ಜಿಯೋ ಕಡೆಯಿಂದ ಹೊಸದಾಗಿ ಒಂದು ಯೋಜನೆ ಬಂದಿದೆ. ಹೊಸದಾಗಿ ಬಂದಿರುವ ಆ ಯೋಜನೆ ಯಾವುದು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಜಿಯೋ ಕಡೆಯಿಂದ ಬಂದಿರುವ ಹೊಸ ಯೋಜನೆ ಯಾವುದು ಎಂದರೆ ನೀವು ಒಂದು ರೂಪಾಯಿ ರೀಚಾರ್ಜ್ ಮಾಡಿದರೆ ಒಂದು ತಿಂಗಳು ವ್ಯಾಲಿಡಿಟಿ ಇರುತ್ತದೆ. ಹಾಗಾದರೆ ಆ ಯೋಜನೆ ಯಾವುದು ಅದರ ಮಾಹಿತಿ ಏನು ಎಂದು ನೋಡುವುದಾದರೆ ಸದ್ಯ ಹಿಂದೆ ಇರುವಂತಹ ಎಲ್ಲ ರೀಚಾರ್ಜ್ ಪ್ಲಾನ್ ಗಳ ಮೇಲೆ ಜಿಯೋ ಇಪ್ಪತ್ತರಿಂದ ಮೂವತ್ತು ರೂಪಾಯಿ ಹೆಚ್ಚು ಮಾಡಿದೆ.
ಎಲ್ಲಾ ರಿಚಾರ್ಜ್ ನ ಬೆಲೆಯನ್ನು ಹೆಚ್ಚಿಗೆ ಮಾಡಿರುವುದರಿಂದ ಜನರು ಜಿಯೋ ಸಿಮ್ ಬಳಸುತ್ತಿರುವವರು ಬೇರೆ ಸಿಮ್ ಗಳಿಗೆ ಪೋರ್ಟ್ ಮಾಡಿಸಿಕೊಳ್ಳುತ್ತಾರೆ ಹಾಗೆ ಮಾಡಿಕೊಳ್ಳಬಾರದು ಎಂಬ ಕಾರಣದಿಂದ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಯಾವ ಲಾಭಗಳು ಇವೆ ಎಂಬುದರ ಬಗ್ಗೆ ನೋಡುವುದಾದರೆ. ಒಂದು ರೂಪಾಯಿಯನ್ನು ನೀವು ರಿಚಾರ್ಜ್ ಮಾಡಿಸಿದರೆ ಮೂವತ್ತು ದಿನ ವ್ಯಾಲಿಡಿಟಿ ಸಿಗುತ್ತದೆ. ಮತ್ತು ನೂರು ಎಂ ಬಿ ಡೇಟಾ ಸಿಗುತ್ತದೆ. ನೂರು ಎಂ ಬಿ ಡೇಟಾ ಮುಗಿದ ಮೇಲೆ ನಿಮಗೆ ಅರವತ್ತನಾಲ್ಕು ಕೆ ಬಿ ಪರ್ ಸೆಕೆಂಡ್ ಹಾಗೆ ಕೆಲಸ ಮಾಡುತ್ತದೆ. ಮೂವತ್ತು ದಿನ ವ್ಯಾಲಿಡಿಟಿ ಮುಗಿದಮೇಲೆ ಸಿಮ್ ಬಂದ್ ಆಗುವುದಿಲ್ಲ.
ಈ ಒಂದು ಯೋಜನೆಯಲ್ಲಿ ನಿಮಗೆ ಯಾವುದೇ ಅನಿಯಮಿತ ಕರೆಗಳ ಸೌಲಭ್ಯ ಇರುವುದಿಲ್ಲ ಮೆಸೇಜಸ್ ಸಿಗುವುದಿಲ್ಲ ಅನಿಯಮಿತ ಇಂಟರ್ನೆಟ್ ಕೂಡ ಸಿಗುವುದಿಲ್ಲ. ಕೇವಲ ವ್ಯಾಲಿಡಿಟಿಗೋಸ್ಕರ ರಿಚಾರ್ಜ್ ಮಾಡುತ್ತೀರಿ ಎಂದರೆ ಇದನ್ನು ಮಾಡಿಸಿಕೊಳ್ಳಬಹುದು. ಕೇವಲ ಇಂಟರ್ನೆಟ್ ಬಳಸುವುದಕ್ಕೆ ಇದು ಉತ್ತಮವಾಗಿದೆ ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಇದಿಷ್ಟು ಜಿಯೋ ಬಿಡುಗಡೆ ಮಾಡಿರುವ ಹೊಸ ಯೋಜನೆಯ ಮಾಹಿತಿಯಾಗಿದೆ ನೀವು ಜಿಯೋ ಸಿಮ್ ಬಳಕೆ ಬಿಡಬಾರದು ಎನ್ನುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನೀವು ಒಂದು ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ನಿಮ್ಮ ಸಿಮ್ ಡೆಡ್ ಆಗುವುದಿಲ್ಲ. ನಿಮಗೆ ಬೇಕಾದಾಗ ರಿಚಾರ್ಜ್ ಮಾಡಿಸಿಕೊಳ್ಳಬಹುದು.