ಇಲ್ಲಿನ ಆಕರ್ಷಕವಾದ ಹಾಗೂ ದಟ್ಟವಾದ ಕಾಡುಗಳು ನೋಡುಗರನ್ನು ಮಂತ್ರ ಮುಗ್ಧ ಗೊಳಿಸುತ್ತವೆ. ಈ ಅದ್ಭುತವಾದ ಗಿರಿ ಧಾಮ ಬೆಟ್ಟಗಳ ರಾಜಕುಮಾರಿ ಎಂದೇ ಕರೆಯಲ್ಪಡುತ್ತದೆ. ಬೆರಗು ಗೊಳಿಸುವ ಕಣಿವೆಗಳು ದಿಗ್ಭ್ರಮೆ ಗೊಳಿಸುತ್ತವೆ. ಮದುವೆಯಾದ ನವ ಜೋಡಿಗಳಿಗೆ ಇದು ಅತ್ಯುತ್ತಮ ಜಾಗ. ಅದೇ ದಕ್ಷಿಣ ಭಾರತದ ಅತ್ಯುತ್ತಮ ಗಿರಿಧಾಮ ಕೊಡೈಕೆನಲ್. ಈ ಲೇಖನದ ಮೂಲಕ ಕೊಡೈಕೆನಲ್ ಎಲ್ಲಿದೆ ಅಲ್ಲಿ ತಲುಪುವ ಮಾರ್ಗ ಹೇಗೆ ಅಲ್ಲಿ ಉಳಿಯುವ ವ್ಯವಸ್ಥೆ ಅಲ್ಲಿ ನೋಡುವ ಜಾಗಗಳು ಹಾಗೂ ಅಲ್ಲಿಯ ಹಲವಾರು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.
ಕೊಡೈಕೆನಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿ ಇರುವ ಅದ್ಭುತವಾದ ಹಾಗೂ ಆಕರ್ಷಕ ಗಿರಿಧಾಮ ಆಗಿದೆ. ತಮಿಳು ಭಾಷೆಯಲ್ಲಿ ಕೊಡೈಕೆನಲ್ ಏನೆಂದರೆ “ಕಾಡಿನ ಕೊಡುಗೆ” ಎಂದು ಅರ್ಥ. ಮಲಯಾಳಂ ಭಾಷೆಯಲ್ಲಿ ಕೊಡೈಕೆನಲ್ ಎಂದರೆ ಬೆಟ್ಟದ ರಾಣಿ ಎಂದರ್ಥ. ಕೊಡೈಕೆನಲ್ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ೪೬೭ km ದೂರದಲ್ಲಿ ಇದ್ದರೆ, ಹುಬ್ಬಳ್ಳಿ ಧಾರವಾಡದಿಂದ ೯೧೦ km ದೂರದಲ್ಲಿದೆ. ಕೊಡೈಕೆನಲ್ ಗೆ ವಿಮಾನದಿಂದ ಹೋಗುವುದಾದರೆ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣ. ಮಧುರೈ ಅಲ್ಲಿಂದ ಸುಮಾರು ೧೨೦ km ದೂರದಲ್ಲಿದೆ. ಕೊಡೈಕೆನಲ್ ಗೆ ಹತ್ತಿರವಾದ ರೈಲ್ವೆ ನಿಲ್ದಾಣ ಅಂದರೆ, ಕೊಡೈ ರೈಲ್ವೆ ನಿಲ್ದಾಣ.ಇದು ಸುಮಾರು ೩೦ km ದೂರದಲ್ಲಿದೆ. ಕೊಡೈಕೆನಲ್ ಗೆ ಭೇಟಿ ಮೀದಳು ಉತ್ತಮ ಸಮಯ ಎಂದರೆ ಅಕ್ಟೋಬರ್ ನಿಂದ ಮೇ ತಿಂಗಳವರೆಗೆ. ಕೊಡೈಕೆನಲ್ ನೋಡಲು ಕನಿಷ್ಠ 2 ದಿನಗಳಾದ್ರೂ ಬೇಕು. ಹಾಗಾದ್ರೆ ಕೊಡೈಕೆನಲ್ ನ 10 ಪ್ರಸಿದ್ಧ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.
ಕೊಡೈಕೆನಲ್ ಸರೋವರ :– ಇದು ಕೊಡೈಕೆನಲ್ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದೆ. ಇದೊಂದು ಕೃತಕವಾದ ಅದ್ಭುತವಾದ ಸರೋವರ. ಇದು ನಕ್ಷತ್ರಾಕಾರದಲ್ಲಿದ್ದು 45 ಹೆಕ್ಟೇರ್ ಅಂದರೆ 60 ಏಕರೆಗಳಷ್ಟು ಜಾಗದಲ್ಲಿ 1863ರಲ್ಲಿ ನಿರ್ಮಿಸಲಾಗಿದೆ. ಇಲ್ಲಿ ದೋಣಿಗಳು ಹಾಗೂ ಬೋಟ್ ಗಳನ್ನು ಬಾಡಿಗೆಗೆ ಪಡೆದುಕೊಂಡು ನಿಮ್ಮ ಇಷ್ಟದವರ ಜೋಯೇ ಆನಂದವಾಗಿ ಸಮಯ ಕಳೆಯಬಹುದು.
ಡಾಲ್ಫಿನ್ ನೋಸ್ :– ಇದು ಕೊಡೈಕೆನಲ್ ಬಸ್ ನಿಲ್ದಾಣದಿಂದ * ಕಿ.ಮೀ ದೂರದಲ್ಲಿದೆ. ಇದು ಒಂದು ಆಕರ್ಷಕ ಬಂಡೆ ಆಗಿದೆ. ಇಲ್ಲಿ ನೀವು ಮೇಲೆ ಹತ್ತಿ ಪಾತಾಳಕ್ಕೆ ನೋಡಿದರೆ 6600 ಮೀಟರ್ ಅಷ್ಟು ಪಾತಾಳ ಅಂದರೆ ಕಂದಕವನ್ನು ಕಾಣಬಹುದು. ಇದೊಂದು ಭಯಾನಕ ದೃಶ್ಯವಾಗಿದೆ. ಆದರೆ ಇಲ್ಲಿ ಭೇಟಿ ಕೊಟ್ಟು ನೋಡುವುದೇ ಒಂದು ಅದ್ಭುತವಾದ ಅನುಭವ.
ಕೋಕರ್ಸ್ ವಾಕ್ :– ಇದು ಕೊಡೈಕೆನಲ್ ನ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿದೇ. ಕೊಡೈಕೆನಲ್ ನ ದಕ್ಷಿಣದ ಕಡೆಗೆ ಇಳಿಜಾರು ಮೆಟ್ಟಿಲುಗಳಲ್ಲಿ ಸುಮಾರು ಒಂದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ನಡೆದರೆ ಕೋಕರ್ಸ್ ವಾಕ್ ತಲುಪಬಹುದು. ಪಶ್ಚಿಮದಲ್ಲಿ ಮೋಡ ಇಲ್ಲದೇ ಇದ್ದಾಗ ಡಾಲ್ಫಿನ್ ನೋಸ್ ಕೂಡ ಸ್ಪಷ್ಟವಾಗಿ ನೋಡಬಹುದು ಮತ್ತು ಪಂಬರ್ ನದಿಯ ಕಾಣಿವೆಯನ್ನು ಸಹ ಟೆಲಿಸ್ಕೋಪ್ ಮೂಲಕ ನೋಡಬಹುದು. ಜೊತೆಗೆ ಪೇರಿಯಾಕೂಲಂ ಪಟ್ಟಣ ಮತ್ತು ಮಥುರೈ ಕೂಡ ಟೆಲಿಸ್ಕೋಪ್ ಮೂಲಕ ನೋಡಬಹುದು.
ಗುಣಾ ಗುಹೆಗಳು :- ಗುಣಾ ಗುಹೆಗಳು ಕಮಲ್ ಹಾಸನ್ ನಟಿಸಿದ ತಮಿಳು ಸಿನೆಮಾ ಗುಣಾ ದಿಂದ ಪ್ರಸಿದ್ಧಿ ಆಗಿವೆ. ಮೊದಲು ಇದನ್ನು ದೇವಿಲ್ಸ್ ಕಿಚನ್ ಅಂದರೆ, 3 ದೈತ್ಯಾಕರ ಬಂಡೆಗಳ ಆಳದಲ್ಲಿ ಬಾವಲಿಗಳಿಂದ ಆವರಿಸಿಕೊಂಡ ಗುಡುಗಳಿಗೆ ಇದು ತುಂಬಾ ಅಪಾಯಕಾರಿ ಜಾಗ ಆಗಿದೆ.
ಸಿಲ್ವರ್ ಕಾಸ್ಕ್ಯಾಡ್ :- ಇದು ಕೊಡೈಕೆನಲ್ ಬಸ್ ನಿಲ್ದಾಣದಿಂದ 8 km ದೂರದಲ್ಲಿದೆ. ಕೊಡೈಕೆನಲ್ ನಿಂದ ಅಗಲವಾಗಿ ಉದ್ದವಾಗಿ ಮತ್ತು ತಿರುವುಗಳಿರುವ ಮತ್ತು ಅಂಕು ಡೊಂಕಾದ ಘಟ್ಟಗಳು ಇರುವ ರಸ್ತೆಯಲ್ಲಿ ಎತ್ತರವಾದ ಜಾಗಗಳಿಂದ ಅಂದರೆ, 5900ಫಿಟ್ ಗಳಿಂದ ಈ ಅದ್ಭುತವಾದ ಜಲಪಾತವನ್ನು ಕಾಣಬಹುದು. ಇಲ್ಲಿಂದ ಈ ನೀರು ಕೊಡೈಕೆನಲ ಸರೋವರಕ್ಕೆ ಸೇರುತ್ತದೆ. ಈ ಅದ್ಭುತವಾದ ಜಲಪಾತದಲ್ಲಿ ಸ್ನಾನ ಮಾಡುವುದೇ ಅದ್ಭುತವಾದ ಅನುಭವ.
ಪೈನ್ ಫಾರೆಸ್ಟ್ :– ಇದು ಕೊಡೈಕೆನಲ್ ನ ಒಂದು ಅತ್ಯಾಕರ್ಷಕ ಪ್ರವಾಸಿ ತಾಣ. ಪೈನ್ ಫಾರೆಸ್ಟ್ ಅನ್ನು ಹಲವಾರು ಹಿಂದಿ ಚಿತ್ರಗಳಲ್ಲಿ ಹಾಗೂ ಹಾಡುಗಳಲ್ಲಿ ನೋಡಿರಬಹುದು. ಇದನ್ನು ಶ್ರೀ ಬ್ರೇನ್ಟ್ ಅವರು ಒಂದು ಶತಮಾನಗಳ ಹಿಂದೆ ಬೆಳೆಸಿದ್ದಾರೆ. ಇದು ಗಿರಿಧಾಮಗಳಲ್ಲಿಯೇ ಅತೀ ಹೆಚ್ಚು ಭೇಟಿ ನೀಡುವ ಸ್ಥಳ ಆಗಿದೆ. ಇಲ್ಲಿನ ಅತ್ಯಾಕರ್ಷಕ ಹಾಗೂ ಎತ್ತರವಾದ ಪೈನ್ ಮರಗಳು ನೋಡುಗರನ್ನು ಚಕಿತ ಗೊಳಿಸುವುದು ಖಚಿತ. ಇಲ್ಲಿ ವಾಕ್ ಮಾಡುವುದು ಒಂದು ರೋಮಾಂಚಕ ಅನುಭವ.
ಪಿಲ್ಲರ್ ರಾಕ್ಸ್ :– ಕೊಡೈಕೆನಲ್ ನ ಅತ್ಯಾಕರ್ಷಕ ಸ್ವರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಇದು ದೂರದಿಂದಲೇ ಜನರಿಗೆ ಭಯ ಹುಟ್ಟಿಸುವ ಕಲ್ಲು ಬಂಡೆಗಳಾಗಿವೆ. ಈ ಸ್ಥಳವು 3 ಬಂಡೆಗಳಿಂದ ಹೆಸರು ಪಡೆದಿದೆ. ಇವು ಉದ್ದವಾಗಿ ಇರುವುದರಿಂದ ಎತ್ತರದಲ್ಲಿ ಸುಮಾರು 400 ಅಡಿ ಆಕಾಶವನ್ನು ಚುಂಬಿಸುವಂತೆ ಕಾಣುತ್ತವೆ. ಆಗಾಗ ಮೊದ ಮುಸುಕಿದ ವಾತಾವರಣ ಇರುವುದರಿಂದ ಈ ಪಿಲ್ಲರ್ ರಾಕ್ಸ್ ಗಳನ್ನು ಸಂಪೂರ್ಣವಾಗಿ ಕಾಣುವುದು ವಿರಳ.
ಬ್ರ್ಯಾನ್ಟ್ ಉದ್ಯಾನವನ :- ಇದು ಬಸ್ ನಿಲ್ದಾಣದಿಂದ ಕೇವಲ ಮುಕ್ಕಾಲು km ದೂರದಲ್ಲಿದೆ. ಇದು ಕೊಡೈಕೆನಲ್ ಸರೋವರದಿಂದ ಪೂರ್ವ ಡಿಕ್ಕಿನಲ್ಲಿದೆ. ಈ ಅತ್ಯಾಕರ್ಷಕ ಉದ್ಯಾನವನ ಸುಮಾರು 20 ಎಕರೆಗೆ ಹರಡಿಕೊಂಡಿದೆ. ಇದೊಂದು ಅದ್ಭುತವಾದ ಬಟಾನಿಕಲ್ ಗಾರ್ಡನ್ ಆಗಿದೆ. ಇವಿಷ್ಟು ಕೊಡೈಕೆನಲ್ ನ ಬಗ್ಗೆ ಈ ಲೇಖನದಲ್ಲಿ ಪುಟ್ಟ ಮಾಹಿತಿ.