12 ರಾಶಿಗಳ ರಾಶಿಭವಿಷ್ಯ 20 ರಿಂದ 26 ರವರೆಗೆ ಹೇಗಿರಲಿದೆ ತಿಳಿದುಕೊಳ್ಳಿ

0

ಮೊದಲನೆಯದಾಗಿ ಮೇಷ ರಾಶಿಯವರು ಈ ವಾರದಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ ಆರಂಭದಲ್ಲಿಯೇ ಕೆಲವು ಒತ್ತಡಗಳನ್ನು ಅನುಭವಿಸಬೇಕಾಗುತ್ತದೆ ಆರ್ಥಿಕ ಲಾಭ ಪಡೆಯುವಲ್ಲಿ ಯಶಸ್ಸು ಕಾಣಬಹುದು ಮತ್ತು ನಿಮ್ಮ ಕೆಲಸವನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡುವುದರಿಂದ ಬಡ್ತಿ ಪಡೆಯಬಹುದು. ಈ ವಾರ ವಿದೇಶಕ್ಕೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸೂಚನೆ ಇದೆ ವೈವಾಹಿತರು ವೈವಾಹಿಕ ಜೀವನವನ್ನು ಆನಂದಿಸುವ ಹೊರತಾಗಿ ಇತರ ಕಾರ್ಯಗಳಿಗೆ ಹೆಚ್ಚಿನ ಗಮನ ಕೊಡುವುದು ಉತ್ತಮ. ಆತುರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಇದರಿಂದ ಹಣಕಾಸಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ವಾರದ ನಿಮ್ಮ ಅದೃಷ್ಟದ ಬಣ್ಣ ನೀಲಿ, ಸಂಖ್ಯೆ 3, ವಾರ ಸೋಮವಾರ.

ವೃಷಭ ರಾಶಿ – ಈ ರಾಶಿಯವರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ ಹಣಕಾಸಿನ ಅಪಾಯವು ಸ್ವಲ್ಪಮಟ್ಟಿಗೆ ಕಂಡುಬರುತ್ತದೆ ಯಾವುದೇ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶವನ್ನು ಪಡೆಯದೆ ಇರುವ ಸಾಧ್ಯತೆ ಇದೆ ಆದ್ದರಿಂದ ಲಾಭಗಳಿಕೆ ಕಡಿಮೆ ಕುಟುಂಬದ ಇತರ ಸದಸ್ಯರೊಂದಿಗೆ ನಿಮ್ಮ ಸಂಬಂಧ ವೃದ್ಧಿಯಾಗುವುದು ಮತ್ತು ವ್ಯಾಪಾರಿಗಳಿಗೆ ಈ ಸಮಯ ತುಂಬಾ ಉತ್ತಮವಾಗಿದೆ .ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದ್ದು ಹಣದ ವೆಚ್ಚವು ಹೆಚ್ಚಾಗಲಿದೆ ವೃಷಭ ರಾಶಿಯವರ ಈ ವಾರದ ಅದೃಷ್ಟದ ಬಣ್ಣ ಹಳದಿ, ಸಂಖ್ಯೆ 9, ದಿನ ಗುರುವಾರ .

ಮಿಥುನ ರಾಶಿ- ಈ ವಾರ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡುವಂತಿಲ್ಲ ಇದನ್ನು ಹೊರತುಪಡಿಸಿ ಈ ವಾರ ಏಕಾಏಕಿ ಲಾಭವನ್ನು ಪಡೆಯುತ್ತೀರಿ ಆದರೆ ಇದರಿಂದ ಮೈ ಮರೆಯುವುದು ಸೂಕ್ತವಲ್ಲ ನಿಮ್ಮ ವಾಹನಗಳು ಹಾನಿಗೆ ಒಳಗಾಗುವ ಸಾಧ್ಯತೆ ಇದೆ ಹೊಸ ಕೆಲಸವನ್ನು ಆರಂಭಿಸಲು ಈ ವಾರವು ಉತ್ತಮವಾಗಿದೆ. ನೀವು ಮತ್ತು ನಿಮ್ಮ ಪ್ರೀತಿ ಪಾತ್ರರ ನಡುವಿನ ವಿವಾದ ಬಗೆಹರಿಯಲಿದೆ ಮತ್ತು ಉದ್ಯೋಗಿಗಳಿಗೆ ಮಿಶ್ರ ಫಲಿತಾಂಶ ಸಿಗಲಿದೆ ನೀವು ಸೇವಿಸುವ ಆಹಾರದಿಂದ ಕೆಲವೊಂದು ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ಸಂಭವಿಸಬಹುದು .ಮಿಥುನ ರಾಶಿಯವರ ಅದೃಷ್ಟದ ಬಣ್ಣ ಕೆಂಪು, ಸಂಖ್ಯೆ 7, ವಾರ ಮಂಗಳವಾರ.

ಕರ್ಕಾಟಕ ರಾಶಿ- ಈ ವಾರ ಕರ್ಕಾಟಕ ರಾಶಿಯವರು ಉತ್ತಮ ಆರೋಗ್ಯ ಹೊಂದಲಿದ್ದಾರೆ ಹಣಕಾಸಿನ ಲಾಭಗಳು ಕಂಡುಬರುವ ಸಾಧ್ಯತೆ ಇದ್ದರೂ ಈ ವಿಷಯದ ಬಗ್ಗೆ ಕಾಳಜಿ ವಹಿಸಬೇಕು ಇನ್ನು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮ್ಮ ನಿರೀಕ್ಷೆಗಳಿಗೆ ಸರಿಯಾಗಿ ಸಾಧನೆಯನ್ನು ಮಾಡುವ ಸಾಧ್ಯತೆ ಇದೆ ನಿಮ್ಮ ಆತ್ಮವಿಶ್ವಾಸವು ಹೆಚ್ಚಿ ಕೆಲಸದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ತಪ್ಪು ತಿಳುವಳಿಕೆಯ ಸಾಧ್ಯತೆ ಕಂಡು ಬರುತ್ತದೆ ಹಣದ ವಿಚಾರದಲ್ಲಿ ಒಳ್ಳೆಯ ಫಲವನ್ನು ಕಾಣಲಿದ್ದೀರಿ. ಕರ್ಕಾಟಕ ರಾಶಿಯ ಅದೃಷ್ಟದ ಬಣ್ಣ ಹಸಿರು, ಸಂಖ್ಯೆ 2, ವಾರ ಬುಧವಾರ.

ಸಿಂಹ ರಾಶಿ- ಸಿಂಹ ರಾಶಿಯವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬಂಧುಗಳೊಂದಿಗೆ ಸಮಯವನ್ನು ಕಳೆಯಬೇಕು ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ನಿಮ್ಮ ವೆಚ್ಚವನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿದೆ ಉದ್ಯಮಿಗಳಿಗೆ ತಮ್ಮ ಸೃಜನಶೀಲತೆಯಲ್ಲಿ ಹೆಚ್ಚಳ ಕಾಣುವುದು ಪ್ರೀತಿಯ ವಿಚಾರದಲ್ಲಿ ಈ ಸಮಯ ಉತ್ತಮವಾಗಿದೆ ವಿದೇಶಿ ಮೂಲದ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆಯ ಬಯಸುವವರು ಇನ್ನು ಕಾಯಬೇಕಾಗುತ್ತದೆ ಆರೋಗ್ಯದ ವಿಚಾರದಲ್ಲಿ ವಾರದ ಕೊನೆಯಲ್ಲಿ ಕೆಲವು ಕಾಯಿಲೆಗಳು ಸುತ್ತುವರಿಯಬಹುದು. ಸಿಂಹ ರಾಶಿಯವರ ಅದೃಷ್ಟದ ಬಣ್ಣ ಕಂದು, ಸಂಖ್ಯೆ 4, ವಾರ ಭಾನುವಾರ.

ಕನ್ಯಾ ರಾಶಿ- ಈ ವಾರ ಕನ್ಯಾ ರಾಶಿಯವರಿಗೆ ಕೆಲವು ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಕಷ್ಟಪಡಬೇಕಾಗುತ್ತದೆ ಬಿಡುವಿನ ಅವಧಿಯನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಇದರಿಂದ ತೊಂದರೆಗೆ ಒಳಗಾಗಬಹುದು. ಕನ್ಯಾ ರಾಶಿಯವರು ಸೋಮಾರಿತನ ಮಾಡದೆ ಎಲ್ಲಾ ಕಾರ್ಯಗಳನ್ನು ಶೀಘ್ರಗೊಳಿಸುವುದು ಉತ್ತಮ ಪ್ರೀತಿಯ ವಿಚಾರವಾಗಿ ಉತ್ತಮ ಫಲವನ್ನು ಕಾಣುವಿರಿ ಸಹೋದ್ಯೋಗಿಗಳಿಂದ ಬೆಂಬಲ ಕಾಣುವಿರಿ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಕನ್ಯಾ ರಾಶಿಯ ಅದೃಷ್ಟದ ಬಣ್ಣ ಕಿತ್ತಳೆ, ಸಂಖ್ಯೆ 2,ವಾರ ಶುಕ್ರವಾರ.

ತುಲಾ ರಾಶಿ -ಈ ವಾರ ತುಲಾ ರಾಶಿಯವರ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಉಂಟಾಗುತ್ತದೆ ಹೂಡಿಕೆಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತಮ ಸಮಯ ಹಿರಿಯರಿಂದ ಕೆಲವು ನಿರೀಕ್ಷೆಗಳು ನಿಮ್ಮನ್ನು ಒತ್ತಡಕ್ಕೆ ತಳ್ಳುವುದು ಯಾವುದೇ ದಾಖಲೆಗಳ ಬಗ್ಗೆ ನಿರ್ಲಕ್ಷ ವಹಿಸಬಾರದು ನಿಮ್ಮ ಸಂಗಾತಿಯು ಜೀವನದ ಎಲ್ಲಾ ಹಂತದಲ್ಲಿಯೂ ನಿಮ್ಮ ಜೊತೆ ಇರುತ್ತಾರೆ ಮತ್ತು ಹಣದ ವಿಚಾರದಲ್ಲಿ ಹೆಚ್ಚು ಜಾಗರೂಕರ ಆಗಿರಬೇಕು. ತುಲಾ ರಾಶಿಯವರ ಅದೃಷ್ಟದ ಬಣ್ಣ ಬಳಿ, ಸಂಖ್ಯೆ 3, ವಾರ ಮಂಗಳವಾರ.

ವೃಶ್ಚಿಕ ರಾಶಿ- ನಿಮ್ಮ ಜೀವನದ ದೊಡ್ಡ ನಿರ್ಧಾರಗಳ ಬಗ್ಗೆ ಗೊಂದಲದಲ್ಲಿ ಮುಳುಗುತ್ತೀರಿ ಕುಟುಂಬದ ಸದಸ್ಯರಿಂದ ಅಸಮಾಧಾನ ಅನುಭವಿಸುತ್ತೀರಿ ಈ ವಾರದಲ್ಲಿ ನೀವು ಓದಿನಲ್ಲಿ ಹೆಚ್ಚಿನ ಗಮನವಹಿಸುವುದರಿಂದ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು ಪ್ರೀತಿಯ ವಿಚಾರದಲ್ಲಿ ಮನಸ್ತಾಪದಿಂದಾಗಿ ಏಕಾಂಗಿಯಾಗಿ ಸಮಯ ಕಳೆಯಲು ಇಚ್ಚಿಸುತ್ತೇವೆ ವೈವಾಹಿಕ ಜೀವನ ಸವಾಲಾಗಿ ಕಂಡು ಬರಲಿದೆ ಉದ್ಯೋಗ ವ್ಯವಹಾರದಲ್ಲಿ ಸಂಪೂರ್ಣ ಯಶಸ್ಸನ್ನು ಕಾಣುತ್ತೀರಿ ಹಣದ ವಿಷಯ ಮಿಶ್ರ ಫಲಿತಾಂಶ ನೀಡಲಿದೆ. ವೃಶ್ಚಿಕ ರಾಶಿಯವರ ಈ ವಾರದ ಅದೃಷ್ಟದ ಬಣ್ಣ ನೀಲಿ, ಸಂಖ್ಯೆ 5, ವಾರ ಬುಧವಾರ.

ಧನು ರಾಶಿ – ಧನು ರಾಶಿಯವರು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು ಹೂಡಿಕೆಯಿಂದ ನಷ್ಟ ಅನುಭವಿಸುವ ಸಾಧ್ಯತೆ ಕಂಡು ಬರುತ್ತದೆ ಕುಟುಂಬದವರೊಂದಿಗೆ ತಿರುಗಾಟ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಯೋಚಿಸಿ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಸಾಧ್ಯತೆ ಇದೆ ಪ್ರೀತಿಯಲ್ಲಿ ಈ ವಾರ ಉತ್ತಮವಾಗಿದೆ ಆದಾಯವು ಹೆಚ್ಚುವ ಸಾಧ್ಯತೆ ಇದೆ ಹಣದ ಸ್ಥಿತಿ ತೃಪ್ತಿದಾಯಕವಾಗಿರಬಹುದು. ಧನು ರಾಶಿಯವರ ಈ ವಾರದ ಅದೃಷ್ಟದ ಬಣ್ಣ ಗುಲಾಬಿ, ಸಂಖ್ಯೆ 5, ವಾರ ಶನಿವಾರ.

ಮಕರ ರಾಶಿ – ಮಕರ ರಾಶಿಯವರು ಆರೋಗ್ಯದಲ್ಲಿ ಸುಧಾರಣೆ ಹೊಂದಲಿದ್ದಾರೆ ಪ್ರಯಾಣದ ಯೋಜನೆಯನ್ನು ತಿರಸ್ಕರಿಸುವುದು ಉತ್ತಮ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ರಾಜಕೀಯ ವಿಚಾರಗಳಿಂದ ದೂರವಿರಿ ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಸುವ ಸಾಧ್ಯತೆ ಇದೆ ನಿಮ್ಮಿಂದ ನಿಮ್ಮ ಪ್ರೇಮಿಗೆ ಅಸಮಾಧಾನ ಉಂಟಾಗಬಹುದು ನಿಮ್ಮ ಕಹಿ ಮಾತುಗಳು ಪ್ರೀತಿ ಪಾತ್ರರಿಗೆ ನೋವುಂಟು ಮಾಡಬಹುದು. ಮಕರ ರಾಶಿಯವರ ಅದೃಷ್ಟದ ಬಣ್ಣ ನೇರಳೆ, ಸಂಖ್ಯೆ 8, ವಾರ ಗುರುವಾರ.

ಕುಂಭ ರಾಶಿ- ಕುಂಭ ರಾಶಿಯವರಿಗೆ ಹೆಚ್ಚು ಸಂತೋಷವನ್ನು ಉಂಟುಮಾಡುವ ಕೆಲಸವನ್ನು ಮಾಡುವುದು ಉತ್ತಮ ಆರೋಗ್ಯಕ್ಕಾಗಿ ಹಣದ ವೆಚ್ಚವಾಗುವುದು ಇದರಿಂದ ಕುಟುಂಬದ ಸದಸ್ಯರೊಂದಿಗೆ ಸಂಬಂಧ ಚೆನ್ನಾಗಿರುತ್ತದೆ ಸಂಬಂಧಿಕರೊಂದಿಗೆ ಸಣ್ಣ ಸಂಘರ್ಷ ಉಂಟಾಗಬಹುದು ವ್ಯವಹಾರದಲ್ಲಿ ಬದಲಾವಣೆ ಉತ್ತಮ ಫಲಿತಾಂಶವನ್ನು ತರುತ್ತದೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಕುಂಭ ರಾಶಿಯ ಅದೃಷ್ಟದ ಬಣ್ಣ ಹಳದಿ, ಸಂಖ್ಯೆ 1, ವಾರ ಶನಿವಾರ.

ಮೀನ ರಾಶಿ- ಮೀನ ರಾಶಿಯವರು ಈ ವಾರ ಕಾಯಿಲೆಗಳಿಂದ ಸ್ವಲ್ಪ ಪರಿಹಾರ ಕಂಡುಕೊಳ್ಳುತ್ತಾರೆ ಪೋಷಕರ ಬೆಂಬಲವನ್ನು ಪಡೆಯುತ್ತಾರೆ ಪ್ರತಿಯೊಂದು ಗುರಿ ಸಾಧಿಸಲು ಸಾಧ್ಯವಾಗುತ್ತದೆ ಈ ವಾರ ಇವರು ತಮ್ಮ ಸುತ್ತಮುತ್ತಲಿನ ಚಟುವಟಿಕೆಯ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ತಮ್ಮ ಪ್ರೇಮಿಯೊಂದಿಗಿನ ಮುಕ್ತ ಸಂವಹನದ ಕಾರಣದಿಂದ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಹಣಕಾಸಿನ ವಿಚಾರ ಈ ವಾರ ಮೀನ ರಾಶಿಯವರಿಗೆ ಉತ್ತಮವಾಗಿದೆ ವೃತ್ತಿ ಜೀವನವು ಹೊಸ ರೀತಿಯಲ್ಲಿ ಸಾಗುತ್ತದೆ. ಮೀನ ರಾಶಿಯವರ ಈ ವಾರದ ಅದೃಷ್ಟದ ಬಣ್ಣ ಕೆಂಪು, ಸಂಖ್ಯೆ 2, ವಾರ ಭಾನುವಾರ.

Leave A Reply

Your email address will not be published.

error: Content is protected !!