುತ್ತದೆ. ಈ ಉಣ್ಣೆಯನ್ನು ಕಂಬಳಿ, ರತ್ನಗಂಬಳಿ, ಉಣ್ಣೆ ಶಾಲು, ಡ್ರಗೇಟ್ ಟೋಪಿ ಮುಂತಾದ ಉಣ್ಣೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಕುರಿಗಳನ್ನು ಚಲಿಸುವ ಬ್ಯಾಂಕುಗಳೆಂದು ಅಥವಾ ನಿಧಿಯೆಂದು ಕರೆಯಲಾಗುತ್ತದೆ. ಏಕೆಂದರೆ, ರೈತ ಬೇಕೆಂದಾಗ ಕುರಿಗಳನ್ನು ಮಾರಿ ತಕ್ಷಣ ಹಣ ಪಡೆಯಬಹುದು. 

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಲಮೂಲ ಕುಂಟೆ ಎಂಬ ಹಳ್ಳಿಯಲ್ಲಿ ಅಶ್ವತ್ ನಾರಾಯಣಪ್ಪ ಎಂಬುವವರು 60 ವರ್ಷದ ಅಜ್ಜ ಆದರೂ ಯಾವುದೇ ಕೆಲಸ ವ್ಯವಹಾರ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ ಎಂದು ತಿಳಿಸಿಕೊಟ್ಟಿದ್ದಾರೆ ಎಂದರೆ ಸ್ವಂತವಾಗಿ ಎರಡು ವರ್ಷದಿಂದ ಸಾಕಾಣಿಕೆಯನ್ನು ತಮ್ಮ ಮನೆಯ ಮುಂದೆ ಒಂದು ಸಣ್ಣ ಶೆಡ್ ನಿರ್ಮಿಸಿ 40 ಕುರಿಗಳಿಂದ ಕುರಿ ಸಾಕಾಣಿಕೆಯನ್ನು ಪ್ರಾರಂಭಿಸಿದರು. ಇಲ್ಲಿನ ಕುರಿಗಳನ್ನು ಹಾವೇರಿ ಕೊಪ್ಪಳ ಇತ್ಯಾದಿ ಸ್ಥಳಗಳಿಂದ ಖರೀದಿಸಿ ತಂದು ಸಾಕಾಣಿಕೆ ಮಾಡಲಾಗುತ್ತಿದೆ ವಿವಿಧ ರೀತಿಯ ತಳಿಗಳು ಇಲ್ಲಿ ಸಾಕಲು ಪಡುತ್ತವೆ. ಬಂಡವಾಳ ಹಾಕಿದ ನಂತರ ಅದರ ಎರಡು ಪಟ್ಟು ಲಾಭವನ್ನು ಪಡೆಯಲು ಈ ವ್ಯಕ್ತಿಯು ಶ್ರಮವಹಿಸಿ ದುಡಿದಿದ್ದಾರೆ ಹಾಗೂ ಕುರಿಗಳಿಗೆ ಮನೆಯಲ್ಲಿ ಇರುವಂತಹ ಕಾಳು ಹಾಗೂ ದಿನಸಿಗಳನ್ನು ಉಪಯೋಗಿಸಿ ಅವುಗಳಿಗೆ ಆಹಾರವನ್ನಾಗಿ ಮಾಡುತ್ತಿದ್ದಾರೆ ಹೀಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯದನ್ನು ಪಡೆಯುವಲ್ಲಿ ಆದರ್ಶವಾಗಿದ್ದಾರೆ. ಕುರಿಮರಿ ಗಳಿಂದ ಅನುಕೂಲಗಳೇ ಜಾಸ್ತಿ ಕುರಿಗಳ ಹುಣ್ಣೆ ಗೊಬ್ಬರ ಹಾಗೂ ಅವು ಮರಿಯಾಕಿದ್ದಾಗ ಅದರಿಂದಲು ಸಹ ಲಾಭವನ್ನು ಪಡೆಯಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: