2022 ಹೊಸ ವರ್ಷ ಯಾವ ರಾಶಿಯವರಿಗೆ ಅದೃಷ್ಟ ಮತ್ತು ಸಂಕಟ ನೋಡಿ

0

ಮೇಷ ರಾಶಿ ಭವಿಷ್ಯ : ಮಂಗಳ ಗ್ರಹವು ತಿಂಗಳ ದ್ವಿತೀಯಾರ್ಧ ಅಂದರೆ 16 ರಂದು ಧನು ರಾಶಿಗೆ ಪ್ರವೇಶಿಸುತ್ತದೆ. ಆರ್ಥಿಕ ದೃಷ್ಟಿಯಿಂದ ಮಂಗಳ ಗ್ರಹದ ಪರಿಣಾಮವು ನಿಮಗೆ ಅನುಕೂಲಕರ ಫಲಿತಾಂಶವನ್ನು ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಸಂಚಾರದ ಪರಿಣಾಮವೂವು ಮೇಷ ರಾಶಿ ಚಕ್ರದ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕತೂಯನ್ನು ತರುತ್ತದೆ.

ವೃಷಭ ರಾಶಿ ಭವಿಷ್ಯ : ಆರಂಭದ ತಿಂಗಳ ಮಧ್ಯೆ ಅಂದರೆ 16 ಜನವರಿ ರಂದು ಧನು ರಾಶಿಯಲ್ಲಿ ಮಂಗಳ ಸಂಚಾರವು ನಿಮಗೆ ಅದೃಷ್ಟದ ಬೆಂಬಲವನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವರ್ಷ ವೃತ್ತಿ ಜೀವನದ ಕ್ಷೇತ್ರದಲ್ಲೂ ನೀವು ಅನುಕೂಲಕರ ಫಲಿತಾಂಶವನ್ನು ಪಡೆಯುತ್ತಿರಿ. ಇದರೊಂದಿಗೆ ನಿಮ್ಮ ಪ್ರೊಫೆಷ್ನಲ್ ಜೀವನದಲ್ಲೂ ನೀವು ಪ್ರಗತಿಯನ್ನು ಸಾಧಿಸಲು ಸದ್ಯ ಆಗುತ್ತದೆ.

 ಮಿಥುನ ರಾಶಿ : ಮಿಥುನ ರಾಶಿ ಚಕ್ರದ ಜನರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳೊಂದಿಗೆ, ಅನೇಕ ಉತ್ತಮ ಅವಕಾಶಗಳನ್ನು ಕೂಡ ಪಡೆಯಲಿದ್ದಾರೆ ಎಂದು ಗ್ರಹಗಳ ಸ್ಥಾನವು ತೋರಿಸುತ್ತಿದೆ. ನೀವು ಕೆಲವು ಆರ್ಥಿಕ ನಷ್ಟದೊಂದಿಗೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಬೇಕಾಗಬಹುದು.

ಕರ್ಕ ರಾಶಿ : ಜನವರಿ 16 ರಂದು ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ  ಮತ್ತು ಅನೇಕ ಸಮಸ್ಯೆಗಳನ್ನು ತಕ್ಷಣವೇ ತೊಡೆದು ಹಾಕಲು ನಿಮಗೆ ಸಹಾಯ ಮಾಡುತ್ತದೆಜನವರಿ ಮೊದಲ ವಾರದಲ್ಲಿ ನೀವು ಎತ್ತರವನ್ನು ತಲುಪಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಎರಡನೇ ಮತ್ತು ಮೂರನೇ ವಾರದಲ್ಲಿ ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ತಾಂತ್ರಿಕ ಜ್ಞಾನದಲ್ಲಿ ನೀವು ಉತ್ತಮ ಸಾಧನೆ ಮಾಡುತ್ತಿರಿ. ನಿಮ್ಮ ಕೆಲಸವನ್ನು ಸಮರ್ಥವಾಗಿ ಮಾಡಲು ನಿಮಗೆ ಸಾಧ್ಯವಾಗುತ್ತದೆ. ನೀವು ಜ್ಞಾನವಂತರಾಗುತ್ತಿರಿ.

 ಸಿಂಹ ರಾಶಿ :  ಆರಂಭದ ಸಮಯ ಅಂದರೆ ಜನವರಿ ತಿಂಗಳಲ್ಲಿ ನಿಮ್ಮ ರಾಶಿ ಚಕ್ರದ ಐದನೇ ಮನೆಯಲ್ಲಿ ಗುರುವು ನೆಲೆಗೊಂಡಿರುವುದು, ನಿಮ್ಮ ಆರ್ಥಿಕ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುವ ಕೆಲಸ ಮಾಡುತ್ತದೆ. 26 ಜನವರಿ ರಂದು ಮಂಗಳ ದೇವ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶಿಸಿಸುತ್ತಾರೆ, ಜಾತಕದಲ್ಲಿ ಇದು ಅದೃಷ್ಟದ ಮನೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಿರಿ.

ಕನ್ಯಾ ರಾಶಿ : ಜನವರಿ ತಿಂಗಳಲ್ಲಿ ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು, ನಿಮಗೆ ಹಣ ಮತ್ತು ಆರ್ಥಿಕ ಸಮೃದ್ಧಿಯನ್ನು ನೀಡುವ ಕೆಲಸ ಮಾಡುತ್ತದೆ ಮತ್ತು ಇದರಿಂದಾಗಿ ನಿಮ್ಮ ಪ್ರತಿಯೊಂದು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ.ಕನ್ಯಾರಾಶಿಯವರು ಆಗಸ್ಟ್ ತಿಂಗಳಲ್ಲಿ ಉತ್ತಮ ಪ್ರೀತಿಯನ್ನು ಕೊಂಡುಕೊಳ್ಳಬಹುದು. ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಹಣ ಗಳಿಸಲು ಉತ್ತಮ ಸ್ಪೂರ್ತಿಯ ಮೂಲವಾಗಿರುತ್ತಾರೆ. ವರ್ಷದ ಅಂತ್ಯದ ವೇಳೆಗೆ ನಿಮ್ಮ ದೈಹಿಕ ಆರೋಗ್ಯದ ಮೇಲೆ ನೀವು ಕಾಳಜಿ ವಹಿಸಬೇಕಾಗುತ್ತದೆ.

ತುಲಾ ರಾಶಿ : ಹೊಸ ವರ್ಷದ ಆರಂಭದಲ್ಲಿ ದೈಹಿಕ, ಮಾನಸಿಕ, ಮತ್ತು ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನುಕೂಲಕರ ಫಲಿತಾಂಶವನ್ನು ಪಡೆಯುತ್ತಾರೆ ಆದರೆ ವ್ಯಾಪಾರ ಮತ್ತು ಕುಟುಂಬದ ಪರಿಸ್ಥಿತಿಗಳು ಸ್ವಲ್ಪ ಕಷ್ಟಕರವಾಗಿರಲಿದೆ. ಮಧ್ಯ ಜನವರಿಯಲ್ಲಿ ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು ಸಹ ಆರ್ಥಿಕ ಜೀವನದಲ್ಲಿ ನಿಮಗೆ ಶುಭ ಫಲವನ್ನು ನೀಡಲಿದೆ.

ವೃಶ್ಚಿಕ ರಾಶಿ : ಈ ಹೊಸ ವರ್ಷ ವೃಶ್ಚಿಕ ರಾಶಿವರಿಗೆ ಮಿಶ್ರ ಫಲಿತಾಂಶವನ್ನು ತರುತ್ತದೆ. ವರ್ಷದ ಆರಂಭದಿಂದ ಏಪ್ರಿಲ್ ವರೆಗೆ ನೀವು ಅನೇಕ ಅನಗತ್ಯ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ.
ಧನು ರಾಶಿ : ಜನವರಿ ತಿಂಗಳಲ್ಲಿ ನಿಮ್ಮದೇ ರಾಶಿಯಲ್ಲಿ ಮಂಗಳನ ಸಂಚಾರವು ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಬಲವಾದ ಸ್ತಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಮಕರ ರಾಶಿ : ಈ ವರ್ಷದ ಆರಂಭದಲ್ಲಿ ಶನಿ ಗ್ರಹವು ತನ್ನದೇ ರಾಶಿಯಲ್ಲಿ ಗೋಚರಿಸುವುದು, ನಿಮ್ಮ ವೃತ್ತಿ ಜೀವನ, ಆರ್ಥಿಕ ಕಟ್ಟು ಶಿಕ್ಷಣಕ್ಕೆ ಅನುಕೂಲಕರವಾಗಿರುತ್ತದೆ. ಎಪ್ರಿಲ್ ತಿಂಗಳಲ್ಲಿ ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ನೀವು ಎದುರಿಸಬೇಕಾಗುತ್ತದೆ.
ಕುಂಭ ರಾಶಿ : ಆರ್ಥಿಕ ದೃಷ್ಟಿಯಿಂದ ಈ ವರ್ಷವೂ ನೀವು ಅಪಾರ ಯಶಸ್ಸನ್ನು ಪಡೆಯುತ್ತಿರಿ, ಜನವರಿ ತಿಂಗಳಲ್ಲಿ ಮಂಗಳನ ಸಂಚಾರವು ನಿಮಗೆ ಹೆಚ್ಚು ಆರ್ಥಿಕ ಲಾಭವನ್ನು ನೀಡುವ ಕೆಲಸ ಮಾಡುತ್ತದೆ.
ಮೀನಾ ರಾಶಿ : ಈ ವರ್ಷ ಆರ್ಥಿಕವಾಗಿ ನೀವು ತುಂಬಾ ಸಮೃದ್ಧರಾಗಿರುತ್ತಿರಿ, ಏಪ್ರಿಲ್ ತಿಂಗಳಲ್ಲಿ ಹನ್ನೊಂದನೇ ಮನೆಯಿಂದ ಹನ್ನೆರಡನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿಯು, ನಿಮ್ಮ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸವಲ್ಲಿ ನಿಮಗೆ ಸಹಾಯ ಮಾಡುತ್ತದೆ.

Leave A Reply

Your email address will not be published.

error: Content is protected !!
Footer code: