WhatsApp Group Join Now
Telegram Group Join Now

ಈ ವರ್ಷ ಕನ್ಯಾ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆಗಳಿವೆ ಒಂದು ಕಡೆ ಶನಿದೇವನ ಕೃಪೆಯಿಂದ ನಿಮ್ಮ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತದೆ ಹಾಗೂ ಗುರು ಗ್ರಹದ ಪ್ರಭಾವದಿಂದ ಎಪ್ರಿಲ್ ನಿಂದ ಕೆಲವು ಪರಿಸ್ಥಿತಿಗಳು ಬದಲಾಗುತ್ತದೆ. ನಿಮ್ಮ ಜೀವನದಲ್ಲಿ ಈ ವರ್ಷ ವಿಶೇಷವಾಗಿ ಜನವರಿ, ಎಪ್ರಿಲ್, ಆಗಸ್ಟ್ ನಿಂದ ಸೆಪ್ಟೆಂಬರ್ ಹಾಗೂ ಡಿಸೆಂಬರ್ ಸಮಯದಲ್ಲಿ ಪ್ರೇಮ ಸಂಬಂಧಗಳು ಬಹಳ ಉತ್ತಮವಾಗಿರುತ್ತದೆ. ಈ ವರ್ಷದ ಪ್ರಾರಂಭದಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು ಜನವರಿ ತಿಂಗಳಲ್ಲಿ ವರ್ಗಾವಣೆ ಪಡೆಯುವ ಸಾಧ್ಯತೆಗಳಿವೆ.ಈ ವರ್ಷ ವೃತ್ತಿ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ.

ನೀವು ವ್ಯಾಪಾರಿಗಳಾಗಿದ್ದರೆ ಏಪ್ರಿಲ್ ನಂತರ ವ್ಯಾಪಾರ ಬದಲಾಯಿಸುತ್ತಿರಿ ಅದರಲ್ಲೂ ಮೇ ತಿಂಗಳಲ್ಲಿ ದಿಡೀರ್ ಸಮಸ್ಯೆ ಎದುರಾಗುವ ಕಾರಣ ವ್ಯಾಪಾರ ವ್ಯವಹಾರ ಮಾಡುವಾಗ ಸ್ವಲ್ಪ ಹುಷಾರಾಗಿರಬೇಕು. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ನಡುವೆ ನಿಮ್ಮ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಕಂಡು ಬರುತ್ತದೆ, ನೀವು ಹೆಚ್ಚು ಯಶಸ್ಸನ್ನು ಪಡೆಯುತ್ತೀರಿ ವಿದೇಶಿ ಗ್ರಾಹಕರಿಂದ ವ್ಯಾಪಾರ ಪಡೆದು ಅಭಿವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ವರ್ಷ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ. ನೀವು ಮಾಡಿದಂತಹ ಕಠಿಣ ಪ್ರಯತ್ನ ವ್ಯರ್ಥವಾಗುವುದಿಲ್ಲ. ವರ್ಷದ ಆರಂಭದಲ್ಲಿ ಓದಿನಲ್ಲಿ ಸ್ವಲ್ಪ ಕಡಿಮೆ ಏಕಾಗ್ರತೆ ಇದ್ದರೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಜನವರಿ ನಂತರ ಕಂಡಿತ ನಿಮಗೆ ಯಶಸ್ಸು ಸಿಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸ್ವಲ್ಪ ಏರಿಳಿತ ಕಾಣಿಸಿಕೊಳ್ಳುತ್ತದೆ ಅಕ್ಟೋಬರ್ ನವಂಬರ್ ಹಾಗೂ ಡಿಸೆಂಬರ್ ಸಮಯದಲ್ಲಿ ನೀವು ಯಶಸ್ಸನ್ನು ಪಡೆದು ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ.

ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಗ್ರಹಗಳ ಸಂಯೋಜನೆಯು ವರ್ಷದ ಮೊದಲು ಆರು ತಿಂಗಳು ಕಾಲ ಅನುಕೂಲವಾಗಿರುತ್ತದೆ ವಿಶೇಷವಾಗಿ ಜನವರಿಯಿಂದ ಏಪ್ರಿಲ್ ಕೊನೆಯವರೆಗೂ ಪರಿಸ್ಥಿತಿ ಉತ್ತಮವಾಗಿರುತ್ತದೆ ಹಾಗಾಗಿ ಈ ಸಮಯದಲ್ಲಿ ನೀವು ಹಣಕಾಸಿನ ವಿಷಯದಲ್ಲಿ ಹೂಡಿಕೆ ಮತ್ತು ದೊಡ್ಡಮಟ್ಟದ ಹಣಕಾಸಿನ ವ್ಯವಹಾರಗಳನ್ನು ಮಾಡಬಹುದು. ನೀವು ಆಸ್ತಿಯ ಮೇಲೆ ಹೂಡಿಕೆ ಮಾಡಬೇಕೆಂದಿದ್ದರೆ ಈ ಸಮಯ ತುಂಬಾ ಒಳ್ಳೆಯದು ನವೆಂಬರ್ ತಿಂಗಳಲ್ಲಿ ಮಾಡುವುದರಿಂದ ಯಶಸ್ಸನ್ನು ಕಾಣವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕುಟುಂಬದಲ್ಲಿ ಏರಿಳಿತಗಳನ್ನು ಅನುಭವಿಸುವ ಸಾಧ್ಯತೆಗಳಿರುತ್ತದೆ ಗುರು ಮೀನ ರಾಶಿಯಲ್ಲಿ ಇರುವ ತನಕ ಸಂತೋಷ ಹಾಗೂ ಸಮರಸ್ಯ ಇರುತ್ತದೆ ನಂತರ ನಿಮ್ಮ ಕುಟುಂಬ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಹಿರಿಯರಿಗೆ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇದೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯ. ರಾಹುವಿನ ಪ್ರಭಾವದಿಂದ ಕುಟುಂಬದಲ್ಲಿ ಒತ್ತಡವನ್ನು ಹೆಚ್ಚಿಸುತ್ತಾನೆ ಮತ್ತು ಈ ಸಮಯವು ನಿಮ್ಮ ಒಡಹುಟ್ಟಿದವರ ಆರೋಗ್ಯಕ್ಕೂ ತೊಂದರೆ ಉಂಟು ಮಾಡಬಹುದು. ಕುಟುಂಬದವರ ಜೊತೆ ಬೆರೆಯುವುದರಿಂದ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯುತ್ತದೆ ಹಾಗೂ ವೈವಾಹಿಕ ಜೀವನಕ್ಕೆ ವರ್ಷದ ಪ್ರಾರಂಭವೂ ಒಳ್ಳೆಯ ಕಾಲ. ಅವಿವಾಹಿತರಿಗೆ ಗೃಹಸ್ತಾನ ಚೆನ್ನಾಗಿರುವ ಕಾರಣ ಮದುವೆಗೆ ಒಳ್ಳೆಯ ಸಂಬಂಧಗಳು ಕೂಡಿಬರುತ್ತದೆ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ಸಮಯದಲ್ಲಿ ಪ್ರೀತಿಸಿದವರನ್ನು ಮದುವೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಏಪ್ರಿಲ್ ತಿಂಗಳಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿವೆ ಹಾಗಾಗಿ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು ವರ್ಷದ ಕೊನೆಯ ತಿಂಗಳು ಅನುಕೂಲಕರವಾಗಿರುತ್ತದೆ.

ವಾಹನ ಖರೀದಿಸಬೇಕೆನ್ನುವರು ಫೆಬ್ರವರಿ ಮತ್ತು ಮಾರ್ಚ್ ನಡುವಿನ ಸಮಯದಲ್ಲಿ ಖರೀದಿಸುವುದು ಶುಭವಾಗುತ್ತದೆ. ಕನ್ಯಾ ರಾಶಿಯವರಿಗೆ ಈ ವರ್ಷ ಹಣಗಳಿಸುವ ವರ್ಷವಾಗಿದೆ ಪೂರ್ವಜರ ಆಸ್ತಿ ರೂಪದಲ್ಲಿ ಹಣ ಬರುವ ಸಾಧ್ಯತೆಗಳಿವೆ ಆದರೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡುವುದಕ್ಕೆ ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ. ಮೇ ತಿಂಗಳಲ್ಲಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತದೆ ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸಂಪೂರ್ಣ ಗುಣಮುಖವಾಗುತ್ತಿರಿ. ಇವರ ಅದೃಷ್ಟ ಸಂಖ್ಯೆ 5 ಮತ್ತು 6.

ಕನ್ಯಾ ರಾಶಿಯವರಿಗೆ ಪರಿಹಾರವೇನೆಂದರೆ, ಬುಧವಾರ ಉಪವಾಸವನ್ನು ಆಚರಿಸಿ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು, ಬುಧದೇವನ ಬೀಜ ಮಂತ್ರ ಪಠಿಸಬೇಕು, ಬುಧವಾರ ಸಂಜೆ ಕಪ್ಪು ಎಳ್ಳನ್ನ ದಾನ ಮಾಡಿದರೆ ಒಳ್ಳೆಯದು.ಕಷ್ಟದ ಸಮಯದಲ್ಲಿ ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದು ಪರಿಣಾಮಕಾರಿಯಾಗಿರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: