ಸೀರೆ ಉಡುವುದು ಇದು ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆಯಾಗಿದೆ. ಹೆಣ್ಣು ಮಕ್ಕಳು ಯಾವುದೇ ರೀತಿಯ ಬಟ್ಟೆಯನ್ನು ಧರಿಸಿದರೂ ಕೂಡ ಸೀರೆ ಉಟ್ಟಷ್ಟು ಲಕ್ಷಣವಾಗಿ ಹಾಗೂ ಸುಂದರವಾಗಿ ಕಾಣುವುದಿಲ್ಲ. ಏಕೆಂದರೆ ಸೀರೆಯ ಮಹತ್ವ ಅಷ್ಟು ಇದೆ. ಹಳೆಯ ಕಾಲದಲ್ಲಿ ಹುಡುಗಿಯರು ಮದುವೆ ಆಗುವವವರೆಗೆ ಲಂಗದಾವಣಿಯನ್ನು ಧರಿಸುತ್ತಿದ್ದರು. ಮದುವೆಯ ನಂತರದಲ್ಲಿ ಸೀರೆಯನ್ನು ಉಡುತ್ತಿದ್ದರು. ಈಗ ವಿವಿಧ ರೀತಿಯ ಬಟ್ಟೆಗಳು ಇವೆ. ಆದ್ದರಿಂದ ನಾವು ಇಲ್ಲಿ ಸೀರೆಯನ್ನು ಸುಲಭವಾಗಿ ಉಡುವುದರ ಬಗ್ಗೆ ನಿಮ್ಮ ಮಾಹಿತಿಯನ್ನು ತಿಳಿಯೋಣ.
ನಮ್ಮ ಹಿಂದೂ ಸಂಸ್ಕ್ರತಿಯಲ್ಲಿ ಸೀರೆಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಇದು ಮೊದಲಿಂದಲೂ ಬಂದ ಸಂಸ್ಕೃತಿ. ಸೀರೆಯನ್ನು ಉಡಲು ಎಲ್ಲರಿಗೂ ಬರುವುದಿಲ್ಲ. ಏಕೆಂದರೆ ಈಗ ಸೀರೆಯನ್ನು ಮನೆಯಲ್ಲಿ ಏನಾದರೂ ವಿಶೇಷ ಇದ್ದರೆ ಮಾತ್ರ ಉಡುತ್ತಾರೆ. ಹಾಗೆಯೇ ಹೆಂಗಸರು ಸಹ ಹೆಚ್ಚಾಗಿ ಚೂಡಿದಾರವನ್ನೇ ಹಾಕುತ್ತಾರೆ. ಯಾವುದಾದರೂ ಮದುವೆ ಸಂಭ್ರಮಗಳು ಇದ್ದರೂ ಕೂಡ ಬ್ಯೂಟಿ ಪಾರ್ಲರ್ ನವರನ್ನು ಕರೆಸಲಾಗುತ್ತದೆ.
ಆದರೆ ಸೀರೆಯನ್ನು ಉಡುವುದು ಬಹಳ ಸುಲಭವಾಗಿದೆ. ಒಂದೆರಡು ಬಾರಿ ಕಷ್ಟ ಆಗುತ್ತದೆ. ನಂತರದಲ್ಲಿ ಸುಲಭ ಎನಿಸುತ್ತದೆ. ಮದುವೆಗೆ ಹೋಗುವಾಗ ಅಥವಾ ಯಾವುದೇ ಸಂಭ್ರಮಗಳಿಗೆ ಹೋಗುವಾಗ ಹಿಂದಿನ ದಿನವೇ ಸೀರೆಯನ್ನು ಇಸ್ತ್ರೀ ಮಾಡಿ ಸೆರಗನ್ನು ಮಾಡಿಟ್ಟುಕೊಳ್ಳಬೇಕು. ಇದರಿಂದ ಬೇಗನೆ ಕಡಿಮೆ ಸಮಯದಲ್ಲಿ ತಯಾರಿಯಾಗಿ ಹೊರಡಬಹುದು. ಸೀರೆಯನ್ನು ಉಡುವಾಗ ಮೊದಲು ಲಂಗಕ್ಕೆ ಎರಡು ಸುತ್ತನ್ನು ಸುತ್ತಿಕೊಳ್ಲಬೇಕು.
ನಂತರದಲ್ಲಿ ಸೆರಗನ್ನು ಮಾಡಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಬಿಡಬೇಕು. ನಂತರದಲ್ಲಿ ನೆರಿಗೆಯನ್ನು ಮಾಡಿಕೊಳ್ಳಬೇಕು. ಮಾಡಿಕೊಂಡ ನೆರಿಗೆಗೆ ಪಿನ್ನನ್ನು ಹಾಕಬೇಕು. ಕೊನೆಯದಾಗಿ ಸೆರಗಿಗೆ ಸಣ್ಣ ಸಣ್ಣ ರೀತಿಯಲ್ಲಿ ಮಾಡಿಕೆಯನ್ನು ಮಾಡಿಕೊಳ್ಳಬೇಕು. ಅದಕ್ಕೆ ಪಿನ್ನನ್ನು ಹಾಕಿಕೊಳ್ಳಬೇಕು. ಇಷ್ಟು ಸುಲಭವಾಗಿ ಸೀರೆಯನ್ನು ಉಡಬಹುದು. ಆದರೆ ಯಾರು ಏನೇ ಹೇಳಿದರೂ ಸೀರೆ ಉಟ್ಟಾಗ ಕಂಡ ಶೋಭೆ ಮತ್ಯಾವ ರೀತಿಯ ವಸ್ತ್ರವನ್ನು ಧರಿಸಿದರೂ ಕಾಣುವುದಿಲ್ಲ.