2022 ರಲ್ಲಿ ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ ಹಾಗೂ ಯಶಸ್ಸು ಖಚಿತ

0

ಈಗಾಗಲೇ ಎರಡು ಸಾವಿರದ ಇಪ್ಪತ್ತೊಂದನೇ ವರ್ಷದ ಕೊನೆಯ ತಿಂಗಳು ನಡೆಯುತ್ತಿದೆ ಅಂದರೆ ಎರಡು ಸಾವಿರದ ಇಪ್ಪತ್ತೆರಡರ ಆಗಮನದಲ್ಲಿ ನಾವಿದ್ದೇವೆ. ಎರಡು ಸಾವಿರದ ಇಪ್ಪತ್ತೆರಡರಲ್ಲಿ ದ್ವಾದಶ ರಾಶಿಗಳ ಫಲ ಯಾವ ರೀತಿ ಆಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ನಾವಿಂದು ಎರಡು ಸಾವಿರದ ಇಪ್ಪತ್ತೆರಡರಲ್ಲಿ ಕಟಕ ರಾಶಿಗೆ ಯಾವ ರೀತಿಯಾದಂತಹ ಫಲ ಇದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಎರಡು ಸಾವಿರದ ಇಪ್ಪತ್ತೆರಡರಲ್ಲಿ ಕಟಕ ರಾಶಿಯವರಿಗೆ ವಿವಾಹದ ವಿಷಯದಲ್ಲಿ ಒಳ್ಳೆಯದಾಗಲಿದೆ ಒಳ್ಳೆಯ ವರನಿಗೆ ಒಳ್ಳೆಯ ವಧು ಒಳ್ಳೆಯ ವಧುವಿಗೆ ಒಳ್ಳೆಯ ವರ ದೊರಕಲಿದ್ದಾರೆ. ನೀವು ಅನೇಕ ದಿನಗಳಿಂದ ಮದುವೆಯ ವಿಚಾರಕ್ಕಾಗಿ ವಧು ಅಥವಾ ವರ ಹೀಗೆ ಇರಬೇಕು ಎಂಬ ರೀತಿಯಲ್ಲಿ ಮನಸ್ಸಿನ ಭಾವನೆಗಳು ಆಸೆ ಆಕಾಂಕ್ಷೆಗಳು ಇರುತ್ತವೆ ಆ ರೀತಿಯಲ್ಲಿ ನೀವು ಅಂದುಕೊಂಡ ಹಾಗೆ ನಿಮ್ಮ ಇಚ್ಛೆಯಂತೆ ನಿಮ್ಮ ವಿವಾಹದ ವಿಚಾರ ನಡೆಯುತ್ತದೆ. ಇದು ನಿಮಗೆ ಅತ್ಯಂತ ಖುಷಿ ತರುವಂತಹ ಸಮಾಧಾನ ತರುವಂತಹ ದಿನಗಳು ಎಂದು ಹೇಳಬಹುದು. ಗೃಹಿಣಿಯರಿಗೆ ಅಥವಾ ಹೆಣ್ಣುಮಕ್ಕಳಿಗೆ ಯಾವುದೋ ಒಂದು ಸಣ್ಣ ವ್ಯವಹಾರದಲ್ಲಿ ಮನೆಯಲ್ಲಿಯೇ ಚಿಕ್ಕದಾಗಿ ಮಾಡುವಂತಹ ವ್ಯವಹಾರಕ್ಕೆ ಸಂಘ ಸಂಸ್ಥೆಗಳಿಂದ ಪ್ರೋತ್ಸಾಹ ದೊರೆಯುತ್ತದೆ.

ಆ ಕೆಲಸಕ್ಕೆ ಸ್ಪೂರ್ತಿ ಸಿಗುತ್ತದೆ. ಅಲ್ಲಿಂದ ನೀವು ಹಣವನ್ನು ತಂದು ನಿಮ್ಮದೇ ಆದಂತಹ ಸ್ವಸಹಾಯ ಪದ್ಧತಿಯನ್ನು ಮಾಡಿ ಮನೆಯಲ್ಲಿಯೇ ತಯಾರಿಸುವಂತಹ ಪದಾರ್ಥಗಳನ್ನು ಸಿದ್ಧತೆ ಮಾಡಿಕೊಂಡು ಅದನ್ನ ಹೊರಗಡೆ ಮಾರುವಂತದ್ದು ಇದರ ಜೊತೆಗೆ ಹೆಚ್ಚು ಹೆಚ್ಚು ಧನಲಾಭವನ್ನೂ ಸಂಗ್ರಹಿಸುವಂತದ್ದು. ಪ್ರಾರಂಭದಲ್ಲಿ ನಿಮ್ಮೊಬ್ಬರಿಂದಲೇ ಪ್ರಾರಂಭವಾದಂತಹ ಕೆಲಸ ಮೂರು ನಾಲ್ಕು ತಿಂಗಳ ನಂತರ ಬೇರೆಯವರು ನಿಮ್ಮೊಟ್ಟಿಗೆ ಕೈಜೋಡಿಸುತ್ತಾರೆ. ಇದೇ ರೀತಿ ಬೇರೆ ಬೇರೆ ಉದ್ಯೋಗದಲ್ಲಿ ಬತ್ತದ ವ್ಯಾಪಾರ ಆಹಾರ ಧಾನ್ಯಗಳ ವ್ಯಾಪಾರಿಗಳು ಅಥವಾ ಟ್ರಾನ್ಸ್ಪೋರ್ಟ್ ಗಳು ರಪ್ತು ಮಾಡುವವರು ಸಣ್ಣ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ವ್ಯವಹಾರ ಕೈ ಹಿಡಿಯುತ್ತದೆ.

ಈಗಾಗಲೇ ವ್ಯವಹಾರದಲ್ಲಿ ಕೈಸುಟ್ಟುಕೊಂಡ ಕರ್ಕಾಟಕ ರಾಶಿಯವರು ಮುಂದೊಂದು ದಿನ ಯಶಸ್ವಿ ಉದ್ಯಮಶೀಲರಾಗಿರುತ್ತಾರೆ ಅಂತಹ ಯೋಗವು ಕೂಡ ಅವರಿಗೆ ಲಭಿಸುತ್ತದೆ. ವಿದ್ಯಾಭ್ಯಾಸದಲ್ಲಿ ಇರುವಂತಹ ಮಕ್ಕಳಿಗೆ ಸಣ್ಣ ವ್ಯಾಸಂಗ ದಿಂದ ಉನ್ನತ ವ್ಯಾಸಂಗದವರೆಗಿನ ವಿದ್ಯಾರ್ಥಿಗಳಿಗೆ ಮುನ್ನಡೆ ಮತ್ತು ಜಯ ಲಭಿಸುತ್ತದೆ. ದೇವಾಲಯಗಳಲ್ಲಿ ಸಹಾಯಕ ಅರ್ಚಕರಾಗಿ ಇರುವವರಿಗೆ ಅಥವಾ ಪುರೋಹಿತರ ಜೊತೆಗೆ ಸಹಾಯಕ ಪುರೋಹಿತರಾಗಿ ಇರುವಂತವರಿಗೆ ಕಂಕಣಭಾಗ್ಯ ವಿವಾಹ ಯೋಗ ಒದಗಿಬರುತ್ತದೆ. ಅವರಿಗೂ ಕೂಡ ಗ್ರಹಗಳ ಶಕ್ತಿ ಗ್ರಹಗಳ ಅನುಗ್ರಹ ದೊರಕುತ್ತದೆ. ಹಾಗೆಯೇ ಕೃಷಿಕರಲ್ಲಿ ಜಮೀನು ತೋಟ ಗದ್ದೆ ಈ ತರದರಲ್ಲಿ ಕೆಲಸವನ್ನು ಮಾಡಿಕೊಂಡು ಹೋಗುತ್ತಿರುವವರಿಗು ಕೂಡ ಕನ್ಯಾ ಭಾಗ್ಯವಿದೆ.

ಹೂವನ್ನು ಬೆಳೆಯುವವರಿಗೆ ಮೀನುಗಳ ವ್ಯಾಪಾರಿಗಳಿಗೆ ತುಂಬಾ ಲಾಭ ಉಂಟಾಗಲಿದೆ. ತನ್ನ ಸ್ಥಳವನ್ನು ಬಿಟ್ಟು ಪರಸ್ಥಳಕ್ಕೆ ಹೋಗಿ ಸಣ್ಣದಾಗಿ ಟೀ ಅಂಗಡಿ ಹಾಕಿಕೊಂಡು ವ್ಯವಹಾರ ಮಾಡುತ್ತಿರುವವರು ಕೂಡ ಮುಂದೊಂದು ದಿನ ದೊಡ್ಡ ಉದ್ದಿಮೆದಾರರ ರಾಗಿ ವ್ಯವಹಾರವನ್ನು ಮಾಡುತ್ತಾರೆ ಕಟಕರಾಶಿಯವರು ಚಿಕ್ಕದಾಗಿ ಪ್ರಾರಂಭಿಸುವ ವ್ಯವಹಾರ ಮುಂದೆ ಅದೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ. ನಿಮ್ಮ ಪ್ರಯತ್ನ ನಿಮ್ಮ ಛಲ ನಿಮ್ಮ ಗುರಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ.

ಸಣ್ಣಪುಟ್ಟ ಏರುಪೇರುಗಳು ಆಗುತ್ತಿರುತ್ತವೆ ಅವುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬಾರದು ನೀವು ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಇಟ್ಟಿರುವಂತಹ ಹೆಜ್ಜೆ ನಿಮಗೆ ಒಳ್ಳೆಯದನ್ನು ಉಂಟುಮಾಡುತ್ತದೆ. ಕರ್ಕಾಟಕ ರಾಶಿಯವರಿಗೆ ಎಲ್ಲಾ ರಂಗದಲ್ಲಿಯೂ ಲಾಭವಾಗಲಿದೆ ಸಿನಿಮಾ ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಒಳ್ಳೆಯದಾಗುತ್ತದೆ. ವಿಶೇಷವಾಗಿ ದೈವಾನುಕುಲ ಸಿದ್ಧಿಯಾಗುತ್ತದೆ. ಕರ್ಕಾಟಕ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನಾಲ್ಕೈದು ತಿಂಗಳ ನಂತರ ಗುರುಬಲ ಕೂಡ ಪ್ರಾಪ್ತಿಯಾಗುತ್ತದೆ. ಒಟ್ಟಿನಲ್ಲಿ ಎರಡು ಸಾವಿರದ ಇಪ್ಪತ್ತೆರಡು ಕರ್ಕಾಟಕ ರಾಶಿಯವರಿಗೆ ಅತ್ಯಮೂಲ್ಯವಾದ ಸಮಯವಾಗಿದೆ.

Leave A Reply

Your email address will not be published.

error: Content is protected !!
Footer code: