ಉಪ್ಪಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಹೌದು ಉಪ್ಪಿನಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಊಟದ ಗಮ್ಮತ್ತೇ ಬೇರೆ ಉಪ್ಪಿನಕಾಯಿ ಎನ್ನುವ ಹೆಸರನ್ನು ಕೇಳಿದ ಕೂಡಲೇ ಬಹುತೇಕ ಜನರ ಬಾಯಿಯಲ್ಲಿ ನೀರೂರುವುದು ಖಂಡಿತ ನಾವಿಂದು ಇಲ್ಲಿ ಹೇಳ ಹೊರಟಿರುವುದು ಬಾಯಿ ನೀರೂರುವ ರೀತಿಯಾದಂತಹ ಸಿಹಿ ಮಿಶ್ರಿತ ವಾದಂತಹ ಉಪ್ಪಿನಕಾಯಿಯನ್ನು ಮಾಡುವುದು ಹೇಗೆ ಎನ್ನುವ ಬಗೆಯನ್ನು
ಮೊದಲಿಗೆ ತಮಗೆ ಸಾಕಷ್ಟು ನಿಂಬೆಹಣ್ಣುಗಳನ್ನು ತೆಗೆದುಕೊಂಡು ಉದಾಹರಣೆಗೆ ಏಳು ನಿಂಬೆಹಣ್ಣುಗಳನ್ನು ತೆಗೆದುಕೊಂಡು ನಿಂಬೆಹಣ್ಣುಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ನಂತರ ಅದನ್ನು ಕಾಟನ್ ಬಟ್ಟೆಯಿಂದ ಒರೆಸಿ ಪ್ರತಿ ನಿಂಬೆಹಣ್ಣುಗಳನ್ನು ಆರರಿಂದ ಎಂಟು ಹೋಳು ಗಳನ್ನಾಗಿ ಮಾಡಿಕೊಳ್ಳಬೇಕು.ನಂತರ ಆ ಹೋಳುಗಳನ್ನು ಅದರಲ್ಲಿರುವ ಬೀಜಗಳನ್ನು ತೆಗೆದು ಒಂದು ಬಟ್ಟಲಿನ ಒಳಗೆ ಹಾಕಿಕೊಳ್ಳಬೇಕು
ನಂತರದಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮತ್ತು ಎಷ್ಟು ಖಾರ ತಮಗೆ ಸೀಮಿತವೊ ಅಷ್ಟು ಖಾರದ ಪುಡಿಯನ್ನು ಹಾಕಿಕೊಳ್ಳಬೇಕು, ತದನಂತರ ಅದರೊಟ್ಟಿಗೆ ಚೆನ್ನಾಗಿ ಜಜ್ಜಿದ ಎರಡರಿಂದ ಮೂರು ಉಂಡೆ ಬೆಲ್ಲವನ್ನು ಅದರೊಳಗೆ ಹಾಕಿ ಮಿಶ್ರಣ ಮಾಡಬೇಕು. ಆನಂತರದಲ್ಲಿ ಒಂದು ಕುಕ್ಕರ್ನಲ್ಲಿ ಸ್ವಲ್ಪವೇ ನೀರನ್ನು ತೆಗೆದುಕೊಂಡು ಅದರೊಳಗೆ ಮಿಶ್ರಣ ಮಾಡಿದಂತಹ ಬಟ್ಟಲಿನ ಸಮೇತ ಅದನ್ನು ಬಿಡಬೇಕುಹೀಗೆ ಇಟ್ಟು ಕುಕ್ಕರಿನ ಮುಚ್ಚಳವನ್ನು ಮುಚ್ಚಿ ಅದನ್ನು ಹತ್ತರಿಂದ ಹನ್ನೆರಡು ವಿಷಲ್ ಆಗುವ ತನಕ ಕಾಯಬೇಕು
ಬಳಿಕ ಅದನ್ನು ಹೊರಗೆ ತೆಗೆದಾಗ ಹಾಕಿದಂತಹ ಉಪ್ಪು ಖಾರ ಮತ್ತು ಬೆಲ್ಲ ನಿಂಬೆಹಣ್ಣು ಗಳೊಂದಿಗೆ ಮಿಶ್ರಣವಾಗಿ ಬೆಂದು ನೀರಿನ ರೀತಿಯಲ್ಲಿ ಆಗಿರುತ್ತದೆಬಳಿಕ ಆ ನಿಂಬೆಹಣ್ಣುಗಳನ್ನು ನೀರಿನಿಂದ ಬೇರ್ಪಡಿಸಿ ಕೊಳ್ಳಬೇಕು ಹೀಗೆ ಬೇರ್ಪಡಿಸಿದ ನಿಂಬೆಹಣ್ಣುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಮತ್ತೊಂದು ಬಾಣಲೆಯಲ್ಲಿ ಮಿಶ್ರಣದ ನೀರನ್ನು ಚೆನ್ನಾಗಿ ಕುದಿಸಬೇಕು, ಈ ಮಿಶ್ರಣ ಚೆನ್ನಾಗಿ ಕುದ್ದು ಮಿಶ್ರಣದ ಅರ್ಧದಷ್ಟು ಆದಾಗ ಮಿಶ್ರಣಕ್ಕೆ ನಿಂಬೆ ಹಣ್ಣಿನ ಚೂರುಗಳನ್ನು ಹಾಕಿ ಮಿಶ್ರಣ ಮಾಡಬೇಕು ಹೀಗೆ ಮಾಡಿದಂತಹ ಉಪ್ಪಿನಕಾಯಿಗಳನ್ನು ನಾವು ಒಂದರಿಂದ ಎರಡು ಅಥವಾ ಮೂರು ತಿಂಗಳುಗಳ ವರೆಗೆ ಶೇಖರಿಸಿಡಬಹುದು