ಮಾರ್ಚ್ ತಿಂಗಳ ಮೇಷ ರಾಶಿಯ ಭವಿಷ್ಯವನ್ನ ತಿಳಿದುಕೊಳ್ಳೋಣ. ಇದು ಶುಭಕೃತ್ ಸಂವತ್ಸರದ ಕೊನೆಯದಾದ ಪಾಲ್ಗುಣ ಮಾಸ. ನಮಗೆ ಹೊಸ ವರ್ಷವೆಂದರೆ ಯುಗಾದಿ, ಯುಗಾದಿ ಹಬ್ಬದಂದು ಪ್ರಕೃತಿ ಸಂಪೂರ್ಣವಾಗಿ ಎಲೆ ಚಿಗುರಿ ಮೈದುಂಬಿ ಸಂತೋಷವನ್ನ ಕೊಡುತ್ತಾ ಇರುತ್ತೇವೆ ಅದನ್ನ ಚೈತ್ರ ಮಾಸ ಎನ್ನುತ್ತಾರೆ.
ಡಿಸೆಂಬರ್ ತಿಂಗಳಲ್ಲಿ ಎಲೆಗಳೆಲ್ಲ ಉದುರಿ ಹೋಗುತ್ತದೆ ಅದನ್ನು ಅಪಶಕುನದ ಸಮಯ ಎಂದು ಕೂಡ ಹೇಳುತ್ತಾರೆ. ಮಾರ್ಚ್ ತಿಂಗಳಲ್ಲಿ ಯುಗಾದಿ ಹಬ್ಬ ಬರುತ್ತದೆ ಅದು ನಿಮಗೆ ಯಶಸ್ಸನ್ನು ಕೊಡುತ್ತದೆ.
ಈ ಮಾಸ ಶುಭಫಲವಿದೆ, ಮನಸ್ಸಿಗೆ ಆನಂದವನ್ನ ಅನುಭವಿಸುತ್ತೀರಾ ಯಜ್ಞ ಕಾರ್ಯಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ ರೈತರಿಗೆ ಅತ್ಯಂತ ಸಂತೋಷ ಸಿಗುವಂತಹ ಕಾಲ ಸ್ವಲ್ಪ ಮಟ್ಟಿಗೆ ಸಾಲ ಭಾದೆ ನಿವಾರಣೆ ಆಗುತ್ತದೆ ನೂತನ ಕೆಲಸ ಆರಂಭಕ್ಕೆ ಮಾರ್ಚ್ ತಿಂಗಳು ಒಳ್ಳೆ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಮಾಸ ಚೆನ್ನಾಗಿರುತ್ತೆ ಮತ್ತು ಒಳ್ಳೆಯ ಧೈರ್ಯ ಶೌರ್ಯ ಅನುಕೂಲವಾಗುತ್ತದೆ. ಪರೀಕ್ಷೆ ಭಯ ನಿವಾರಣೆಯಾಗಿ ತುಂಬಾ ಚೆನ್ನಾಗಿ ಇರುತ್ತೀರ.
ವಿಶೇಷ ಫಲಗಳು ಯಾವುದೆಂದರೆ, ಆರೋಗ್ಯದಲ್ಲಿ ಸುಧಾರಣೆ ಆಗುತ್ತೀರಾ ಸ್ತ್ರೀ ಸೌಖ್ಯ ಪುರುಷರಿಗೆ, ಸ್ತ್ರೀಯರಿಗೆ ಪುರುಷ ಸೌಖ್ಯ. ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಲಾಭ ಆದರೆ ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಅಡಚಣೆ ಇರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜೀರ್ಣಕ್ರಿಯೆಯಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಮತ್ತು ಆಹಾರ ತಿನ್ನುವಂತಹ ವಿಚಾರದಲ್ಲಿ ಜಾಗೃತೆಯನ್ನು ವಹಿಸಬೇಕು.ಸ್ವಲ್ಪ ಮಟ್ಟಿಗೆ ಧ್ಯಾನ ಜೋಪ ಇವೆಲ್ಲವನ್ನು ಮಾಡುವುದರಿಂದ ಒಳ್ಳೆಯದು ಕೋಪ ಕಡಿಮೆ ಮಾಡಿಕೊಳ್ಳಬೇಕು.
ಕೋರ್ಟು ಕಚೇರಿ ವಿಚಾರದಲ್ಲಿ ನಿಮಗೆ ಜಯ ಉಂಟಾಗುತ್ತದೆ ವೃತ್ತಿಪರ ಜೀವನದಲ್ಲಿ ಸ್ಥಾನಪಲ್ಲಟ ಆಗುವ ನಿರೀಕ್ಷೆ ಕಾಣಿಸುತ್ತಿದೆ ಪ್ರಯಾಣ ಸ್ವಲ್ಪ ಜಾಸ್ತಿಯಾಗಿರುತ್ತದೆ ಅದಕ್ಕೆ ವಾಹನ ಚಾಲನೆ ಮಾಡುವಾಗ ಸ್ವಲ್ಪ ಹುಷಾರಾಗಿರಬೇಕು. ತಾಯಿಗೆ ನಮಸ್ಕಾರ ಮಾಡುವುದು ಅತ್ಯಂತ ಪುಣ್ಯವಾದಂತಹ ಕೆಲಸ. ಸೋಂಬೇರಿತನ ಜಾಸ್ತಿಯಾಗುವುದರಿಂದ ಕೆಲಸ ಕಾರ್ಯಗಳನ್ನು. ದೃಷ್ಟಿ ಆಗುವ ಸಾಧ್ಯತೆಗಳು ಜಾಸ್ತಿ ಇರುತ್ತವೆ.
ನಿಮ್ಮ ಬೆಲೆ ಬಾಳುವ ವಸ್ತುವ ಮೇಲೆ ಸ್ವಲ್ಪ ಜಾಗೃತಿ ಇರಲಿ, ಕಳ್ಳತವಾಗುವ ಸಾಧ್ಯತೆಗಳಿವೆ. ದಾನ ಧರ್ಮ ಮಾಡುವಂತದ್ದು ದೇವಸ್ಥಾನಕ್ಕೆ ಹೋಗುವಂತದ್ದು ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರಗೊಳ್ಳುತ್ತದೆ. ಹನುಮಂತ ದೇವರ ಧ್ಯಾನ ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರಗೊಳ್ಳುತ್ತದೆ. ಅದೃಷ್ಟ ಸಂಖ್ಯೆ 2,4.